ಕಲಬುರಗಿ:ಫೋಟೊಗ್ರಾಫರ್ ಶಿವಕುಮಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಡಿ ರೈಲ್ವೆ ಪೊಲೀಸರು ಐವರು ಹಂತಕರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮಹಾಂತೇಶ್ ಆಳಂದಕರ್, ಬಸವರಾಜ್ ಸಲಗಾರ್, ಫಕರಿಪ್ಪ ಸಲಗಾರ್, ಸಿದ್ದಾರೂಢ ಕೋರಬಾರ್ ಹಾಗೂ ಅಶೋಕ ಜಮಾದಾರ್​ ಎಂದು ಗುರುತಿಸಲಾಗಿದೆ.
ಕೊಲೆಯಾದ ಶಿವಕುಮಾರ್, ಆರೋಪಿ ಮಹಾಂತೇಶ್​ ತಾಯಿಯ ಜತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ವರಸೆಯಲ್ಲಿ ಇಬ್ಬರು ಸಹೋದರರು. ಮಹಾಂತೇಶ್​ಗೆ ಶಿವಕುಮಾರ್​ ದೊಡ್ಡಪ್ಪನ ಮಗನಾಗಬೇಕು. ಚಿಕ್ಕಮ್ಮನ ಜತೆಯಲ್ಲೇ ಅಕ್ರಮ ಸಂಬಂಧ ಹೊಂದಿದ್ದನ್ನು ಮಹಾಂತೇಶ್​ ಕಣ್ಣಾರೆ ಕಂಡಿದ್ದ.
ತಾಯಿ ಜತೆ ಅಕ್ರಮ ಸಂಬಂಧ ಹೊಂದಿದ್ದ ದೊಡ್ಡಪ್ಪನ ಮಗನ ಮೇಲೆ ಸೇಡು ತಿರಿಸಿಕೊಳ್ಳಲು ಮಾವ ಬಸವರಾಜ್ ಜತೆ ಸೇರಿಕೊಂಡು ಶಿವಕುಮಾರ್​ ಕೊಲೆಗೆ ಮಹಾಂತೇಶ್​ ಸಂಚು ರೂಪಿಸಿದ್ದ. ಜನವರಿ 25 ರಂದು ಆಳಂದ ತಾಲ್ಲೂಕಿನ ಶ್ರೀಚಂದ ಗ್ರಾಮದಿಂದ ಶಿವಕುಮಾರ್​ನನ್ನು ಬೈಕ್ ಮೇಲೆ‌ ಕರೆದುಕೊಂಡು ಬಂದಿದ್ದ ಮಹಾಂತೇಶ್, ಕೊಲೆ ಮಾಡಿ ಕಲಬುರಗಿ ಹೊರವಲಯದ ಸಾವಳಗಿ ಬಬಲಾದ್ ರೈಲ್ವೆ ಹಳಿಯ ಮೇಲೆ ಬಿಸಾಕಿ ಎಸ್ಕೇಪ್ ಆಗಿದ್ದರು.
ಶಿವಕುಮಾರ್​ ರುಂಡವನ್ನು ಚೆಂಡಾಡಿ ಭೀಕರ ಹತ್ಯೆ ಮಾಡಿ ರೈಲ್ವೆ ಹಳಿಯ ಮೇಲೆ ಎಸೆದು ಆತ್ಮಹತ್ಯೆ ಎಂದು ಬಿಂಬಿಸಲು ಹಂತಕರು ಮುಂದಾಗಿದ್ದರು. ಆದರೆ, ಅನುಮಾನಗೊಂಡು ತನಿಖೆ ನಡೆಸಿದ ರೈಲ್ವೆ ಪೊಲೀಸರಿಗೆ ಪ್ರಕರಣದ ಅಸಲಿಯತ್ತು ತಿಳಿದುಬಂದಿದೆ. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)
ಮೊದಲ ರಾತ್ರಿ ಮುಗಿಸಿ ಬೆಳಗಿನ ಜಾವವೇ ಎಸ್ಕೇಪ್​ ಆದ ವರ: ನಂತ್ರ ವಧುವಿಗೆ ತಿಳಿದಿದ್ದು ಘೋರ ಸತ್ಯ!

ಶೀಘ್ರ ಚಿತ್ರಮಂದಿರಕ್ಕೆ ಶೋಕಿವಾಲ ಆಗಮನ; ಗಾಯಕರಾದ ಶ್ರೀಧರ್ ಸಂಭ್ರಮ್

ಹಿರಿಯ ನಟಿ, ಬಿಜೆಪಿ ಮುಖಂಡೆ ಜಯಪ್ರದಾ ಮನೆಯಲ್ಲಿ ಸಂಭವಿಸಿದ ದುರಂತ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three × five =
Remember me
