ಕಲಬುರಗಿ:ಪೊಲೀಸರ ಕಿರುಕುಳ ಸಹಿಸಲಾರದೇ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಹಾಬಾದ ತಾಲ್ಲೂಕಿನ ಮರತೂರ ಗ್ರಾಮದಲ್ಲಿ ನಡೆದಿದ್ದು, ಡೆತ್​ನೋಟ್​ ಪತ್ತೆಯಾಗಿದೆ.
ಮನೋಜ ಸಿಂಧೆ (32) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮನೆಯಲ್ಲಿ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಮನೋಜ್​ ಅವರ ಹೆಂಡತಿಯ ಅಣ್ಣನ ಮಗು ಕಾಣೆಯಾಗಿದ್ದು, ನೀನೇ ತೆಗೆದುಕೊಂಡು ಹೋಗಿದ್ದಿಯಾ ಅಂತಾ ಮನೋಜ್​ನನ್ನು ಪೊಲೀಸರು ಟಾರ್ಚರ್ ಮಾಡಿದ್ದಾರೆ ಎಂಬ ಆರೋಪ ಇದೆ.
ಎರಡು ದಿನ ಪೊಲೀಸ್ ಠಾಣೆಯಲ್ಲಿ ಕೂಡಿ ಹಾಕಿ ಮಾರಣಾಂತಿಕವಾಗಿ ಹಲ್ಲೆ ಮಾಡಿದರು. ನಾನು ತೆಗೆದುಕೊಂಡು ಹೋಗಿಲ್ಲ ಎಂದು ಹೇಳಿದರೂ ಪೊಲೀಸರು ಕೇಳಲಿಲ್ಲ. ಇವತ್ತು ಬಿಟ್ಟಿದ್ದೇವೆ, ನಾಳೆ ನಿನ್ನ ಹೆಂಡತಿಯನ್ನೂ ಕೂಡ ಕರೆದುಕೊಂಡು ಬಂದು ಇಬ್ಬರಿಗೂ ಟಾರ್ಚರ್ ಮಾಡುತ್ತವೇ ಎಂದು ಬೆದರಿಕೆ ಹಾಕಿದರು ಅಂತಾ ಡೆತ್​ನೋಟ್​ ಬರೆದಿಟ್ಟು ಮನೋಜ್​ ಸಾವಿನ ಹಾದಿ ಹಿಡಿದಿದ್ದಾನೆ.
ನನ್ನ ಹೆಂಡತಿ ಮತ್ತು ಮಕ್ಕಳನ್ನು ಅರ್ಧದಲ್ಲಿ ಕೈಬಿಟ್ಟು ಹೋಗುತ್ತಿರುವುದು ನನ್ನ ತಪ್ಪು ಎಂದು ತುಂಬಾ ನೋವಿನಲ್ಲಿ ಡೆತ್​ನೋಟ್​ನಲ್ಲಿ ಮನೋಜ್​ ಬರೆದಿದ್ದಾರೆ. ಇದಲ್ಲದೆ, ಕಿರುಕುಳ ಕೊಟ್ಟ ಪೇದೆಗಳ ಹೆಸರನ್ನು ಉಲ್ಲೇಖಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಬಾಗಲಕೋಟೆಯಲ್ಲಿ ತಲೆಗೂದಲಿಗೆ ಬಣ್ಣ ಹಾಕುವ ವಿಚಾರದಲ್ಲಿ ಜಗಳ: ಗ್ರಾಹಕನ ಎದೆಗೆ ಇರಿದು ಹತ್ಯೆಗೈದ ಕ್ಷೌರಿಕ

VIDEO| ಪ್ಲೇಆಫ್​ ಹಂತಕ್ಕೇರಲು ಪಂಜಾಬ್​ ಕಿಂಗ್ಸ್​ ವಿಫಲ: ಶಿಖರ್​ ಧವನ್​ಗೆ ಹಿಗ್ಗಾಮುಗ್ಗಾ ಜಾಡಿಸಿದ ತಂದೆ

ನನ್ನ ಪತ್ನಿ ಕೈಗೆ ಸಿಕ್ಕಿದ್ದರಲ್ಲಿ ಬಾರಿಸ್ತಾಳೆ.. ಕಾಪಾಡಿ ಸರ್​: ವಿಡಿಯೋ ಸಮೇತ ಕೋರ್ಟ್​ ಮೆಟ್ಟಿಲೇರಿದ ಪ್ರಾಂಶುಪಾಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 3 =
Remember me
