ದಾವಣಗೆರೆ:ಜ್ವರದಿಂದ ಬಳಲುತ್ತಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ನ್ಯಾಮತಿ ತಾಲ್ಲೂಕಿನ ಚಟ್ನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಎ.ಎಂ. ಹರ್ಷಿತಾ (15) ಮೃತಪಟ್ಟ ವಿದ್ಯಾರ್ಥಿನಿ. ಈಕೆ ಚಟ್ನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ. ಎರಡು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದಳು. ವಾಂತಿ-ಭೇದಿಯಿಂದ ನರಳಿದ್ದಳು.
ಇದನ್ನೂ ಓದಿರಿ:ವಾರದಲ್ಲಿ ಶೇ.58 ಸೋಂಕು ಹೆಚ್ಚಳ; ಏ.11ಕ್ಕೆ ಶೇ.7.72 ಇದ್ದ ಸೋಂಕು ದರ ಇದೀಗ ಶೇ.12.20ಕ್ಕೆ ಏರಿಕೆ
ಜ್ವರ ಹೆಚ್ಚಾದ ಹಿನ್ನೆಲೆಯಲ್ಲಿ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾಳೆ. ಮೃತ ವಿದ್ಯಾರ್ಥಿನಿಗೆ ಕೋವಿಡ್ ಸೊಂಕು ದೃಢಪಟ್ಟಿಲ್ಲ.
ಬೆಳೆದ ಮಗಳನ್ನು ಕಳೆದುಕೊಂಡ ಕುಟುಂಬದಲ್ಲೀಗ ಆಕ್ರಂದನ ಮುಗಿಲು ಮುಟ್ಟಿದೆ. ಮೃತಳ ಅಂತ್ಯಕ್ರಿಯೆ ಸ್ವಗ್ರಾಮದ ರುದ್ರಭೂಮಿಯಲ್ಲಿ ಇಂದು ನಡೆಯಲಿದೆ.(ದಿಗ್ವಿಜಯ ನ್ಯೂಸ್​)
3 ವರ್ಷದಲ್ಲಿ 18 ಬಾಡಿಗೆ ಮನೆ ಬದಲಾವಣೆ: ಪತ್ನಿಯ ವಿಚಿತ್ರ ವರ್ತನೆಗೆ ಬೇಸತ್ತ ಗಂಡ ಮಾಡಿದ್ದೇನು?

ಜೀವನದಲ್ಲಿ ಯಶಸ್ವಿಯಾಗಲು ನಾಲ್ಕು ಸರಳ ಸೂತ್ರಗಳು

ಕುಂಭಮೇಳ ಯಾತ್ರಿಗಳಿಗೆ 14 ದಿನಗಳ ಕ್ವಾರಂಟೈನ್​ ಕಡ್ಡಾಯ: ನಿಯಮ ಉಲ್ಲಂಘಿಸಿದ್ರೆ ಕಾನೂನು ಕ್ರಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 20 =
Remember me
