ಬೆಂಗಳೂರು:ಜನರ ಉತ್ಸಾಹ, ಒತ್ತಾಸೆ, ಒತ್ತಡ, ಸಚಿವರ ಅಪೇಕ್ಷೆಗೆ ತಲೆಬಾಗಿ ದೊಡ್ಡಬಳ್ಳಾಪುರದಿಂದಲೇ ಜನೋತ್ಸವಕ್ಕೆ ಚಾಲನೆ ನೀಡಲು ನಿರ್ಧರಿಸಲಾಗಿದ್ದು, ಆ.28ರಂದು ಸಮಾವೇಶದ ಉದ್ಘಾಟನಾ ಸಮಾರಂಭ ನೆರವೇರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.
ಆರ್ ಟಿ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ರಾಜ್ಯದ ನಾಲ್ಜೈದು ಸ್ಥಳಗಳಲ್ಲಿ ಸಮಾವೇಶ ನೆರವೇರಿಸಿದ ನಂತರ ದೊಡ್ಡಬಳ್ಳಾಪುರದಲ್ಲಿ ಸಮಾರೋಪ ಆಯೋಜಿಸಲು ಯೋಚಿಸಿದ್ದೆವು.
ಆದರೆ ಎಲ್ಲಿಂದ ಹೆಜ್ಜೆಯಿರಿಸಬೇಕೆಂದಿರುವಿರೋ ಅಲ್ಲಿಂದಲೇ ಆರಂಭವಾಗಲಿ. ಸರ್ಕಾರದ ಮೂರು ವರ್ಷಗಳ ಸಾಧನೆ ಬಗ್ಗೆ ಉತ್ಸವದ ಮೂಲಕ ಸಂಭ್ರಮಿಸಲು ಜನರು ತಯಾರಾಗಿದ್ದಾರೆ. ಎಲ್ಲ ಸಿದ್ಧತೆಗಳು ಮಾಡಲಿದ್ದೇವೆ ಎಂದು ಆ ಭಾಗದ ಜನರು, ಸಚಿವ ಡಾ.ಕೆ.ಸುಧಾಕರ್ ಇನ್ನಿತರರು ಮನವಿ ಮಾಡಿಕೊಂಡ ಕಾರಣ ಆ.28ರಂದು ಜನೋತ್ಸವ ಆಯೋಜನೆಗೆ ಸಮ್ಮತಿಸಲಾಗಿದೆ ಎಂದರು.
ರಾಜ್ಯದ ನಾಲ್ಕೈದು ಸ್ಥಳಗಳಲ್ಲಿ ಸಮಾವೇಶ ಏರ್ಪಡಿಸಲು ಯೋಚಿಸಿದ್ದು, ಸಮಾವೇಶದ ಸಮಾರೋಪ ಸ್ಥಳ ಇನ್ನೂ ಅಂತಿಮವಾಗಿಲ್ಲ. ಕೇಂದ್ರ ನಾಯಕರ ಜತೆ ಇವತ್ತು ಚರ್ಚಿಸಿದ ಬಳಿಕ ಯಾರೆಲ್ಲ ಭಾಗವಹಿಸಲಿದ್ದಾರೆ ಎನ್ನುವುದು ತಿಳಿಯಲಿದೆ ಎಂದು ಸಿಎಂ ಬೊಮ್ಮಾಯಿ‌ ತಿಳಿಸಿದರು.
ಬೆಳ್ಳಂಬೆಳಗ್ಗೆ ಕರ್ತವ್ಯಕ್ಕೆ ಹಾಜರಾದ PSI​ ದುರಂತ ಸಾವು: ಠಾಣೆ ಒಳಗೆ ಕಾಲಿಡುತ್ತಿದ್ದಂತೆ ನಡೆಯಿತು ದುರಂತ

ದುಷ್ಕರ್ವಿುಯಿಂದ ಲೇಖಕ ಸಲ್ಮಾನ್ ರಶ್ದಿಗೆ ಚಾಕು ಇರಿತ: ತುಂಡಾದ ನರಗಳು, ಕಣ್ಣು ಕಳೆದುಕೊಳ್ಳುವ ಸಾಧ್ಯತೆ

ಬಾಲಿವುಡ್​ಗೆ ತಟ್ಟಿದ ಬಾಯ್ಕಾಟ್​ ಬಿಸಿ: ಲಾಲ್​ಸಿಂಗ್​, ರಕ್ಷಾ ಬಂಧನ್​ಗೆ ಪ್ರೇಕ್ಷಕರ ಪೆಟ್ಟು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + ten =
Remember me
