ಗದಗ:ವಿಚಾರಣಾಧೀನ ಕೈದಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗದಗ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. ರಾಜು ಲಮಾಣಿ (19) ಆತ್ಮಹತ್ಯೆಗೆ ಶರಣಾದ ಯುವಕ.
ಗದಗ ತಾಲೂಕಿನ ಅಡವಿ ಸೋಮಾಪುರ ತಾಂಡಾದ ನಿವಾಸಿ ರಾಜು ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದ. ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಕ್ಸೊ ಪ್ರಕರಣ ಹಿನ್ನಲೆಯಲ್ಲಿ ಯುವಕ ಜೈಲು ಪಾಲಾಗಿದ್ದ. ಕಳೆದ 20 ದಿನಗಳಿಂದ ಜೈಲಿನಲ್ಲಿದ್ದ. ಜೈಲಿಗೆ ಅಪ್ರಾಪ್ತ ಬಾಲಕಿ ಹಾಗೂ ಪೋಷಕರು ಭೇಟಿ ಮಾಡಿದ ಬೆನ್ನಲ್ಲೇ ರಾಜು ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರಾಜು ಆತ್ಮಹತ್ಯೆಗೆ ಜೈಲು ಸಿಬ್ಬಂದಿಯ ನಿರ್ಲಕ್ಷ್ಯ ಎಂದು ಯುವಕನ ಪೋಷಕರು ಆರೋಪಿಸಿದ್ದಾರೆ. ರಾಜು ಗದಗಿನ ಜೆಡಿ ಕಾಲೇಜಿನಲ್ಲಿ ಪಿಯುಸಿ ದ್ವಿತೀಯ ವರ್ಷ ಓದುತ್ತಿದ್ದ. ಅದೇ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಅಪ್ರಾಪ್ತೆಯನ್ನು ಲವ್​ ಮಾಡ್ತಿದ್ದ. ಪ್ರೀತಿಸಿ ಜೈಲು ಪಾಲಾಗಿದ್ದ ಯುವಕ ಇದೀಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಜಾಮೀನು ಸಿಕ್ಕಿಲ್ಲ ಅನ್ನೋ ತಪ್ಪು ಕಲ್ಪನೆಯಿಂದ ರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿದುಬಂದಿದೆ. ನಿನ್ನೆ ಸಾಯಂಕಾಲ ರಾಜುಗೆ ಜಾಮೀನು ಸಿಕ್ಕಿತ್ತು. ಕೋರ್ಟ್ ಸಮಯ ಮುಗಿದಿದ್ದರಿಂದ ಬೇಲ್ ಸಿಕ್ಕಿರುವ ಬಗ್ಗೆ ಕಾರಾಗೃಹಕ್ಕೆ ಮಾಹಿತಿ ಹೋಗಿರಲಿಲ್ಲ. ಜಾಮೀನು ಸಿಕ್ಕಿರುವ ಮಾಹಿತಿ ಇಲ್ಲದಿದ್ದಕ್ಕೆ ಬೇಲ್ ಸಿಕ್ಕಿಲ್ಲ ಅಂದುಕೊಂಡು ಮನನೊಂದುಕೊಂಡು ರಾಜು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಪಿಯುಸಿ ಪರೀಕ್ಷೆ ಇದೆ ಮತ್ತು ರಾಜು ವಿರುದ್ಧ ಸುಳ್ಳು ದೂರು ದಾಖಲು ಮಾಡಿದ್ದಾರೆ ಎಂದು ಆರೋಪಿ ಪರ ವಕೀಲ ಎ.ವಿ. ಮೌಲ್ವಿ ವಾದ ಮಾಡಿದ ಹಿನ್ನೆಲೆಯಲ್ಲಿ ರಾಜುಗೆ ನ್ಯಾಯಾಲಯದಿಂದ ಬೇಲ್ ಸಿಕ್ಕಿತ್ತು. ಇಂದು ಜೈಲಿಂದ ಬೇಲ್ ಮೂಲಕ ಬಿಡುಗಡೆಯಾಗುತ್ತಿದ್ದ. ಆದರೆ, ತಪ್ಪು ಮಾಹಿತಿಯಿಂದ ಇದೀಗ ರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.(ದಿಗ್ವಿಜಯ ನ್ಯೂಸ್​)
ಕಾಲುಗಳಿಲ್ಲದೇ ಹುಟ್ಟಿದ ಈ ವಿದ್ಯಾರ್ಥಿಗೆ ಸ್ನೇಹಿತರೇ ಆತ್ಮಬಲ: ಈ ವಿಡಿಯೋ ನೋಡಿದ್ರೆ ಮನಕಲಕುತ್ತೆ!

ಬಿಜೆಪಿ ಶಾಸಕರ ವಿರುದ್ಧ ಪ್ರತಿಭಟನೆ: ವರದಿ ಮಾಡಿದ ಪತ್ರಕರ್ತ ಸೇರಿ 8 ಮಂದಿಯ ಬಟ್ಟೆ ಬಿಚ್ಚಿಸಿದ ಪೊಲೀಸರು!

ಪೊಲೀಸ್​ ತಪಾಸಣೆ ವೇಳೆ ಓಡಿ ಹೋಗಲು ಯತ್ನಿಸಿ ರೈಲಿಗೆ ಸಿಲುಕಿ ರೌಡಿಶೀಟರ್ ದುರ್ಮರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + three =
Remember me
