ಗದಗ:ಹಣವೆಂದರೆ ಹೆಣ ಕೂಡ ಬಾಯಿ ಬಿಡುತ್ತದೆ ಅನ್ನುವ ಕಾಲಘಟ್ಟದಲ್ಲಿ ಮಾನವೀಯತೆಯು ಇನ್ನೂ ಮರೆಯಾಗಿಲ್ಲ ಎಂಬುದನ್ನು ಗದಗ ಜಿಲ್ಲೆಯಲ್ಲಿ ನಡೆದ ಘಟನೆಯೊಂದು ಸಾಬೀತು ಮಾಡಿದೆ. ಒಂದಲ್ಲ, ಎರಡಲ್ಲ ಬರೋಬ್ಬರಿ 8 ತೊಲೆ ಬಂಗಾರವನ್ನು ಕಳೆದುಕೊಂಡವರಿಗೆ ಹಿಂತಿರುಗಿಸಿದ ಆಟೋ ಚಾಲ ಪ್ರಾಮಾಣಿಕತೆ ಮೆರೆದಿದ್ದಾರೆ.
ಆಟೋ ಚಾಲಕನ ಹೆಸರು ವೀರಣ್ಣ ಯಾವಗಲ್. ವೀಣಾ ಅವರು ಮರೆತು ಹೋಗಿದ್ದ ಬ್ಯಾಗ್​ನಲ್ಲಿದ್ದ 8 ತೊಲೆ ಬಂಗಾರವನ್ನು ವೀರಣ್ಣ ಹಿಂತಿರುಗಿಸಿ ಜನ ಮೆಚ್ಚುಗೆಯನ್ನು ಗಳಿಸಿದ್ದಾರೆ.
ವಿವರಣೆಗೆ ಬರುವುದಾದರೆ, ಗದಗಿನ ನರಸಾಪುರದಿಂದ ಹತ್ತಿ ಗಂಜಿ ಬಸವೇಶ್ವರ ಸರ್ಕಲ್ ಬಳಿ ವೀಣಾ ಇಳಿದಿದ್ದರು. ಈ ವೇಳೆ ವೀಣಾ ಬ್ಯಾಗ್​ ಅನ್ನು ಆಟೋದಲ್ಲಿ ಮರೆತು ಹೋಗಿದ್ದರು.
ಬಳಿಕ ಬ್ಯಾಗ್​​ ನೆನಪಾಗಿ ಗಾಬರಿಯಿಂದ ಅದೇ ಸ್ಥಳಕ್ಕೆ ಓಡೋಡಿ ಬಂದ ವೀಣಾ ಅವರಿಗೆ ವೀರಣ್ಣ ಬ್ಯಾಗ್​​ ಮರಳಿಸಿದರು. ಎಲ್ಲಿ ಆಟೋ ಚಾಲಕ ಇಲ್ಲ ಅಂದುಬಿಡುತ್ತಾನೋ ಎಂಬ ಅತಂಕದಲ್ಲಿದ್ದ ವೀಣಾಗೆ ಚಾಲಕನ ಪ್ರಾಮಾಣಿಕತೆ ಕಂಡು ಭಾವುಕರಾದರು. ಬಳಿಕ ಧನ್ಯವಾದಗಳನ್ನು ತಿಳಿಸಿದ್ದಾರೆ.
ಪ್ರಾಮಾಣಿಕತೆ ಮೆರೆದ ಆಟೋ ಚಾಲಕ ವೀರಣ್ಣನ ಒಳ್ಳೆಯ ಮನಸ್ಸನ್ನು ಜನರು ಕೊಂಡಾಡಿದ್ದಾರೆ. ಇದೇ ಸಂದರ್ಭದಲ್ಲಿ ಗದಗ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟರ್ ಅವರು ಸನ್ಮಾನ ಮಾಡಿ ಗೌರವಿಸಿದರು.(ದಿಗ್ವಿಜಯ ನ್ಯೂಸ್​)
ಬರೋಬ್ಬರಿ 27 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಬಾವ-ಬಾಮೈದ..!

ವೆಂಕಟ್ ಜತೆಗೆ ಸುದೀಪ್ ಚಿತ್ರ: ಸೆ. 2ರ ಕಿಚ್ಚನ ಹುಟ್ಟುಹಬ್ಬಕ್ಕೆ ಘೋಷಣೆ

ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ: ಎಫ್​ಆರ್​ಪಿ 290 ರೂ.ಗೆ ಹೆಚ್ಚಳ-ಕೇಂದ್ರ ಸಂಪುಟ ನಿರ್ಧಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
