ಬೆಂಗಳೂರು:ಹಿಜಾಬ್​ಗೆ ಸಂಬಂಧಪಟ್ಟಂತೆ ನ್ಯಾಯಾಲಯದ ಆದೇಶದ ನಿರೀಕ್ಷೆಯಲ್ಲಿದ್ದೇವೆ. ಯಾವತ್ತೂ ನಾವು ನೆಲದ ಕಾನೂನು ಗೌರವಿಸುತ್ತೇವೆ. ನ್ಯಾಯಾಲಯದ ತೀರ್ಪುನ್ನು ಎಲ್ಲರೂ ಗೌರವಿಸಬೇಕು. ಕಾಯ್ದೆಯನ್ನು ಅನುಷ್ಟಾನಕ್ಕೆ ತರುವ ಕೆಲಸವಾಗಬೇಕು. ಸಮವಸ್ತ್ರ ಸಂಹಿತೆ ಎಲ್ಲರೂ ಪಾಲಿಸಲೇಬೇಕು ಎಂದು ಇಂಧನ ಸಚಿವ ವಿ. ಸುನೀಲ್​ ಕುಮಾರ್​ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದ್ವೇಷದ ಬೆಂಕಿ ಹಚ್ಚುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ದೇಶ ವಿಭಜನೆಗೆ ಕಾಂಗ್ರೆಸ್ ಬೆಂಬಲಿಸುತ್ತದೆ. ಯಾರು ಪ್ರತ್ಯೇಕವಾಗಿ ಇರಬೇಕು ಅಂತ ಬಯಸುತ್ತಿದ್ದಾರೋ ಅವರನ್ನು ಕಾಂಗ್ರೆಸ್ ಬೆಂಬಲಿಸುತ್ತಿದೆ ಎಂದು ಆರೋಪಿಸಿದರು.
ಸುನಿಲ್ ಕುಮಾರ್ ಸಂದೇಹಕಾಲೇಜಿನಲ್ಲಿ ಈ ರೀತಿಯ ಭಾವನೆ ಸೃಷ್ಟಿ ಮಾಡುವುದಕ್ಕೆ ಯಾರು ಕಾರಣ? ಪ್ರತ್ಯೇಕತಾವಾದಿಗಳಿಗೆ ಬೆಂಬಲಿಸುತ್ತಿರುವವರು ಯಾರು? ಇದೊಂದು ವ್ಯವಸ್ಥಿತವಾದ ಪಿತೂರಿಯಾಗಿದೆ ಎಂದರು. ಸರ್ಕಾರಿ ಶಾಲೆಗೆ ಫೀಸ್ ಕಟ್ಟುವುದಕ್ಕೆ ಆಗದವರಿಗೆ ಕೋರ್ಟ್ ಮೆಟ್ಟಿಲು ಹತ್ತುವುದಕ್ಕೆ ಯಾರು ಬೆಂಬಲ ಕೊಟ್ಟರು ಎಂಬ ಪ್ರಶ್ನೆ ಎತ್ತಿ ಸುನಿಲ್ ಕುಮಾರ್ ಸಂದೇಹ‌ ವ್ಯಕ್ತಪಡಿಸಿದರು.
ಎಸ್​ಡಿಪಿಐ ಒಂದು ರಾಜಕೀಯ ಪಾರ್ಟಿ. ಅದನ್ನು ಬ್ಯಾನ್ ಮಾಡುವುದಕ್ಕೆ ಏನೇನು ಪ್ರಕ್ರಿಯೆಗಳಿವೆ ಎಂಬುದು ನಿಮಗೆ ( ಮಾಧ್ಯಮದವರು) ಗೊತ್ತಿದೆ. ಮಂಗಳೂರಲ್ಲಿ ಪಿಎಫ್ಐ, ಎಸ್ಡಿಪಿಐ ಜತೆ ಒಳ ಒಪ್ಪಂದ ಮಾಡಿಕೊಂಡವರು ಕಾಂಗ್ರೆಸ್​ನವರೇ ಎಂದು ಆರೋಪ ಮಾಡಿದರು.
2022 ಆಗಸ್ಟ್​ 7ರಂದು ರಾತ್ರಿ 7 ಗಂಟೆಗೆ ಮಗುವಿಗೆ ಜನ್ಮ ನೀಡುತ್ತೇನೆ: ಸಮಂತಾ ಹೇಳಿಕೆ ವೈರಲ್​

ಶಾಲಾ ಸಮವಸ್ತ್ರ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಬೆಂಕಿಗೆ ತುಪ್ಪ ಸುರಿಯುತ್ತಿದ್ದಾರೆ: ಡಿಕೆಶಿ ವಿರುದ್ಧ ಗೃಹ ಸಚಿವ ಆಕ್ರೋಶ

ಬಿಕಿನಿ ಅಥವಾ ಜೀನ್ಸ್​ ಆಗಿರಲಿ ಇಷ್ಟವಾದ ಬಟ್ಟೆ ಧರಿಸುವುದು ಹೆಣ್ಣು ಮಕ್ಕಳ ಹಕ್ಕು: ಪ್ರಿಯಾಂಕಾ ಗಾಂಧಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 9 =
Remember me
