ಮೈಸೂರು:ನನ್ನ ಮೊಮ್ಮಗಳು ಪುಣ್ಯವಂತೆ. ನಟ ಪುನೀತ್ ರಾಜ್​ಕುಮಾರ್ ಅವರ ನಿಧನಕ್ಕೆ ಬಂದ ರೀತಿಯಲ್ಲಿ ಸಾಕಷ್ಟು ಗಣ್ಯರು ಹಾಗೂ ಜನರು ಸಾವಿನ ದಿನ ಬಂದಿದ್ದರು ಎಂದು ಶಾಸಕ ಜಿ.ಟಿ. ದೇವೇಗೌಡ ಅವರು ಹೇಳಿದರು.
ಮೊಮ್ಮಗಳು ತೀರಿಕೊಂಡ ಬಳಿಕ ಮೊದಲ ಬಾರಿಗೆ ಮೊಮ್ಮಗಳ ಸಾವಿನ ಬಗ್ಗೆ ಜಿ.ಟಿ. ದೇವೇಗೌಡ ಅವರು ಮಾತನಾಡಿದರು. ನನ್ನ ಮೊಮ್ಮಗಳು ಬಹಳ ಚೂಟಿಯಾಗಿದ್ದಳು. ಅವಳಿಗೆ ಕ್ಯಾನ್ಸರ್ ಬಂದಿತ್ತು. ಆದರೆ, ಏಳು ತಿಂಗಳಲ್ಲಿ ಅವಳು ಕ್ಯಾನ್ಸರ್ ಗೆದಿದ್ದಳು. ವೈದ್ಯರ ಕೂಡ ಕ್ಯಾನ್ಸರ್ ಮುಕ್ತ ಎಂದು ಹೇಳಿ ಸಂತೋಷ ಪಟಿದ್ದರು. ಆದರೆ, ಅವಳಿಗೆ ದಿಢೀರನೇ ಆ ಲಕ್ಷಣಗಳು ಕಾಣಿಸಿಕೊಂಡು ಸಾವು ಬಂತು ಎಂದು ಬೇಸರ ವ್ಯಕ್ತಪಡಿಸಿದರು.
ಗೌರಿ ಸಾವಿನ ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ಮುಖಂಡರು ಸಾಂತ್ವನ ಹೇಳಿದ್ದಾರೆ. ಯಾವ ಪಕ್ಷದವರ ಜೊತೆಗೂ ರಾಜಕಾರಣ ಮಾತನಾಡಿಲ್ಲ. ಮಾಜಿ ಸಿಎಂ ಕುಮಾರಸ್ವಾಮಿ‌ ಅವರ ಜೊತೆ ಮಾತು ಬಿಟ್ಟು ಎರಡೂವರೆ ವರ್ಷವಾಗಿತ್ತು. ಅವರು ಕೂಡ ಬಂದು ಸಾಂತ್ವಾನ ಹೇಳಿದ್ದಾರೆ ಎಂದರು.
ನಿಖಿಲ್ ಕುಮಾರಸ್ಚಾಮಿ ನಮ್ಮ ಕುಟುಂಬದ ಸದಸ್ಯ ಇದ್ದಂತೆ. ನನ್ನ ಮಗ ಮತ್ತು ನಿಖಿಲ್ ಆತ್ಮೀಯ ಸ್ನೇಹಿತರು. ಹೀಗಾಗಿ ನಮ್ಮ ನೋವಿನ ಜೊತೆಗೆ ಅವರಿದ್ದಾರೆ. ರಾಜಕಾರಣ ವಿಚಾರವನ್ನು ಮುಂದೆ ಮಾತನಾಡುತ್ತೇನೆ ಎಂದು ಹೇಳಿದರು.(ದಿಗ್ವಿಜಯ ನ್ಯೂಸ್​)
11 ಕೋಟಿ ಮೌಲ್ಯದ ಆಸ್ತಿ ದಾನ ಮಾಡಿ ಲೌಕಿಕ ಜೀವನ ತೊರೆದು ಆಧ್ಯಾತ್ಮಿಕ ಹಾದಿ ಹಿಡಿದ ಆಭರಣ ವ್ಯಾಪಾರಿ ಕುಟುಂಬ!

ಸತ್ತವಳ ಹೆಸರಲ್ಲಿ ಬಂತು ಫೇಸ್​ಬುಕ್ ಫ್ರೆಂಡ್​ ರಿಕ್ವೆಸ್ಟ್​! ಹೆದರಿ ಠಾಣೆಗೆ ದೌಡಾಯಿಸಿದ ಸಂಬಂಧಿಕರು

ನೀಚ ಕೃತ್ಯದಲ್ಲಿ ಭಾಗಿಯಾಗಿ ವಿದ್ಯಾರ್ಥಿಗಳ ಜೀವನ ಹಾಳು ಮಾಡ್ತಿದ್ದ ದೈಹಿಕ ಶಿಕ್ಷಕಿಯ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − seven =
Remember me
