ಬೆಂಗಳೂರು:ಬೆಂಗಳೂರು ಪೊಲೀಸರ ತನಿಖೆ ವೇಳೆ ನಕಲಿ ನಂಬರ್ ಪ್ಲೇಟ್ ಅವಾಂತರ ಬೆಳಕಿಗೆ ಬಂದಿದೆ. ಬೈಕ್​ ಮಾಲೀಕ ಮಾಡಿದ ಎಡವಟ್ಟಿನಿಂದಾಗಿ ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಪೊಲೀಸ್​ ಪ್ರಕರಣ ಎದುರಿಸುವಂತಾಯಿತು. ಕೊನೆಗೂ ಪೊಲೀಸರ ನಿಖರ ತನಿಖೆಯಿಂದ ಸತ್ಯಾಂಶ ಹೊರಬಂದಿದೆ.
ಕಳೆದ ಮೇ ತಿಂಗಳಲ್ಲಿ ಶಾಲಾ ಬಸ್ ಮತ್ತು ಬೈಕ್ ನಡುವೆ ಬನಶಂಕರಿ ಠಾಣಾ ವ್ಯಾಪ್ತಿಯ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಅಪಘಾತ ನಡೆದಿತ್ತು. ಈ ವೇಳೆ ಬಾಲಕಿಯೊಬ್ಬಳು ಮೃತಪಟ್ಟಿದ್ದಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಬನಶಂಕರಿ ಸಂಚಾರಿ ಪೊಲೀಸರು ತನಿಖೆ ಆರಂಭಿಸಿದರು.
ಪೊಲೀಸರ ತನಿಖೆ ವೇಳೆ ಬೈಕ್ ಮಾಲೀಕನ ಮಹಾ ಎಡವಟ್ಟು ಬಯಲಾಗಿದೆ. ಅಸಲಿಗೆ ಬೈಕ್​ ಮಾಲೀಕ ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಬೈಕ್ ಓಡಿಸುತ್ತಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ. ಸ್ಪ್ಲೆಂಡರ್ ಪ್ಲಸ್ ಬೈಕ್​ಗೆ ಕರ್ನಾಟಕ ನೋಂದಣಿ ನಂಬರ್ ಪ್ಲೇಟ್ ಬಳಸಿ ರೈಡಿಂಗ್ ಮಾಡುತ್ತಿದ್ದ. ಅಸಲಿಗೆ ಮಾಲೀಕ ಆ ಬೈಕ್​ ಅನ್ನು ಪೊಲೀಸರ ವಾಹನ ಹರಾಜಿನಲ್ಲಿ ಖರೀದಿ ಮಾಡಿದ್ದ.
ಮಾಲೀಕನ ಹೆಸರು ಅನಂತರಾಮು ಎಂದು. ಬೈಕ್ ಖರೀದಿ ಬಳಿಕ ಬೈಕ್ ದಾಖಲಾತಿಗಳನ್ನು ರೆಡಿ ಮಾಡಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದ. ಆತ ಖರೀದಿಸಿದ್ದು MH-31 BX-8023 ನೋಂದಣಿಯ ಬೈಕ್ ಆಗಿತ್ತು. ಆದರೆ, ಹೊರರಾಜ್ಯದ ಬೈಕ್ ಅನ್ನು ನಗರದಲ್ಲಿ ಓಡಿಸಿದರೆ ಟ್ರಾಫಿಕ್ ಪೊಲೀಸರು ಬೈಕ್ ಹಿಡಿಯಬಹುದು ಎಂದು ನಕಲಿ ನಂಬರ್ ಪ್ಲೇಟ್ ಬಳಕೆ ಮಾಡಿದ್ದ.
MH-31 BX-8023 ನಂಬರ್​ ಪ್ಲೇಟ್​ ತೆಗೆದು KA-04 HE-5475 ನೋಂದಣಿಯ ನಂಬರ್ ಬಳಸಿ ಬೈಕ್ ಸವಾರಿ ಮಾಡುತ್ತಿದ್ದ. ದುರಾದೃಷ್ಟವಶಾತ್ ಮೇ ತಿಂಗಳಲ್ಲಿ ಈ ಬೈಕ್​ನಿಂದ ಅಪಘಾತವಾಗಿತ್ತು. ಅಪಘಾತದಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಓರ್ವ ಬಾಲಕಿ ಮೃತಪಟ್ಟಿದ್ದಳು. ಈ ವೇಳೆ ಬೈಕ್​ ನಂಬರ್​ ಜಾಡು ಹಿಡಿದು ಮಾಲೀಕನನ್ನು ವಿಚಾರಣೆ ನಡೆಸಲಾಗಿತ್ತು. ಆದರೆ, ಅಪಘಾತಕ್ಕೂ ನನಗೂ ಸಂಬಂಧವಿಲ್ಲ ಎಂದಿದ್ದ.
ಇದೀಗ ಅಸಲಿ ಬೈಕ್​ ಮಾಲೀಕ ಸಿಕ್ಕಿಬಿದ್ದಿದ್ದಾನೆ. ಸರಿಯಾದ ಡಾಕ್ಯುಮೆಂಟ್ ಇಲ್ಲದೆ ಮತ್ತು ನಕಲಿ ನಂಬರ್ ಪ್ಲೇಟ್ ಬಳಕೆಯಿಂದ ಎಲ್ಲರಿಗೂ ಸಂಕಷ್ಟ. ನಕಲಿ ನಂಬರ್ ಪ್ಲೇಟ್ ಬಳಸಿ ವಂಚನೆ ಹಿನ್ನಲೆಯಲ್ಲಿ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಮಾಲೀಕನ ವಿರುದ್ಧ ಕೇಸ್ ದಾಖಲಲಾಗಿದೆ. ಇದೇ ರೀತಿ ಕಳೆದ 2 ತಿಂಗಳಲ್ಲಿ 12 ನಕಲಿ ನಂಬರ್ ಪ್ಲೇಟ್ ಪ್ರಕರಣ ಪತ್ತೆಯಾಗಿದೆ. ಅದರಲ್ಲಿ ನಾಲ್ಕು ಪ್ರಕರಣಗಳು ಅಪಘಾತ ಎಸಗಿ ಸಿಕ್ಕಿಬಿದ್ದಿದ್ದಾರೆ.(ದಿಗ್ವಿಜಯ ನ್ಯೂಸ್​)
ನಿಸ್ವಾರ್ಥ ಸೇವಕ ಪ್ರದೀಪ್ ಈಶ್ವರ್​ಗೆ ವಿಜಯರತ್ನ: ವಿಜಯವಾಣಿ, ದಿಗ್ವಿಜಯ ನ್ಯೂಸ್ ವಾಹಿನಿಯ ಪ್ರತಿಷ್ಠಿತ ಗೌರವ ಪ್ರದಾನ

ಟ್ವಿಟರ್​ ಬಳಸಿದ ಸೌದಿ ಅರೇಬಿಯಾ ಮಹಿಳೆಗೆ 34 ವರ್ಷ ಜೈಲು ಶಿಕ್ಷೆ: ಅಷ್ಟಕ್ಕೂ ಆಕೆ ಮಾಡಿದ ಟ್ವೀಟ್​ ಯಾವುದು?

ಹಾಸ್ಟೆಲ್​ಗೆ ನುಗ್ಗಿ ಯುವತಿಯನ್ನು ತಬ್ಬಿದ ಸೆಕ್ಯುರಿಟಿ ಗಾರ್ಡ್​: ಯುವತಿಯರು ದಿಕ್ಕಾಪಾಲು, ಭಯಾನಕ ವಿಡಿಯೋ ವೈರಲ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen − fourteen =
Remember me
