ಬೆಂಗಳೂರು:ನಟ ದರ್ಶನ್​ ವಿರುದ್ಧ ಗಂಭೀರ ಆರೋಪಗಳ ಕೇಳಿಬರುತ್ತಿರುವ ಬೆನ್ನಲ್ಲೇ ಇಂದ್ರಜಿತ್​ ಲಂಕೇಶ್​ ಮತ್ತು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಭೇಟಿ ಆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ದರ್ಶನ್​ ಅಭಿಮಾನಿಗಳು ಹರಿಬಿಟ್ಟಿದ್ದು, ದರ್ಶನ್​ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಳ್ಳುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ.
ಇಂದ್ರಜಿತ್​ ಲಂಕೇಶ್​ ಅವರು ಈ ಹಿಂದೆ ಮಂಡ್ಯ ಸಂಸದೆ ಸುಮಲತಾ ಅವರನ್ನು ಟೀಕೆ ಮಾಡಿದ್ದರು. ಎಲ್ಲಿದ್ದೀಯಾ ಸುಮಲತಾ…ಕರೊನಾ ಸಮಯದಲ್ಲಿ ಜನರ ಜತೆ ಇರೋದು ಬಿಟ್ಟು ಎಲ್ಲಿ ಹೋಗಿದ್ದೀಯಾ? ಕರೊನಾ ಸಮಯದಲ್ಲಿ ಮಂಡ್ಯ ಸ್ವಾಭಿಮಾನಿ ಜನ ಮರೆತುಹೋದ್ರಾ ಎಂದು ಇಂದ್ರಜಿತ್​​ ಟೀಕೆ ಮಾಡಿದ್ದರು.
ಇದನ್ನೂ ಓದಿರಿ:ಹುಡುಗಿಯನ್ನು ಕಾಪಾಡಲು ಹೋಗಿ ಬಾವಿಗೆ ಬಿದ್ದ 30 ಮಂದಿ: ನಾಲ್ವರು ಸಾವು, ಮುಂದುವರಿದ ರಕ್ಷಣಾ ಕಾರ್ಯ
ಇದೀಗ ದರ್ಶನ್​ ಹೆಸರಲ್ಲಿ ವಂಚನೆ ಯತ್ನ ಪ್ರಕರಣವು ಯಾವುದೇ ತಾರ್ಕಿಕ ಅಂತ್ಯ ಕಾಣದೇ ರಾಜಿ-ಸಂಧಾನ ಮಾಡಿಕೊಂಡ ಬೆನ್ನಲ್ಲೇ ಪ್ರತ್ಯಕ್ಷರಾದ ಇಂದ್ರಜಿತ್​ ಲಂಕೇಶ್​, ನಟ ದರ್ಶನ್​ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ವಂಚನೆ ಯತ್ನ ಪ್ರಕರಣದಲ್ಲಿ ಕೇಳಿಬಂದಿರುವ ಅರುಣಾ ಕುಮಾರಿಗೆ ದರ್ಶನ್ ಕಿರುಕುಳ ನೀಡಿದ್ದಾರೆಂದು ಆರೋಪಿಸಿದ್ದಾರೆ. ಅಲ್ಲದೆ, ಸಂದೇಶ್​ ನಾಗರಾಜ್​ ಒಡೆತನದ ಹೋಟೆಲ್​ನಲ್ಲಿ ಸಪ್ಲೈಯರ್​ ಮೇಲೆ ಹಲ್ಲೆ ಮಾಡಿದ್ದಾರೆಂಬ ಆರೋಪ ಮಾಡಿದ್ದಾರೆ.
ಇದರೊಂದಿಗೆ ಮೈಸೂರಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಮೈಸೂರು ಪೊಲೀಸ್​ ಠಾಣೆಗಳು ಸೆಟಲ್​ಮೆಂಟ್​ ಅಡ್ಡೆಗಳಾಗುತ್ತಿವೆ. ಓರ್ವ ಸೆಲೆಬ್ರಿಟಿಯಾಗಿ ಠಾಣೆಯ ಮುಂದೆಯೇ ತಲೆ ಕಡಿಯುತ್ತೇನೆ ಅನ್ನುವುದು ಸರಿಯಲ್ಲ. ತನಿಖೆ ನಡೆದರೆ ಸತ್ಯಾಸತ್ಯತೆ ಹೊರಬೀಳಲಿದೆ ಎಂದು ಲಂಕೇಶ್​ ಹಲವು ಗಂಭೀರ ವಿಚಾರಗಳನ್ನು ಕೆದಕಿ ದರ್ಶನ್​ರನ್ನು ಇದೀಗ ಆರೋಪಿ ಸ್ಥಾನದಲ್ಲಿ ಇರಿಸಿದ್ದಾರೆ.
ಲಂಕೇಶ್​ ವಿರುದ್ಧ ದರ್ಶನ್​ ಫ್ಯಾನ್ಸ್​ ಗರಂಲಂಕೇಶ್​ ಆರೋಪಗಳಿಂದ ಕೆಂಡಾಮಂಡಲರಾಗಿರುವ ದರ್ಶನ್​ ಅಭಿಮಾನಿಗಳು ಲಂಕೇಶ್​ ವಿರುದ್ಧ ಗರಂ ಆಗಿದ್ದಾರೆ. ಇದೀಗ ಲಂಕೇಶ್​ ಮತ್ತು ಮಾಜಿ ಸಿಎಂ ಎಚ್​ಡಿಕೆ ಭೇಟಿ ಆಗಿರುವ ಫೋಟೋಗಳನ್ನು ಅಭಿಮಾನಿಗಳು ಟ್ರೋಲ್​ ಮಾಡುತ್ತಿದ್ದಾರೆ. ವೇಟರ್ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪ ಮಾಡಿ, ಇಂದ್ರಜಿತ್ ಎಚ್​ಡಿಕೆ ಭೇಟಿಯಾಗಿದ್ದಾರೆ ಎಂದು ದೂರಿದ್ದಾರೆ. ಪರೋಕ್ಷವಾಗಿ ಇದರ ಹಿಂದೆ ಎಚ್​ಡಿಕೆ ಇದ್ದಾರೆ ಎಂದು ಆರೋಪಿಸಿದ್ದಾರೆ. ಅದಕ್ಕೆ ಕಾರಣ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ದರ್ಶನ್​ ಅವರು ಸುಮಲತಾ ಅಂಬರೀಷ್​ ಪರವಾಗಿ ನಿಂತಿದ್ದರು.
ಇದನ್ನೂ ಓದಿರಿ:ಪೆಟ್ರೋಲ್​-ಡೀಸೆಲ್​ ದರವನ್ನು ಏಕೆ ಕಡಿತಗೊಳಿಸಲಾಗದು?: ನೀತಿ ಆಯೋಗದ ಸಿಇಒ ಹೇಳಿದ್ದು ಹೀಗೆ
ಮತ್ತಷ್ಟು ದಾಖಲೆಗಳು ಬಿಡುಗಡೆ ಮಾಡ್ತಾರಾ?ದರ್ಶನ ವಿರುದ್ಧ ಇಂದು ಇಂದ್ರಜಿತ್ ಲಂಕೇಶ್​ ಇನ್ನಷ್ಟು ದಾಖಲೆಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಬೆಳಗ್ಗೆ 11.30ಕ್ಕೆ ಲಂಕೇಶ್​ ಅವರು ಸುದ್ದಿಗೋಷ್ಠಿ ಕರೆದಿದ್ದಾರೆ. ಹೀಗಾಗಿ ಇಂದಿನ ಸುದ್ದಿಗೋಷ್ಠಿಯ ಮೇಲೆ ಸಾಕಷ್ಟು ದೃಷ್ಟಿ ನೆಟ್ಟಿದೆ. ಪ್ರಕರಣ ಮತ್ತೊಂದು ಹಂತಕ್ಕೆ ಹೋಗುತ್ತಾ ಎಂಬ ಚರ್ಚೆಗಳು ಆರಂಭವಾಗಿದೆ.
ದರ್ಶನ್​ ಸುದ್ದಿಗೊಷ್ಠಿಬೆಂಗಳೂರಿನಲ್ಲಿ ಲಂಕೇಶ್​ ಸುದ್ದಿಗೋಷ್ಠಿ ನಡೆಸಿದರೆ, ಆಷಾಡ ಶುಕ್ರವಾರ ಹಿನ್ನೆಲೆಯಲ್ಲಿ ಮೈಸೂರಿನಲ್ಲಿರುವ ದರ್ಶನ್​ ಸಹ ಇಂದು ಸುದ್ದಿಗೋಷ್ಠಿಯನ್ನು ನಡೆಸಲಿದ್ದಾರೆ. ಹೋಟೆಲ್​ ಸಂದೇಶ್​ ಪ್ರಿನ್ಸ್​ನಲ್ಲಿ ಸುದ್ದಿಗೋಷ್ಠಿ ನಡೆಯಲಿದ್ದು, ತಮ್ಮ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳಿಗೆ ನಟ ದರ್ಶನ್​ ಯಾವ ರೀತಿಯಲ್ಲಿ ಉತ್ತರ ಕೊಡುತ್ತಾರೆಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇದೆ. ಹೀಗಾಗಿ ಇಂದು ದರ್ಶನ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ಆಗುವ ಸಾಧ್ಯತೆ ದಟ್ಟವಾಗಿದೆ.
ಮಗುವಿಗಾಗಿ ಮಗಳನ್ನೇ ಮದುವೆಯಾದನಾ 75ರ ವೃದ್ಧ!? ವೈರಲ್​ ಫೋಟೋ ಕುರಿತ ಅಸಲಿ ಕಹಾನಿ ಇಲ್ಲಿದೆ
ದಯವಿಟ್ಟು ನನಗೆ ಚಿನ್ನ ಬೇಡ: ಮದುವೆಯಲ್ಲಿ ವರದಕ್ಷಿಣೆ ವಿರೋಧಿ ಹೇಳಿಕೆ ನೀಡಿ ಮಾದರಿಯಾದ ಯುವಕ!
ಒಟಿಟಿಗೆ ಕಂಗನಾ: ಟೆಂಪ್ಟೇಶನ್ ಐಲ್ಯಾಂಡ್ ಕಾರ್ಯಕ್ರಮ ನಿರೂಪಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 6 =
Remember me
