ಜಗದೀಶ ಹೊಂಬಳಿ ಬೆಳಗಾವಿಚಿಕ್ಕೋಡಿ ಲೋಕಸಭಾ ಕ್ಷೇತ್ರ ಒಂದು ಕಾಲದಲ್ಲಿ ಕಾಂಗ್ರೆಸ್ ಭದ್ರಕೋಟೆ. ಈ ಕ್ಷೇತ್ರ ಕೆಲ ಆಸಕ್ತಿಕರ ಇತಿಹಾಸ ಹೊಂದಿದ್ದು, ಈಗ ಮತ್ತೆ ಮುನ್ನೆಲೆಗೆ ಬರುತ್ತಿದೆ. ಮಾಜಿ ಪ್ರಧಾನಿ ದಿ.ಇಂದಿರಾ ಗಾಂಧಿ ಅವರ ನಿಕಟವರ್ತಿಯಾಗಿದ್ದ ಬಿ.ಶಂಕರಾನಂದ ಕ್ಷೇತ್ರದಿಂದ ಸತತ 7 ಬಾರಿ ಸಂಸದರಾಗಿ, ಕೇಂದ್ರದಲ್ಲಿ ಸಚಿವರೂ ಆಗಿದ್ದರು. ಆದರೆ ಮೂರು ದಶಕಗಳ ನಂತರ ‘ಆರ್’ ಅಕ್ಷರದ ಮಹಿಳೆಯೊಬ್ಬರು ಅಸಾಧಾರಣ ರಾಜಕಾರಣಿಯನ್ನು ಸೋಲಿಸಿದ ಆಸಕ್ತಿದಾಯಕ ಕಥೆ ಕ್ಷೇತ್ರಕ್ಕಿದೆ.
1967ರಲ್ಲಿ ಮೊದಲ ಬಾರಿಗೆ ಚುನಾಯಿತರಾಗಿದ್ದ ಶಂಕರಾನಂದ ವಿವಿಧ ಸರ್ಕಾರಗಳಲ್ಲಿ ಎಂಟು ಬಾರಿ ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ, ಕರ್ನಾಟಕದ ಅಂದಿನ ಜನತಾ ದಳದ ನಾಯಕರು, ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಮತ್ತು ಎಚ್.ಡಿ. ದೇವೇಗೌಡರು 1996ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿ.ಶಂಕರಾನಂದರನ್ನು ಸೋಲಿಸಲು ಜ್ಯೋತಿಷಿಯೊಬ್ಬರನ್ನು ಸಂರ್ಪಸಿದರು. ಕನ್ನಡದ ‘ರಾ’ ಅಥವಾ ಇಂಗ್ಲಿಷ್ ಸ್ಪೆಲಿಂಗ್ ‘ಆರ್’ನಿಂದ ಪ್ರಾರಂಭವಾಗುವ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಜ್ಯೋತಿಷಿ ಸಲಹೆ ನೀಡಿದ್ದರು.
ಆ ಅಕ್ಷರದ ಮಹಿಳಾ ಅಭ್ಯರ್ಥಿ ಹುಡುಕುವ ಜವಾಬ್ದಾರಿ ವಹಿಸಿಕೊಂಡಿದ್ದ ಅಂದಿನ ಜನತಾದಳದ ನಿಪ್ಪಾಣಿ ಶಾಸಕ ಸುಭಾಷ ಜೋಶಿ, ಪಕ್ಷದಲ್ಲಿ ಸಕ್ರಿಯರಾಗಿದ್ದ ಕಾನೂನು ಪದವೀಧರೆ ರತ್ನಮಾಲಾ ಸವಣೂರ ಹೆಸರು ಸೂಚಿಸಿದರು. ರತ್ನಮಾಲಾ 1996ರ ಸಾರ್ವತ್ರಿಕ ಚುನಾವಣೆಯಲ್ಲಿ 1.12 ಲಕ್ಷ ಮತಗಳ ಅಂತರದಿಂದ ಶಂಕರಾನಂದರನ್ನು ಸೋಲಿಸಿ ಭವಿಷ್ಯ ನಿಜವಾಗಿಸಿದರು. ಈ ಸೋಲು ಶಂಕರಾನಂದರ ರಾಜಕೀಯ ಜೀವನ ಕೊನೆಗೊಳಿಸಿತು. ರತ್ನಮಾಲಾ ಗುಜ್ರಾಲ್ ಅಧಿಕಾರಾವಧಿಯಲ್ಲಿ ಕೇಂದ್ರ ಸಚಿವರಾದರು. ದುರದೃಷ್ಟವಶಾತ್ 1998ರ ಚುನಾವಣೆಯಲ್ಲಿ ರತ್ನಮಾಲಾಗೆ ಪಕ್ಷ ಟಿಕೆಟ್ ನೀಡಲಿಲ್ಲ.
‘ಆರ್’ ಅಕ್ಷರದ ಹೆಸರಿನವರೇ ಅದೃಷ್ಟಶಾಲಿ:ಎರಡು ದಶಕಗಳಿಂದ ಚುನಾವಣಾ ಫಲಿತಾಂಶಗಳು ‘ಆರ್’ ಹೆಸರಿನ ಅಭ್ಯರ್ಥಿಗಳಿಗೆ ಅದೃಷ್ಟವಿದೆ ಎನ್ನುವುದನ್ನು ಸಾಬೀತುಪಡಿಸಿವೆ. ವಿಜಯಪುರದ ರಮೇಶ ಜಿಗಜಿಣಗಿ 1998ರಿಂದ 2009ರವರೆಗೆ ಮೂರು ಅವಧಿಗೆ ಗೆದ್ದಿದ್ದಾರೆ. 2009ರ ಚುನಾವಣೆಯಲ್ಲಿ ರಮೇಶ ಕತ್ತಿ ಗೆದ್ದಿದ್ದರು. 2014ರಲ್ಲಿ ಅತ್ಯಂತ ಕಡಿಮೆ ಮತಗಳ (3,003) ಅಂತರದಿಂದ ಸೋತರು. ರಮೇಶ ಕತ್ತಿ ಈ ಬಾರಿ ಟಿಕೆಟ್ ಪಡೆಯಲು ಎಲ್ಲ ಪ್ರಯತ್ನಗಳನ್ನು ಮಾಡಿದರೂ ಬಿಜೆಪಿ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರನ್ನೇ ಮುಂದುವರಿಸಿದೆ.
ಕಾಂಗ್ರೆಸ್​ಗೆ ‘ಆರ್’ ಅಕ್ಷರವೇ ಅಲರ್ಜಿ:ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಬಹುತೇಕ ಚುನಾವಣೆಗಳಲ್ಲಿ ‘ಆರ್’ ಅಕ್ಷರದವರ ಎದುರು ಸೋತಿರುವುದರಿಂದ ಅವರಿಗೆ ‘ಆರ್’ ಅಕ್ಷರ ಅಲರ್ಜಿಯಾಗಿಯೇ ಉಳಿದಿದೆ. ಬಿಜೆಪಿ ಮಾಜಿ ಸಂಸದ ರಮೇಶ ಕತ್ತಿ ಅವರಿಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಟಿಕೆಟ್ ನೀಡಲು ಮುಂದಾಗಿದ್ದರು. ಆದರೆ ಕತ್ತಿ ನಿರಾಕರಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ವಿರುದ್ಧ ಕಾಂಗ್ರೆಸ್, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಕಣಕ್ಕಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 15 =
Remember me
