ರಾಮನಗರ:ಮೊದಲು ನಮ್ಮ ಕನ್ನಡ ತಾಯಿ ಉಳಿಸಿಕೊಂಡರೆ, ಭಾರತ ಮಾತೆಯನ್ನು ಉಳಿಸಿಕೊಳ್ಳಬಹುದು ಎನ್ನುವ ಮೂಲಕ ಮೇಕೆದಾಟು ವಿಚಾರದಲ್ಲಿ ನಾನು ಭಾರತದ ಪರ ಎಂದಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ತಿರುಗೇಟು ನೀಡಿದರು.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೇಕೆದಾಟು ವಿಚಾರವಾಗಿ ರಾಷ್ಟ್ರಪತಿಗಳು ಹಾಗೂ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೇವೆ. ಅಲ್ಲದೆ, ಮುಖ್ಯಮಂತ್ರಿಗಳ ಬಳಿ ಸಮಯ ಕೇಳಿದ್ದು, ಸುಧೀರ್ಘವಾಗಿ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.
ಸರ್ಕಾರ ಹಾಗೂ ನೀರಾವರಿ ಮಂತ್ರಿಗಳು ಯೋಜನೆ ಪ್ರಾರಂಭ ಮಾಡಲು ಯಾರ ಅಪ್ಪಣೆ ಬೇಕಿಲ್ಲ ಎಂದು ಹೇಳಿದ್ದಾರೆ. ಈಗಾಗಲೇ ಸಮಯವನ್ನ ವ್ಯರ್ಥ ಮಾಡಲಾಗಿದೆ. ಆದಷ್ಟು ಈ ಬಗ್ಗೆ ತಾರ್ಕಿಕ ಅಂತ್ಯಕ್ಕೆ ಬರಬೇಕಿದೆ ಎಂದು ತಿಳಿಸಿದರು.
ಮೇಕೆದಾಟು ವಿಚಾರವಾಗಿ ಸಿ.ಟಿ ರವಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಸಿ.ಟಿ.ರವಿ ಅವರು ಈಗಾಗಲೇ ರಾಷ್ಟ್ರ ಘಟಕದ ಪ್ರಧಾನ ಕಾರ್ಯದರ್ಶಿ ಆದ ಮೇಲೆ ಭಾರತೀಯರಾಗಿ ಕನ್ನಡ ಮರೆತಿದ್ದಾರೆ. ನಮ್ಮ ಕನ್ನಡ ತಾಯಿ ಉಳಿಸಿಕೊಂಡರೆ ಭಾರತದ ತಾಯಿ ಉಳಿಸಿಕೊಳ್ಳಬಹುದು. ಅವರು ಮೊದಲು ಇದನ್ನು ಅರಿತುಕೊಳ್ಳಬೇಕು ಎಂದು ತಿರುಗೇಟು ನೀಡಿದರು.
ಈ ವಾರದಲ್ಲಿ ಸಿಎಂ ಅವರನ್ನು ನಮ್ಮ ಪಕ್ಷದ ನಿಯೋಗದಿಂದ ಮೇಕೆದಾಟು ವಿಚಾರವಾಗಿ ಭೇಟಿ ಮಾಡಲಿದ್ದೇವೆ ಎಂದು ರಾಮನಗರದಲ್ಲಿ ಮಾಜಿ ಸಿ.ಎಂ ಹೆಚ್.ಡಿ.ಕುಮಾರಸ್ವಾಮಿ ಮಾಧ್ಯಮಗಳಿಗೆ ತಿಳಿಸಿದರು.(ದಿಗ್ವಿಜಯ ನ್ಯೂಸ್​)
‘ಮೋದಿ ಅಂಕಲ್​, ನೀವೆಂದ್ರೆ ತುಂಬಾ ಇಷ್ಟ… ಪ್ಲೀಸ್​ ಮೀಟ್​ ಆಗ್ತೀರಾ? ನೀವು ರಾಷ್ಟ್ರಪತಿ ಆಗೋದು ಯಾವಾಗ?’

ನಾಸಾದಿಂದ ಬಂದಿದೆ ಆಘಾತಕಾರಿ ವರದಿ: ಕರ್ನಾಟಕದ ಊರು ಸೇರಿದಂತೆ ಭಾರತದ 12 ನಗರ ಮುಳುಗಡೆ

ಬಿಗ್​ ಬಿ ಕುಟುಂಬಕ್ಕೂ ಎದುರಾಯ್ತಾ ಆರ್ಥಿಕ ಸಂಕಷ್ಟ? ಐಷಾರಾಮಿ ಬಂಗಲೆ ಮಾರಿದ ಅಭಿಷೇಕ್​ ಬಚ್ಚನ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 17 =
Remember me
