ದಾವಣಗೆರೆ:ಒಂದು ಕಾಲ್​ ಮಾಡಿ ಕೊಡುತ್ತೇನೆ ಸ್ವಲ್ಪ ನಿಮ್ಮ ಮೊಬೈಲ್ ಕೊಡಿ ಅಂತಾ ಯಾರಾದರೂ ಕೇಳಿದಾಗ ಸ್ವಲ್ಪವೂ ಯೋಚಿಸದೇ ಮೊಬೈಲ್​ ನೀಡಿದರೆ, ಕೆಲವೊಮ್ಮೆ ಏನಾಗಬಹುದು ಎಂಬುದಕ್ಕೆ ಈ ಘಟನೆ ತಾಜಾ ಉದಾಹರಣೆಯಾಗಿದೆ.
ಒಂದು ಕಾಲ್‌ ಮಾಡಬೇಕು ಅಂತಾ ಮೊಬೈಲ್‌ ಪಡೆದುಕೊಂಡು ವ್ಯಕ್ತಿಯೊಬ್ಬ ಮೊಬೈಲ್‌ನಲ್ಲಿ ಮಾತನಾಡುತ್ತಲೇ ಮೊಬೈಲ್​ ಸಮೇತ ಪರಾರಿಯಾಗಿರುವ ಘಟನೆ ದಾವಣಗೆರೆಯ ಸರ್​ಎಂವಿ ಕಾಲೇಜಿನ ಸಮೀಪದ ಶ್ರೀಗುರು ಕೊಟ್ಟೂರೇಶ್ವರ ಬೇಕರಿಯಲ್ಲಿ ನಡೆದಿದೆ.
ಕಿರಣ್‌ಕುಮಾರ್‌ ಮೊಬೈಲ್‌ ಕಳೆದುಕೊಂಡ ಬೇಕರಿ ಕಾರ್ಮಿಕ. ಅಯ್ಯೋ ಪಾಪ ಅಂತಾ ಮೊಬೈಲ್‌ ಕೊಟ್ಟಿದ್ದೇ ತಪ್ಪಾಯ್ತಾ ಅನ್ನುವಂತಾಗಿದೆ. ಮೊಬೈಲ್‌ ಬ್ಯಾಟರಿ ಲೋ ಆಗಿದೆ. ಕಾಲ್‌ ಮಾಡಬೇಕು ಸ್ವಲ್ಪ ನಿಮ್ಮ ಮೊಬೈಲ್‌ ಕೊಡ್ತಿರಾ ಅಂತಾ ಖತರ್ನಾಕ್​ ಖದೀಮ ಮೊಬೈಲ್​ ಕೇಳಿದ್ದಾನೆ. ಅಯ್ಯೋ ಪಾಪ ಏನೋ ತುಂಬಾ ಮುಖ್ಯವಾದ ವಿಷಯ ಇರಬೇಕು ಅಂದುಕೊಂಡು ಬೇಕರಿ ಕಾರ್ಮಿಕ್‌ ಮೊಬೈಲ್‌ ಕೊಟ್ಟಿದ್ದ.
ಇತ್ತ ಮೊಬೈಲ್‌ನಲ್ಲಿ ಮಾತನಾಡಲು ಆರಂಭಿಸಿದ ಖದೀಮ ಮಾತನಾಡುತ್ತಲೇ ಮೊಬೈಲ್‌ ಸಮೇತ ಪರಾರಿಯಾಗಿದ್ದಾನೆ. ಕಿರಣ್​ ಕುಮಾರ್​ ಇತ್ತೀಚೆಗಷ್ಟೇ ಹೊಸ ಮೊಬೈಲ್‌ ಖರೀದಿಸಿದ್ದ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.(ದಿಗ್ವಿಜಯ ನ್ಯೂಸ್​)
ದಿಲೀಪ್ ಮೊಬೈಲ್​ ಸರ್ವೀಸ್​ ಮಾಡಿದ್ದ ಯುವಕನ ನಿಗೂಢ ಸಾವು: ನಟನ ಭೇಟಿಯ ಬಳಿಕ ನಡೆದಿದ್ದೇನು?

ಭಾರತಕ್ಕೆ ಸಾವಿರ ಒನ್‌ಡೇ ಸಂಭ್ರಮ, ವಿಂಡೀಸ್ ವಿರುದ್ಧದ ಮೊದಲ ಏಕದಿನದಲ್ಲಿ ಮೈಲಿಗಲ್ಲು

ಕ್ವಾರಂಟೈನ್ ಅವಧಿಗಿಂತ ಹೆಚ್ಚು ಕಾಲ ವೈರಸ್ ಸಕ್ರಿಯ!; ಪುರುಷರಲ್ಲಿ 70 ದಿನಕ್ಕಿಂತ ಹೆಚ್ಚು ಕಾಲ ಇರಲಿದೆ ರೂಪಾಂತರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
