ಧಾರವಾಡ:ತಾಲೂಕಿನ ಬಾಡ ಕ್ರಾಸ್ ಬಳಿ ಶನಿವಾರ ಬೆಳ್ಳಂಬೆಳಗ್ಗೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 9ಕ್ಕೇರಿದೆ. ತೀವ್ರ ಗಾಯಗೊಂಡಿದ್ದ ಮನುಶ್ರೀ (16) ನಿನ್ನೆ ರಾತ್ರಿ ಅಸುನೀಗಿದ್ದಾರೆ.
ನಿಗದಿ ಗ್ರಾಮದ ನಿವಾಸಿ ಮನುಶ್ರೀ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಆಕೆಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಭೀಕರ ಅಪಘಾತದಲ್ಲಿ ಅಕ್ಕ-ತಂಗಿ ಇಬ್ಬರೂ ಸಾವಿಗೀಡಾಗಿದ್ದಾರೆ. ನಿನ್ನೆ ಅಪಘಾತದ ಸ್ಥಳದಲ್ಲೇ ಅಕ್ಕ ಮಧುಶ್ರೀ (20) ಕೊನೆಯುಸಿರೆಳೆದಿದ್ದರು.
ಧಾರವಾಡ ತಾಲೂಕಿನ ನಿಗದಿ ಗ್ರಾಮದ ಯುವಕ ಮಂಜುನಾಥ ಮತ್ತು ಸವದತ್ತಿಯ ರೂಪಾ ಅವರ ಮದುವೆ ಶನಿವಾರ ನಿಗದಿಯಾಗಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ವರನ ಸ್ವಗೃಹದ ಬಳಿಯೇ ಮದುವೆ ಅದ್ದೂರಿಯಾಗಿ ನಡೆಯಲಿತ್ತು. ಆದರೆ ಮಳೆಯಿಂದಾಗಿ ಮದುವೆಯನ್ನ ಮನಸೂರ ಬಳಿಯ ಕಲ್ಯಾಣ ಮಂಟಪದಲ್ಲಿ ನಡೆಸಲು ಕುಟುಂಬಸ್ಥರು ಕೊನೇ ಗಳಿಗೆಯಲ್ಲಿ ನಿರ್ಧರಿಸಿದ್ದರು. ಅದರಂತೆ ಶುಕ್ರವಾರ ರಾತ್ರಿ ಮನೆಯಲ್ಲೇ ನಿಶ್ಚಿತಾರ್ಥ ಮುಗಿಸಿದ್ದರು.
ಶನಿವಾರ ಬೆಳಗಿನ ಜಾವ ಎಲ್ಲರೂ ಮದುವೆ ಮಂಟಪಕ್ಕೆ ಹೊರಟಿದ್ದರು. ದಿಬ್ಬಣ ಹೊರಟ ಕ್ರೂಸರ್​ ವಾಹನ ಮಾರ್ಗಮಧ್ಯೆ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದ ಭೀಕರತೆಗೆ ವರನ ಸಂಬಂಧಿಕರಾದ ಮಹೇಶ್ವರಯ್ಯ(11), ಅನನ್ಯ(14), ಹರೀಶ(13), ಶಿಲ್ಪಾ(34), ನೀಲವ್ವ(60), ಮಧುಶ್ರೀ(20), ಶಂಭುಲಿಂಗಯ್ಯ (35) ಅವರು ಸ್ಥಳದಲ್ಲೇ ಮೃತಪಟ್ಟರು. ಸಾವುಬದುಕಿನ ನಡುವೆ ಹೋರಾಡುತ್ತಿದ್ದ ಚನ್ನವ್ವ(45) ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಇದೀಗ ಮನುಶ್ರೀ ಮೃತಪಟ್ಟಿದ್ದು, ಸಾವಿನ ಸಂಖ್ಯೆ 9ಕ್ಕೇರಿಸಿದೆ. ಸುಮಾರು 6 ಜನರ ಸ್ಥಿತಿ ಗಂಭೀರವಾಗಿದೆ. ಮೃತರಲ್ಲಿ ವರನ ಅಕ್ಕನ ಮಕ್ಕಳು ಮತ್ತು ಅಣ್ಣನ ಮಕ್ಕಳಿಬ್ಬರು, ಚಿಕ್ಕಮ್ಮ, ಅತ್ತಿಗೆ ಎಲ್ಲರೂ ಸೇರಿದ್ದಾರೆ.(ದಿಗ್ವಿಜಯ ನ್ಯೂಸ್​)
ಧಾರವಾಡದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ: 8ಕ್ಕೇರಿದ ಮೃತರ ಸಂಖ್ಯೆ, ಕುಟುಂಬಸ್ಥರ ಗೋಳಾಟ ನೋಡಲಾಗ್ತಿಲ್ಲ

ಟಿಮ್​ ಡೇವಿಡ್​ ವಿರುದ್ಧ ಡಿಆರ್​ಎಸ್ ಮನವಿ ಮಾಡದಿದ್ದಕ್ಕೆ ಕಾರಣ ಬಿಚ್ಚಿಟ್ಟ ರಿಷಬ್​ ಪಂತ್!

ನಟ ಅಲ್ಲು ಅರ್ಜುನ್​ ವರದಕ್ಷಿಣೆ ತೆಗೆದುಕೊಂಡಿದ್ದಾರಾ? ಅಚ್ಚರಿಯ ಹೇಳಿಕೆ ನೀಡಿದ ಪತ್ನಿ ಸ್ನೇಹಾ ರೆಡ್ಡಿ ತಂದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − seventeen =
Remember me
