ಶಿವಮೊಗ್ಗ:ಹಿಜಾಬ್ ವಿವಾದದ ಬಗ್ಗೆ ಹೈಕೋರ್ಟ್ ಕೊಟ್ಟಿರುವ ತೀರ್ಪನ್ನು ಸಂತೋಷದಿಂದ ಸ್ವಾಗತಿಸುತ್ತೇನೆ. ಪ್ರಚೋದನೆ ನೀಡಿದವರು ಗಮನಿಸಿ ತಕ್ಷಣವೇ ಎಲ್ಲ ವಿದ್ಯಾರ್ಥಿನಿಯರನ್ನು ಶಾಲೆಗೆ ಕಳುಹಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್​. ಈಶ್ವರಪ್ಪ ಅವರು ಹೇಳಿದರು.
ಶಿವಮೊಗ್ಗದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಇನ್ನಾದರೂ ಗೊಂದಲಗಳನ್ನು ಬಿಟ್ಟು ಶಾಲಾ-ಕಾಲೇಜಿಗೆ ಬರುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಎಲ್ಲರು ಕೋರ್ಟ್ ತೀರ್ಪಿಗೆ ತಲೆಬಾಗಲೇಬೇಕಿದೆ. ಕೋರ್ಟ್ ಸರ್ಕಾರದ ತೀರ್ಮಾನವನ್ನು ಎತ್ತಿ ಹಿಡಿದಿರುವುದು ಸಂತೋಷ ತಂದಿದೆ. ಅನ್ಯಾಯವಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಪ್ರಾಯೋಗಿಕ ಪರೀಕ್ಷೆಯನ್ನು ಕೆಲ ಮಕ್ಕಳು ತಪ್ಪಿಸಿಕೊಂಡಿದ್ದಾರೆ. ಕೋರ್ಟ್​ನ ಮಧ್ಯಂತರ ತೀರ್ಪಿನ ಅನ್ವಯ ನಡೆದುಕೊಂಡಿದ್ದರೆ ಮಕ್ಕಳಿಗೆ ಅನ್ಯಾಯವಾಗುತ್ತಿರಲಿಲ್ಲ‌ ಎಂದು ಹೇಳಿದರು.
ಸರ್ಕಾರ ಮುಸ್ಲಿಂ ಸಮುದಾಯದ ಮಕ್ಕಳಿಗೆ ಅನ್ಯಾಯವಾಗದ ರೀತಿ ಕ್ರಮ ಕೈಗೊಳ್ಳಲಿದೆ ಎಂದು ಇದೇ ಸಂದರ್ಭದಲ್ಲಿ ಈಶ್ವರಪ್ಪ ಅವರು ಭರವಸೆಯನ್ನು ನೀಡಿದರು.
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್​ ನಿರ್ಬಂಧ ಪ್ರಕರಣ ಸಂಬಂಧ ಇಂದು ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ. ಹಿಜಾಬ್ ಧರಿಸುವುದು ಇಸ್ಲಾಂ ಅಗತ್ಯ ಧಾರ್ಮಿಕ ಆಚರಣೆಯಲ್ಲ ಎಂದಿರುವ ಹೈಕೋರ್ಟ್​, ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಎಲ್ಲ ಅರ್ಜಿಗಳನ್ನೂ ವಜಾ ಮಾಡಿದೆ. ಶಾಲಾ-ಕಾಲೇಜುಗಲ್ಲಿ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಬೇಕು. ಸರ್ಕಾರದ ವಸ್ತ್ರ ಸಂಹಿತೆ ನೀತಿಯನ್ನು ಪ್ರಶ್ನಿಸುವಂತಿಲ್ಲ ಎಂದು ಹೈಕೋರ್ಟ್ ಪೂರ್ಣ ಪೀಠ ಮಹತ್ವದ ತೀರ್ಪು ಪ್ರಕಟಿಸಿದೆ.
ಶಾಲಾ-ಕಾಲೇಜುಗಳ ವಸ್ತ್ರ ಸಂಹಿತೆಯನ್ನು ವಿದ್ಯಾರ್ಥಿಗಳು ಪ್ರಶ್ನಿಸುವಂತಿಲ್ಲ. ಸರ್ಕಾರದ ಸಮವಸ್ತ್ರ ಸಂಹಿತೆ ಕಾನೂನು ಬದ್ಧವಾಗಿದೆ ಎಂದು ಹೈಕೋರ್ಟ್​ ಹೇಳಿದೆ. ನ್ಯಾಯಪೀಠವು 8 ನಿಮಿಷದಲ್ಲಿ ತೀರ್ಪು ಓದಿ‌ ಮುಗಿಸಿತು.
–BJP KARNATAKA (@BJP4Karnataka)15 Mar 2022

ಶಾಲೆಯಲ್ಲಿ ಹಿಜಾಬ್​ ಬ್ಯಾನ್​: ​ಸಮವಸ್ತ್ರ ಆದೇಶ ಎತ್ತಿಹಿಡಿದು ಐತಿಹಾಸಿಕ ತೀರ್ಪು ಪ್ರಕಟಿಸಿದ ಹೈಕೋರ್ಟ್​

ಸಮವಸ್ತ್ರ ಅಂದ್ರೆ ಸಮವಸ್ತ್ರವೇ… ಎಲ್ಲರೂ ಪಾಲಿಸಲೇ ಬೇಕು, ಹೈಕೋರ್ಟ್ ತೀರ್ಪು ಐತಿಹಾಸಿಕ: ಪ್ರಮೋದ್​ ಮುತಾಲಿಕ್​

ನಾನು “ದಿ ಕಾಶ್ಮೀರ್​ ಫೈಲ್ಸ್​” ಸಿನಿಮಾ ನೋಡಲ್ಲ: ಸಿದ್ದರಾಮಯ್ಯ ಕೊಟ್ಟ ಕಾರಣ ಕೇಳಿ ಅವರೆಲ್ಲ ನಗಾಡಿದರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 9 =
Remember me
