ಬೆಂಗಳೂರು:ಯೂಕ್ರೇನ್​ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಗುಂಡಿನ ದಾಳಿಗೆ ಬಲಿಯಾದ ಕನ್ನಡಿಗೆ ನವೀನ್ ಗ್ಯಾನಗೌಡರ​ ಸಾವಿಗೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಸಂತಾಪ ಸೂಚಿಸಿದ್ದಾರೆ.
ಯೂಕ್ರೇನ್​ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕರ್ನಾಟಕದ ವಿದ್ಯಾರ್ಥಿ ನವೀನ್​ ನಿಧನದಿಂದ ದುಃಖವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆಂದು ಗೆಹಲೋತ್ ಅವರು ಟ್ವೀಟ್​ ಮೂಲಕ ಕನ್ನಡದಲ್ಲೇ ಸಂತಾಪ ಸೂಚಿಸಿದ್ದಾರೆ. ಅಲ್ಲದೆ, ನವೀನ್​ ಕುಟುಂಬಕ್ಕೆ ಕರೆ ಮಾಡಿ ಸಾಂತ್ವಾನ ಹೇಳಿರುವುದಾಗಿ ರಾಜಭವನ ಟ್ವೀಟ್​ ಮಾಡಿದೆ.
ಉಕ್ರೇನ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕರ್ನಾಟಕದ ವಿದ್ಯಾರ್ಥಿ ನವೀನ್ ನಿಧನದಿಂದ ದುಃಖವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
— Thaawarchand Gehlot (@TCGEHLOT)March 1, 2022

ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಲ್ಹೋಟ್ ಉಕ್ರೇನ್‌ನಲ್ಲಿ ನಿಧನರಾದ ಶ್ರೀ ನವೀನ್ ಅದಕ್ಕೆ ಸಂತಾಪ ಸೂಚಿಸಿದ್ದು, ಅವರ ಕುಟುಂಬ ಸದಸ್ಯರಿಗೆ ಕರೆ ಮಾಡಿ ಸಾಂತ್ವನ ಹೇಳಿದರು.
— Thaawarchand Gehlot Office (@TcGehlotOffice)March 1, 2022

ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ ಗ್ಯಾನಗೌಡರ, ಕಾರ್ಕಿವ್ ನಗರದಲ್ಲಿ ನವೀನ್​ ಎಂಬಿಬಿಎಸ್ ಓದುತ್ತಿದ್ದ. ಯೂಕ್ರೇನ್​ ಮೇಲೆ ರಷ್ಯಾ ಸೇನಾಪಡೆ ಯುದ್ಧ ಮುಂದುವರಿಸಿದ್ದು, ನಿನ್ನೆ ನಡೆದ ದಾಳಿಯಲ್ಲಿ ನವೀನ್​ ಮೃತಪಟ್ಟಿದ್ದಾರೆ.
ನಿನ್ನೆ ನಡೆದ ಘಟನೆಯನ್ನು ಮೃತ ನವೀನ್​ ಸ್ನೇಹಿತ ಆರ್​. ಗೌತಮ್​ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅಗತ್ಯ ವಸ್ತುಗಳನ್ನು ಖರೀದಿಸಲು ನವೀನ್​ ಜತೆ ನಾವೆಲ್ಲ ತೆರಳಿದ್ದೆವು. ಆ ಕ್ಷಣದಲ್ಲಿ ದಿಢೀರನೇ ಫೈರಿಂಗ್​ ಶುರುವಾಯಿತು. ನಮ್ಮನ್ನು ನಾವು ಕಾಪಾಡಿಕೊಳ್ಳಲು ಓಡೋಡಿ ಬರುತ್ತಿದ್ದೆವು. ಅಷ್ಟರಲ್ಲಿ ನವೀನ್​ ಮೇಲೆ ಗುಂಡಿನ ದಾಳಿ ಆಯಿತು. ಆತ ಸ್ಥಳದಲ್ಲೇ ಮೃತಪಟ್ಟ. ನಾವು ನವೀನ್​ ಸಮೀಪಕ್ಕೆ​ ತೆರಳಲು ಪ್ರಯತ್ನಿಸಿದೆವು. ಆದರೆ, ಗುಂಡಿನ ದಾಳಿ ಮುಂದುವರಿದರಿಂದ ನವೀನ್​ ಬಳಿ ತಲುಪಲ ನಮಗೆ ಸಾಧ್ಯವಾಗಲಿಲ್ಲ ಎಂದು ಗೌತಮ್​ ತಮ್ಮ ಅಸಹಾಯಕತೆ ಜತೆ ಮುಂದೇನಾಗುತ್ತೋ ಎಂಬ ಭಯವನ್ನು ವ್ಯಕ್ತಪಡಿಸಿದ್ದಾರೆ.
ಯೂಕ್ರೇನ್​ ಮೇಲೆ ರಷ್ಯಾ ಯುದ್ಧ ಘೋಷಣೆ ಮಾಡಿದಾಗಿನಿಂದ ಮಗ ಹುಟ್ಟೂರಿಗೆ ಸುರಕ್ಷಿತವಾಗಿ ಬಂದ್ರೆ ಸಾಕಪ್ಪ ಎಂದು ಪಾಕಲರು-ಕುಟುಂಬಸ್ಥರು ಕಣ್ಣೀರು ಹಾಕುತ್ತಾ ದೇವರ ಬಳಿ ಲೆಕ್ಕವಿಲ್ಲದಷ್ಟು ಬಾರಿ ಬೇಡಿಕೊಂಡಿದ್ದರು. ಆದರೂ ಮಗ ಬದುಕಲಿಲ್ಲ ಎಂಬ ಸುದ್ದಿ ಕೇಳಿ ನವೀನ್​ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಅಂಗಾಂಗ ದಾನ ಮಾಡಿ ಸಾರ್ಥಕತೆ ಮರೆದ ಕಾರ್ಮಿಕ ಕುಟುಂಬ: ಸಚಿವ ಸುಧಾಕರ್ ಶ್ಲಾಘನೆ!

ಮುಂದೇನೋ ಕಾದಿದೆ ಎಂದರ್ಥ… ಪುತಿನ್​ ಕುಟುಂಬದ ರಹಸ್ಯ ಮಾಹಿತಿ ಬಿಚ್ಚಿಟ್ಟ ರಷ್ಯಾ ಪ್ರಾಧ್ಯಾಪಕ

ವೇಶ್ಯೆ ಪಾತ್ರಕ್ಕೆ ಆಲಿಯಾ ಪಡೆದ ಸಂಭಾವನೆ ಕೇಳಿದ್ರೆ ಹುಬ್ಬೇರಿಸುತ್ತೀರಾ! ಅಜಯ್​ ದೇವಗನ್ನೂ ಹಿಂದೆ ಬಿದ್ದಿಲ್ಲ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − five =
Remember me
