ಹಾಸನ:ಮಾಜಿ ಸಿಎಂ ಹಾಗೂ ಸಹೋದರ ಎಚ್​.ಡಿ. ಕುಮಾರಸ್ವಾಮಿ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಸಂಸದೆ ಸುಮಲತಾ ಅಂಬರೀಷ್​ ಅವರಿಗೆ ಮಾಜಿ ಸಚಿವ ಎಚ್​.ಡಿ. ರೇವಣ್ಣ ಅವರು ತಿರುಗೇಟು ನೀಡಿದ್ದಾರೆ.
ಹಾಸನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಡವರಪರ ಸಿಎಂ ಅಂತಾ ಯಾರಾದ್ರೂ ಇದ್ರೆ ಅದು ಕುಮಾರಸ್ವಾಮಿ ಮಾತ್ರ ಎಂದು ಸಮರ್ಥಿಸಿಕೊಂಡರು.
ಕುಮಾರಸ್ವಾಮಿ ಅವರು ಕಲ್ಲುಗಣಿಗಾರಿಕೆ ಇದ್ರೆ ಮುಟ್ಟುಗೋಲು ಹಾಕಿ ಅಂದಿದ್ದಾರೆ. ಎರಡು ವರ್ಷದಿಂದ ಸಂಸದೆ ಆಗಿದ್ದವರೂ ತನಿಖೆ ಮಾಡಬೇಕಿತ್ತು. ತನಿಖೆ ಮಾಡಬೇಡಿ ಅಂತಾ ಯಾರಾದ್ರೂ ಹಿಡ್ಕೊಂಡಿದ್ವಾ? ಎಂದು ಪ್ರಶ್ನಿಸುವ ಮೂಲಕ ಸುಮಲತಾ ವಿರುದ್ಧ ಕಿಡಿಕಾರಿದರು.
ಇನ್ನು ಪ್ರಜ್ವಲ್ ಹೆಸರು ಯಾಕೆ ತೆಗೆಯಬೇಕು ಎಂದು ಪ್ರಶ್ನಿಸಿದ ರೇವಣ್ಣ, ಪಾಪ ಪ್ರಜ್ವಲ್ ನನಗೆ ಪೋನ್ ಮಾಡಿದ್ದ. ನಮ್ಮ ಹೆಸರು ಯಾಕೆ ತರ್ತಾರೆ? ಎಂದು ಕೇಳಿದ. ದೇವೇಗೌಡರು ಬದುಕಿರುವವರೆಗೂ ನಮ್ಮ ಕುಟುಂಬ ಒಡೆಯೋಕೆ ಯಾರಿಗೂ ಆಗಲ್ಲ ಎಂದರು.
ಅಂಬರೀಷ್ ಹಾಗೂ ಕುಮಾರಸ್ವಾಮಿ ಹೇಗಿದ್ರು ಎಂಬುದು ನನಗೆ ಗೊತ್ತಿದೆ. ಅಂಬರೀಷ್ ಅಂತ ವ್ಯಕ್ತಿ ಸಿಗಲ್ಲ. ಅವರ ಬಗ್ಗೆ ನಾವು ಮಾತನಾಡಿದರೆ ದೇವರು ಒಳ್ಳೆಯದು ಮಾಡಲ್ಲ. ದೇವೇಗೌಡರ ಕುಟುಂಬ ಯಾರಿಂದಲೂ ಸಂಸ್ಕೃತಿ ಪಾಠ ಕಲಿಬೇಕಿಲ್ಲ ಎಂದು ಹೇಳಿದರು.
ಕುಮಾರಸ್ವಾಮಿ ದುಡ್ಡು ಹೊಡೀತಾನೆ ಅಂತಾರೆ ಅದು ನ್ಯಾಯವಾ ನಮ್ಮ ಕುಟುಂಬದ ಯಾವುದೇ ಸ್ಕೂಲ್, ಕಾಲೇಜು ಹಾಗೂ ಕ್ರಷರ್ ಇಲ್ಲ. ಯಡಿಯೂರಪ್ಪ ಅಧಿಕಾರಕ್ಕೆ ಬಂದಮೇಲೆ ಯಾವ ಕಾಂಗ್ರೆಸ್ ಮುಖಂಡರು ಯಡಿಯೂರಪ್ಪ ಮನೆ ಬಾಗಿಲು ತಟ್ಟಿ ನಮ್ಮ ತನಿಖೆಯಿಂದ ಉಳಿಸಿ ಅಂತ ಹೋಗಿದ್ರು ನನಗೆ ಗೊತ್ತು. ಕಾಲ ಬಂದಾಗ ಎಲ್ಲವನ್ನು ಹೇಳ್ತಿನಿ ಎಂದರು.(ದಿಗ್ವಿಜಯ ನ್ಯೂಸ್​)
ಅಶ್ಲೀಲ ಆಡಿಯೋ, 75 ಕೋಟಿ ರೂ. ಗಳಿಕೆ! ಗಂಡನ ಸಮರ್ಥನೆಗಿಳಿದು ಟ್ರೋಲ್​ ಆದ ಪಬ್​ಜಿ ಮದನ್​ ಪತ್ನಿ

ಪಕ್ಕದೂರಲ್ಲಿ 22 ವರ್ಷದ ಯುವತಿ ಸಾವು! ಶವದ ಪಕ್ಕದಲ್ಲೇ ಇತ್ತು ಆಸಿಡ್​, ಚಾಕು…

‘ಅಕ್ರಮ ಕಲ್ಲು ಗಣಿಗಾರಿಕೆಗೆ ಎಚ್.ಡಿ.ಕುಮಾರಸ್ವಾಮಿಯೇ ಪ್ರಮುಖ ರೂವಾರಿ’

Sign in to your account
Please enter an answer in digits:twelve + fifteen =
Remember me
