ಹಾಸನ:ಪತಿಯನ್ನು ಕೊಲೆ ಮಾಡಿ ನಂತರ ಸಹಜ ಸಾವು ಎಂದು ನಾಟಕವಾಡಿದ್ದ ಖತರ್ನಾಕ್​ ಪತ್ನಿಯನ್ನು ಹೊಳೆನರಸೀಪುರದ ಹಳ್ಳಿ ಮೈಸೂರು ಪೊಲೀಸರು ಬಂಧಿಸಿದ್ದಾರೆ.
ಫೆಬ್ರವರಿ 27ರ ರಾತ್ರಿ ಸುಕನ್ಯ ಎಂಬಾಕೆ ಕುಡಿದು ಬಂದ ತನ್ನ ಪತಿ ರೇವಣ್ಣನ ಜತೆ ಜಗಳಕ್ಕಿಳಿದಿದ್ದಳು. ಜಗಳ ತಾರಕ್ಕೇರಿದ ಬಳಿಕ ಪತಿಯ ಮರ್ಮಾಂಗಕ್ಕೆ ಒದ್ದು ಸಾಯಿಸಿದ್ದಳು. ಆದರೆ, ಬೆಳಗ್ಗೆ ತನ್ನ ಹೃದಯಾಘಾತದಿಂದ ಸಾವಿಗೀಡಾಗಿದ್ದಾನೆಂದು ನಾಟಕ ಆಡಿದ್ದಳು.
ಇವರಿಬ್ಬರ ಜಗಳಕ್ಕೆ ಇಬ್ಬರಿಗೂ ಇದ್ದ ಅಕ್ರಮ ಸಂಬಂಧವೂ ಕಾರಣವಾಗಿದೆ ಎಂದು ಹೇಳಲಾಗಿದೆ. ಸುಕನ್ಯಾ ಮತ್ತು ರೇವಣ್ಣ 8 ವರ್ಷದ ಹಿಂದೆ ಪ್ರೀತಿಸಿ ಮದುವೆ ಆಗಿದ್ದರು. ಆದರೆ ರೇವಣ್ಣ ಇನ್ನೊಂದು ಮಹಿಳೆ ಜತೆ ಅಕ್ರಮ ಸಂಬಂಧ ಹೊಂದಿದ್ದ ಮತ್ತು ಇದೆ ಕಾರಣಕ್ಕೆ ಕೆಲ ವರ್ಷ ಮನೆ ಬಿಟ್ಟು ಹೋಗಿದ್ದ. ಈ ವೇಳೆ ರೇವಣ್ಣ ಪತ್ನಿ ಕೂಡ ಇನ್ನೊರ್ವನ ಜತೆ ಅಕ್ರಮ ಸಂಬಂಧ ಹೊಂದಿದ್ದಳು.
ತುಂಬಾ ದಿನಗಳ ಬಳಿಕ ರೇವಣ್ಣ ಮರಳಿ ಮನೆಗೆ ಬಂದಾಗ ಸುಕನ್ಯ ರೇವಣ್ಣ ನಡುವೆ ಗಲಾಟೆ ನಡೆದಿದೆ. ಈ ವೇಳೆ ಆತನ ಮರ್ಮಾಂಗಕ್ಕೆ ಒದ್ದಿದ್ದರಿಂದ ರೇವಣ್ಣನ ಮೃತಪಟ್ಟಿದ್ದಾನೆ. ಈ ಸಂಬಂಧ ಹೊಳೆನರಸೀಪುರದ ಹಳ್ಳಿ ಮೈಸೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ಹಾಟ್​ ವಿಡಿಯೋ ಹರಿಬಿಟ್ಟು ಅಭಿಮಾನಿ ಮನಸ್ಸಿಗೆ ನೋವುಂಟು ಮಾಡಿದ ಮಲಯಾಳಿ ಬ್ಯೂಟಿ ಮೀರಾ ಜಾಸ್ಮಿನ್!

ಲೆಕ್ಚರ್ ಹುದ್ದೆಗೆ 40 ಲಕ್ಷ ರೂಪಾಯಿ ಡೀಲ್!? ಮಾ.12ರಿಂದ 16ವರೆಗೆ ನೇಮಕಕ್ಕೆ ಪರೀಕ್ಷೆ

ಸಿದ್ದು, ಎಚ್​ಡಿಕೆ ಪರ್ಸೆಂಟೇಜ್ ಕದನ; ಬಿಡದಿಯ ಈಗಲ್​ಟನ್ ರೆಸಾರ್ಟ್ ಜಮೀನು ವಿವಾದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
