ಧಾರವಾಡ:ವ್ಯಕ್ತಿಯೊಬ್ಬ ಎಸಿಪಿ ಮೇಲೆ ಪೆಟ್ರೋಲ್​ ಎರಚಿರುವ ಘಟನೆ ಧಾರವಾಡದ ಸೂಪರ್​ ಮಾರ್ಕೆಟ್​ನಲ್ಲಿ ಗುರುವಾರ ನಡೆದಿದೆ.
ಅನಧಿಕೃತ ಅಂಗಡಿ ತೆರವು ವೇಳೆ ಪೊಲೀಸರ ಕಾರ್ಯಾಚರಣೆ ವಿರೋಧಿಸಿ ಎಂ.ಎಂ. ಚೌಧರಿ ಎಂಬಾತ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಯತ್ನಿಸಿದ್ದಾನೆ. ಈ ವೇಳೆ ತಡೆಯಲು ಬಂದ ಪೊಲೀಸರ ಮೇಲೆಯೇ ಪೆಟ್ರೋಲ್​ ಎರಚಿದ ಚೌಧರಿ ಅವಾಂತರ ಸೃಷ್ಟಿಸಿದರು.
ಚೌಧರಿ ಅವರು ಸೂಪರ್ ಮಾರ್ಕೆಟ್ ವ್ಯಾಪಾರಿಗಳ ಪರ ನ್ಯಾಯವಾದಿಯಾಗಿದ್ದಾರೆ. ಮಹಾನಗರ ಪಾಲಿಕೆಯಿಂದ ನಿನ್ನೆ ಅನಧಿಕೃತ ಅಂಗಡಿ ತೆರವು ಕಾರ್ಯ ನಡೆಯುತ್ತಿತ್ತು. ತೆರವು ವಿರೋಧಿಸಿ ಚೌಧರಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಡೆಯಲು ಹೋದ ಎಸಿಪಿ ಅನುಷಾ ಮೇಲೆ ಎರಚಿ ಹುಚ್ಚಾಟ ಮೆರೆದಿದ್ದು, ಇದಕ್ಕೆ ಸಂಬಂಧಿಸಿದ ಪೆಟ್ರೋಲ್​ ಹೈಡ್ರಾಮಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ಬಿಗ್​ಬಾಸ್​ಗೆ ರೇಪ್​ ಆರೋಪಿ ಫನ್​ ಬಕೆಟ್​ ಭಾರ್ಗವನ ಎಂಟ್ರಿ? ಆಯೋಜಕರು ಕೊಟ್ಟ ಸ್ಪಷ್ಟನೆ ಹೀಗಿದೆ…

ಹೆಚ್ಚಿನ ಎತ್ತರ ತೋರಿಸಲು PSI ದೇಹದಾರ್ಢ್ಯತೆ ಪರೀಕ್ಷೆಗೆ ವಿಗ್​ ಬಳಕೆ! ಯುವಕರಿಬ್ಬರು ಸಿಕ್ಕಿಬಿದ್ದಿದ್ದೇ ರೋಚಕ

ಮಾಸ್ಟರ್​ ಭೇಟಿಯಾದ ಬ್ಲ್ಯಾಸ್ಟರ್​! ಒಂದೇ ಗಂಟೆಯಲ್ಲಿ 4 ಲಕ್ಷಕ್ಕೂ ಹೆಚ್ಚು ಲೈಕ್ಸ್​, ಫ್ಯಾನ್ಸ್​​ ಕ್ರೇಜಿ ಕಮೆಂಟ್ಸ್​

Sign in to your account
Please enter an answer in digits:11 + nineteen =
Remember me
