ಚಿತ್ರದುರ್ಗ:ಬುದ್ಧಿಮಾತು ಹೇಳಿದ್ದಕ್ಕೆ ಪಾಪಿ ಮಗನೊಬ್ಬ ತಂದೆಯನ್ನೇ ಕೊಲೆ ಮಾಡಿರುವ ಆತಂಕಕಾರಿ ಘಟನೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಹೋಬಳಿಯ ಮಲ್ಲೂರಹಳ್ಳಿ ಭರಮಸಾಗರ ಕಪ್ಲೆಯಲ್ಲಿ ನಡೆದಿದೆ.
ಗುಂಡ್ಲು ಮಲ್ಲಯ್ಯ (70) ಕೊಲೆಯಾದ ತಂದೆ. ಲೋಕೇಶ್ (28) ಆರೋಪಿ ಮಗ. ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ ಮಗನಿಗೆ ಅದು ತಪ್ಪು ಎಂದು ತಂದೆ ಬುದ್ಧಿಮಾತು ಹೇಳಿದ್ದರು. ನನಗೆ ಬುದ್ಧಿಮಾತು ಹೇಳ್ತಿಯ ಅಂತಾ ಮಗ ಗಲಾಟೆ ತೆಗೆದಿದ್ದ.
ಕೈಕಾಲು ಕಟ್ಟಿ ಹಾಕಿದ್ರೆ ಎಲ್ಲಿಗೂ ಹೋಗೋದಿಲ್ಲ ಅಂತಾ ಮಗನ ಕೈಕಾಲು ಕಟ್ಟಿ ಹಾಕಲು ತಂದೆ ಮುಂದಾಗಿದ್ದರು. ಕೈಕಾಲು ಕಟ್ಟುವಾಗ ತಂದೆಗೆ ಜೋರಾಗಿ ಕಾಲಿನಿಂದ ಒದ್ದ ಪರಿಣಾಮ ಕಲ್ಲಿನ ಮೇಲೆ ಬಿದ್ದು ತಂದೆ ಮೃತಪಟ್ಟಿದ್ದಾರೆ.
ಲೋಕೇಶ್ ವಿರುದ್ಧ ನಾಯಕನಹಟ್ಟಿ, ತಳಕು ಪೊಲೀಸ್ ಠಾಣೆಯಲ್ಲಿ ಸಾಕಷ್ಟು ಕಳ್ಳತನ ಪ್ರಕರಣ ದಾಖಲಾಗಿದ್ದವು. ಮಗನ ಕಳ್ಳತನ ವೃತ್ತಿಯಿಂದ ಪಾಲಕರು ನೊಂದಿದ್ದರು. ಘಟನಾ ಸ್ಥಳಕ್ಕೆ ಎಸ್ಪಿ ಪರಶುರಾಮ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಲೋಕೇಶ್​ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.(ದಿಗ್ವಿಜಯ ನ್ಯೂಸ್​)
ಟೀಮ್​ ಇಂಡಿಯಾ ವಿರುದ್ಧ ಸರಣಿ ಗೆಲುವು: ಜೈ ಶ್ರೀರಾಮ್​ ಎಂದು ಸಂಭ್ರಮಿಸಿದ ದಕ್ಷಿಣ ಆಫ್ರಿಕಾ ಆಟಗಾರ!

ಒಲ್ಲೆ ಎಂದರೂ ಅಣ್ಣನ ಎದುರೇ ‘ಬಾ.. ಮೊದಲಿನಂತೆ ನನ್ನ ಜತೆಗಿರು ಬಾ..’ ಎಂದು ಸೋದರಿಯನ್ನ ಪೀಡಿಸುತ್ತಿದ್ದ… ನಡೆದೇ ಹೋಯ್ತು ಘೋರ ಕೃತ್ಯ

ಪಂಜಾಬ್‌ ರಾಜಕೀಯದಲ್ಲಿ ಪಾಕ್‌ ಪ್ರವೇಶ: ಮಾಜಿ ಸಿಎಂ ಅಮರೀಂದರ್‌ ಸಿಂಗ್‌ ಸ್ಫೋಟಕ ಮಾಹಿತಿ- ಸೋನಿಯಾ ಮೌನ, ಪ್ರಿಯಾಂಕಾ ಗರಂ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
