ಚಿಕ್ಕಬಳ್ಳಾಪುರ:ಇದಕ್ಕಿದ್ದಂತೆ ಜೋರು ಶಬ್ದವೊಂದು ಕೇಳಿಬಂತು. ಸಮೀಪದಲ್ಲಿ ಕೆಲಸ ಮಾಡ್ತಿದ್ದವರು ಏಕಾಏಕಿ ದಿಗ್ಭ್ರಾಂತಿಗೊಳಗಾದರು. ತಕ್ಷಣ ಬಂದು ನೋಡಿದರೆ, ಬೆಂಜ್ ಕಾರು ಒಂದು ಮರಕ್ಕೆ ಡಿಕ್ಕಿ ಹೊಡೆದು ಸಂಪೂರ್ಣ ನಜ್ಜುಗುಜ್ಜಾಗಿತ್ತು. ಅದೃಷ್ಟವಶಾತ್ ಯಾರಿಗೂ ಏನಾಗಿಲ್ಲ. ಆದರೆ ಕಾರಿನಲ್ಲಿದ್ದವರು ಮಾತ್ರ ಕನ್ನಡದ ಖ್ಯಾತ ನಟನ ಪುತ್ರ ಅಂತ ಗೊತ್ತಾಯಿತು. ಮುಂದೇನಾಯಿತು ನೀವೇ ನೋಡಿ…
ಕಾರಿನ ಅಪಘಾತದ ದೃಶ್ಯ ನೋಡಿದರೆ ಯಾರಿಗಾದರೂ ಹೆಚ್ಚು-ಕಮ್ಮಿ ಆಗಿರಬಹುದು ಎಂಬ ಅನುಮಾನ ಬರುವುದು ಗ್ಯಾರಂಟಿ.ಅಷ್ಟಕ್ಕೂ ಈ ಭೀಕರ ಅಪಘಾತ ಸಂಭವಿಸಿದ್ದು, ಚಿಕ್ಕಬಳ್ಳಾಪುರ ತಾಲ್ಲೂಕು ರಾಷ್ಟ್ರೀಯ ಹೆದ್ದಾರಿ 7ರ ಅಗಲಗುರ್ಕಿ ಸಮೀಪದಲ್ಲಿ. ಕನ್ನಡದ ಖ್ಯಾತ ನಟ ಜಗ್ಗೇಶ್ ಅವರ ಕಿರಿಯ ಪುತ್ರ ಯತಿರಾಜ್ ಹೈದರಾಬಾದ್ ಮಾರ್ಗದಿಂದ ಬೆಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಅಗಲಗುರ್ಕಿ ಸಮೀಪ ಕಾರಿಗೆ ಅಡ್ಡಲಾಗಿ ನಾಯಿ ಬಂದ ಪರಿಣಾಮ ನಾಯಿಯನ್ನು ತಪ್ಪಿಸಲು ಹೋಗಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ.
ಕಾರು ವೇಗವಾಗಿ ಚಲಿಸುತ್ತಿದ್ದರಿಂದ ಡಿಕ್ಕಿ ಹೊಡೆದ ರಭಸಕ್ಕೆ ಮರದ ಕೊಂಬೆಗಳು ಉರುಳಿವೆ. ಇನ್ನೂ ಘಟನೆಯಲ್ಲಿ ಬೆಂಜ್ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ.
ಕಾರು ಸುಮಾರು 150 ಕಿಮೀ ವೇಗದಲ್ಲಿತ್ತು, ಮರಕ್ಕೆ ಡಿಕ್ಕಿ ಹೊಡೆದು ಜೋರು ಶಬ್ದ ಬಂತು. ಅಲ್ಲಿಗೆ ಹೋಗಿ ನೋಡಿದಾಗ ಏರ್ ಬ್ಯಾಗ್ ಓಪನ್ ಆಗಿ ಕಾರಿನಿಂದ ಮೆಲ್ಲಗೆ ಇಳಿದ ವ್ಯಕ್ತಿ ನಾನು ಯತಿರಾಜ್, ನಟ ಜಗ್ಗೇಶ್ ಪುತ್ರ ಎಂದು ಹೇಳಿದಾಗ, ಅಲ್ಲೇ ಕೆಇಬಿ ಕೆಲಸ ಮಾಡ್ತಿದ್ದವರು ಆರೈಕೆ ಮಾಡಿ ಆಸ್ಪತ್ರೆಗೆ ಸೇರಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿಕೆ ನೀಡಿದ್ದಾರೆ.
ಯತಿರಾಜ್​ಗೆ ಚಿಕಿತ್ಸೆಯತಿರಾಜ್​ಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆಯ ನಂತರ ಮೆಡಿಕಲ್ ಟೆಸ್ಟ್ ಮಾಡಿಸಿದ ಬಳಿಕ ಪೊಲೀಸರ ವಿಚಾರಣೆ ನಡೆಯಲಿದೆ. ಅಪಘಾತದಲ್ಲಿ ಕಾರು ನಜ್ಜುಗುಜ್ಜಾಗಿದ್ದರೂ ಜಗ್ಗೇಶ್ ಪುತ್ರ ಫುಲ್ ಸೇಫ್ ಆಗಿರುವುದು ದೃಷ್ಟವೇ ಸರಿ.
ನಟ ಜಗ್ಗೇಶ್ ಪುತ್ರ ಪ್ರಯಾಣಿಸುತ್ತಿದ್ದ ಐಷಾರಾಮಿ ಕಾರು ಅಪಘಾತ!

ರಾಷ್ಟ್ರೀಯ ವೈದ್ಯರ ದಿನದಂದೇ ಆತ್ಮಹತ್ಯೆ ಮಾಡಿಕೊಂಡ ವೈದ್ಯ ದಂಪತಿ! ಮದುವೆಯಾಗಿ ತಿಂಗಳೊಳಗೇ ಮುಗಿಯಿತು ಬದುಕು!

ಒಂದು ಕೈಯಲ್ಲಿ ಮಗು, ಇನ್ನೊಂದು ಕೈಯಲ್ಲಿ ದೊಡ್ಡ ಸೂಟ್​ಕೇಸ್​: ಭಯಾನಕ ಘಟನೆ ಸಿಸಿಟಿವಿಯಿಂದ ಬಯಲು!

Sign in to your account
Please enter an answer in digits:eleven + seven =
Remember me
