ಗದಗ:ಇಂದು ಬೆಳಗ್ಗೆ ಗದಗಿನಲ್ಲಿ ಪತ್ತೆಯಾದ ಪೊಲೀಸ್​ ಸ್ಟಿಕ್ಕರ್ ಅಂಟಿಸಿದ್ದ ಕಾರಿನಲ್ಲಿ ಮುಂದೆ ಹಾಗೂ ಹಿಂದೆ ಬೇರೆ ಬೇರೆ ನಂಬರ್​ ಇದ್ದಿದ್ದು, ಕೆಲ ಕಾಲ ಗೊಂದಲ ವಾತಾವರಣವನ್ನು ಸೃಷ್ಟಿ ಮಾಡಿತು.
ಗದಗ ನಗರದ ಪಂಡಿತ ಪುಟ್ಟರಾಜ ಗವಾಯಿ ಬಸ್ ನಿಲ್ದಾಣದ ಬಳಿ ನಿಂತಿದ್ದ ಕಾರನ್ನು ನೋಡಿ ಬಹುತೇಕರು ಪೊಲೀಸ್​ ಕಾರು ಅಂದುಕೊಂಡಿದ್ದರು. ಆದರೆ, ಕಾರಿನ ಹಿಂದೆ ಮತ್ತು ಮುಂದೆ ನಂಬರ್​ ನೋಡಿ ಗಾಬರಿಯಾದರು. ಏಕೆಂದರೆ ಎರಡು ನಂಬರ್​ ಬೇರೆ ಬೇರೆ ಆಗಿತ್ತು.
ಇದು ಪೊಲೀಸರ ಗಮನಕ್ಕೆ ಬಂದು ತಕ್ಷಣ ಪರಿಶೀಲಿಸಿದಾಗ ವಾಹನದ ಅಸಲಿಯತ್ತ ಬಯಲಾಗಿದೆ. ಶೂಟಿಂಗ್​ಗೆ ಬಂದ ನಕಲಿ ಪೊಲೀಸ್ ಕಾರನ್ನು ನೋಡಿ ಜನರು ಕೆಲ ಕಾಲ ಗೊಂದಲಕ್ಕೀಡಾಗಿದ್ದಾರೆ. ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶೂಟಿಂಗ್​ಗೆ ಕಾರನ್ನು ಬಳಸಲಾಗಿದೆ.
ಚಿತ್ರದಲ್ಲಿನ ಪೊಲೀಸ್ ಅಧಿಕಾರಿ ಪಾತ್ರಕ್ಕೆ ಬಳಸುತ್ತಿದ್ದ ಬೊಲೆರೊ ಕಾರನ್ನು ರಸ್ತೆಯಲ್ಲಿ ಕಂಡು ಜನರು ತಬ್ಬಿಬ್ಬಾಗಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರಿಂದ ಪರಿಶೀಲನೆ ನಡೆದಿದೆ. ಚಿತ್ರೀಕರಣ ಅನುಮತಿ ಪತ್ರ ಪರಿಶೀಲಿಸಿ ಬಳಿಕ ಕಾರನ್ನು ಬಿಟ್ಟು ಕಳುಹಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಇಡೀ ಆಫ್ಘನ್ ಗೆದ್ದ ತಾಲಿಬಾನ್​ಗೆ ಅದೊಂದು ಪ್ರಾಂತ್ಯ ಮಾತ್ರ ನಡುಕ ಹುಟ್ಟಿಸಿದೆ: ರೋಚಕ ಸ್ಟೋರಿ ಇದು!

ಟಾಲಿವುಡ್​ ಹಾಟ್​ ಬ್ಯೂಟಿ ಪಾಯಲ್​ ರಜಪೂತ್ ಎಡವಟ್ಟು​: ಕೋರ್ಟ್​ ಆದೇಶದ ಮೇರೆಗೆ ದಾಖಲಾಯ್ತು ದೂರು!

ತಾಲಿಬಾನ್​ ಉಗ್ರರ ಅಟ್ಟಹಾಸದ ನಡುವೆಯೇ ಪ್ರತಿಜ್ಞೆ ಮಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
