ಹಾವೇರಿ:ಪಾಪ ಅವಳು ಆ ಇಬ್ಬರಿಂದಲೂ ಮೋಸಕ್ಕೆ ಒಳಗಾದ ಮುಗ್ಧ ಮಹಿಳೆ. ಗಂಡು ದಿಕ್ಕಿಲ್ಲದೆ ಪ್ರತಿದಿನ ಕಷ್ಟಪಡುತ್ತಿದ್ದವಳಿಗೆ ಮುಗ್ಧ ಯುವಕನೊಬ್ಬ ಆಸರೆಯಾಗಿ ಬಂದಿದ್ದ. ಇನ್ನೂ ಮದುವೆಯಾಗದ ಆ ಯುವಕ ಅವಳನ್ನು ಚನ್ನಾಗಿ ನೋಡಿಕೊಳ್ಳುತ್ತಿದ್ದ. ಪಾಪ ಮುಗ್ಧೆ ಅಂತಾ ಜತೆಯಾಗಿ ಇದ್ದಿದ್ದೆ, ಆ ಯುವಕನ ಪ್ರಾಣಕ್ಕೆ ಕುತ್ತಾಗಿದೆ. ಕಿರುಕುಳ ಕೊಡುತ್ತಾನೆ ಅಂತಾ ಕತ್ತು ಹಿಸುಕಿ ಅದೇ ಮುಗ್ಧೆ ಮರ್ಡರ್ ಮಾಡಿದ್ದಾಳೆ. ಅಲ್ಲದೆ, ಉಪಾಯ ಮಾಡಿ ಹೆದ್ದಾರಿಯಲ್ಲಿ ಹತ್ಯೆಗೈದು ಎಸ್ಕೇಪ್ ಆಗಿದ್ದ ಕೊಲೆಪಾತಕಿ ಕೊನೆಗೂ ಜೈಲು ಸೇರಿದ್ದಾಳೆ.
13ನೇ ವಯಸ್ಸಲ್ಲೆ ಎರಡು ಮದುವೆಯಾಗಿದ್ದ ಶೋಬಾ ಅಲಿಯಾಸ್ ಯಲ್ಲವ್ವ ಓರ್ವ ಪಾಪದ ಹೆಣ್ಣು ಮಗಳು. ದುರಾದೃಷ್ಟಕ್ಕೆ ಆ ಇಬ್ಬರು ಗಂಡಂದಿರು ಇವಳ ಜೊತೆ ಸಂಸಾರ ಮಾಡದೆ ದೂರವಾಗ್ತಾರೆ. ಅಲ್ಲಿ-ಇಲ್ಲಿ ಕಂಡವರ ಮನೆಗೆಲಸ ಮಾಡಿಕೊಂಡಿದ್ದವಳ ಕಷ್ಟಕ್ಕೆ ಮರುಗಿದ್ದು, 28 ವರ್ಷದ ನಾಗರಾಜ್ ಮಣ್ಣಿಕೇರಿ. ಆದರೆ, ಸಂಕಷ್ಟದಲ್ಲಿ ಕೈ ಹಿಡಿದವನನ್ನೇ ಶೋಭಾ ಕತ್ತು ಹಿಸಿಕಿ ಕೊಂದು ಹಾಕಿದ್ದಾಳೆ. ವಿವಾಹಿತಳ ಸಂಗ ಮಾಡಿದ್ದ ನಾಗರಾಜ್ ಮಣ್ಣಿಕೇರಿ, ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಹತ್ಯೆಯಾಗಿದ್ದಾನೆ. ಕಂಠಪೂರ್ತಿ ಕೂಡಿಸಿ ಲಾರಿಯೊಳಗೆ ವೆಲ್​ನಿಂದ ಬಿಗಿದ್ದು ಶೋಭಾ ಕೊಲೆ ಮಾಡಿದ್ದಾಳೆ.
ಸುಮಾರು ನಾಲ್ಕೈದು ವರ್ಷಗಳ ಹಿಂದೆ ಇವರಿಬ್ಬರಿಗೂ ಧಾರವಾಡದಲ್ಲಿ ಪರಿಚಯ ಆಗುತ್ತದೆ. ನಂತರ ಪರಸ್ಪರ ಪ್ರೀತಿ ಮಾಡುತ್ತಿದ್ದ ನಾಗರಾಜ್ ಮತ್ತು ಶೋಭಾ ಒಟ್ಟಿಗೆ ಇರುತ್ತಿದ್ದರು. ಆದರೆ, ಇನ್ನೂ ಅವಿವಾಹಿತ ಆಗಿದ್ದ ನಾಗರಾಜ್​ಗೆ ಪಂಚಮಿ ಹಬ್ಬ ಮುಗಿದ ಬಳಿಕ ಮದುವೆ ಮಾಡಲು ಕುಟುಂಬದಲ್ಲಿ ಪ್ಲಾನ್ ಮಾಡಿದ್ದರು. ಪಾಪ ಈ ಮ್ಯಾಟರ್ ಅವಳಿಗೂ ಗೊತ್ತಾಗಿದೆ. ಆದರೆ, ಇದೆ ಕೊಲೆಗೆ ಕಾರಣ ಅಂತಾ ಮೇಲ್ನೋಟಕ್ಕೆ ತಿಳಿದುಬಂದಿದೆ.
ಇನ್ನೂ ಒಂದು ಮಾಹಿತಿ ಪ್ರಕಾರ ಮೃತ ನಾಗರಾಜ್ ತುಂಬಾ ಕುಡಿಯುತ್ತಿದ್ದನಂತೆ. ಹಾಗೇ ದೈಹಿಕ ಸುಖಕ್ಕಾಗಿ ಎಲ್ಲೆಂದರಲ್ಲಿ ಪೀಡಿಸುತ್ತಿದ್ದನಂತೆ. ಇದರ ಜೊತೆಗೆ ದುಡಿಯದೆ ಇವಳನ್ನೆ ಬೈಯೋದು ಹಣ ಕದಿಯೋದು ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ. ನಾನು ಮದುವೆ ಆದರೂ ನಿನ್ನ ಬಿಡುವುದಿಲ್ಲಾ ಎಂದು ಅವಾಜ್ ಕೂಡಾ ಹಾಕಿದ್ದ ಎನ್ನಲಾಗಿದೆ. ಹೀಗಾಗಿ ಅವಳಿಗೆ ಇವನ ಜತೆ ಇರುವುದು ರೋಸಿ ಹೊಗಿತ್ತಂತೆ. ಆ ಕಾರಣದಿಂದ ದುಡಿಯೊಕೆ ಹಾಸನಕ್ಕೆ ಹೋಗೊಣ ಬಾ ಅಂತಾ ಹುಬ್ಬಳ್ಳಿಯಿಂದ ಕರೆದುಕೊಂಡು ಲಾರಿ ಹತ್ತಿಕೊಂಡು ಬಂದಿದ್ದಾಳೆ. ಗಾಡಿಯಲ್ಲೆ ಬೇರೊಬ್ಬರಿ ಕುಡಿಸಿ ಎಚ್ಚರ ತಪ್ಪುವ ಹಾಗೇ ಮಾಡಿ ನಂತರ ಕತ್ತು ಹಿಸುಕಿ ಸಾಯಿಸಿದ್ದಾಳೆ. ನಂತರ ಲಾರಿ ಚಾಲಕನ ಸಹಾಯದಿಂದ ಮೃತ ದೇಹ ಹೆದ್ದಾರಿಯಲ್ಲಿ ಬಿಸಾಡಿ ತಾನು ರಾತ್ರೊರಾತ್ರಿ ಎಸ್ಕೇಪ್ ಆಗಿದ್ದಳು ಎಂಬ ಮಾಹಿತಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ವಿಷಯ ತಿಳಿದು ಡಿವೈಎಸ್ಪಿ ಶಂಕರ್ ಮಾರಿಹಾಳ ನೇತೃತ್ವದಲ್ಲಿ ತನಿಖೆ ಕೈಗೊಂಡು ಆರೋಪಿ ಶೋಭಾಳನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇನ್ನು ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)
ದುಬೈನಲ್ಲಿ ಐಷಾರಾಮಿ ಜೀವನ: ದಿಢೀರ್ ದಿವಾಳಿಯಾಗಿ ಬೀದಿ ಸುತ್ತುತ್ತಿದ್ದ ಕೇರಳ ಮಹಿಳೆ ಇದೀಗ ಸುರಕ್ಷಿತ!

ಧನಂಜಯ-ರಚಿತಾ ರಾಮ್ ಅಭಿನಯದ ಮಾನ್ಸೂನ್ ರಾಗ ಟೀಸರ್ ಬಂತು

ಅಂಗಾಂಗ ದಾನ ಮಾಡುವುದಾಗಿ ಸಿಎಂ ಬೊಮ್ಮಾಯಿ ಘೋಷಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 15 =
Remember me
