ಬೆಂಗಳೂರು:ನೆಮ್ಮದಿಯಾಗಿ ಜಾಸ್ತಿ ನಿದ್ದೆ ಮಾಡಬೇಕು ಅಂದರೆ ಜಾಸ್ತಿ ಹಣ ಮಾಡಬೇಡಿ. ಇಲ್ಲಾಂದ್ರೆ ನನಗಾದ ರೀತಿಯೇ ನಿಮಗೂ ಆಗುತ್ತದೆ ಎಂದು ಕೆಜಿಎಫ್‌ ಬಾಬು ಹೇಳಿದ್ದಾರೆ.
ಸಾವಿರ ಕೋಟಿ ಆಸ್ತಿ ಒಡೆಯ ಎಂದೇ ಗಮನ ಸೆಳೆದಿರುವ ಕೆಜಿಎಫ್​ ಬಾಬು ಮನೆ ಮೇಲೆ ಇಡಿ‌ ದಾಳಿ ಮಾಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಬಾಬು ಬಡವರ ಹತ್ತಿರ ದುಡ್ಡು ಬಂದಿದೆ ಅಂದ್ರೆ ಈ ರೀತಿ ದಾಳಿಗಳು ಆಗ್ತಾವೆ. 2001 ರಿಂದ ನಾನು ತೆರಿಗೆ ಕಟ್ಟಿದ್ದೀನಿ. ಯಾವುದೇ ತೆರಿಗೆಯನ್ನು ಬಾಕಿ ಉಳಿಸಿಲ್ಲ. ಆದರೂ ಬಡವರ ಹತ್ತಿರ ದುಡ್ಡು ಇದೆ ಅಂದರೆ ದಾಳಿ ಮಾಡ್ತಾರೆ ಎಂದು ಇಡಿ ದಾಳಿಯನ್ನು ಖಂಡಿಸಿದರು.
ನಿನ್ನೆ ಬೆಳಗ್ಗೆ ಏಳು ಗಂಟೆಗೆ ವಾರೆಂಟ್ ತಂದು ದಾಳಿ ‌ಮಾಡಿದರು. ಮನೆಯಲ್ಲಿ ಎಂಟು ಲಕ್ಷ ರೂ. ನಗದು ಸಿಕ್ಕಿದೆ. ಮೂರು ಮುಕ್ಕಾಲು ಕೆಜಿ ಚಿನ್ನ ಸಿಕ್ಕಿದೆ. ಹಣ ವಾಪಸ್ಸು ನೀಡಿದ್ದಾರೆ. ಆದರೆ, ಚಿನ್ನ ತೆಗೆದುಕೊಂಡು ಹೋಗಿದ್ದಾರೆ. ಅದಕ್ಕೆ ನನ್ನ ಬಳಿ ದಾಖಲೆಗಳು ಇದ್ದು, ಚಿನ್ನ ಬಿಡಿಸಿಕೊಳ್ಳುತ್ತೇನೆಂದು ಹೇಳಿದರು.
ನಾನು ಜಮೀರ್ ಅಹ್ಮದ್​ ಖಾನ್​ಗೆ ಮೂರುವರೆ ಕೋಟಿ ಸಾಲ ನೀಡಿದ್ದೆ. ಈ ಹಿಂದೆ ಜಮೀರ್ ಆಹ್ಮದ್ ಖಾನ್ ಮನೆ ಮೇಲೆ ದಾಳಿ ಆಗಿತ್ತು. ಇದಕ್ಕೆ ಸಂಬಂಧಿಸಿಂದಂತೆ ನನಗೆ ಇಡಿ ನೊಟೀಸ್ ನೀಡಿತ್ತು. ನಾನು ಹೋಗಿ ಉತ್ತರ ಕೊಟ್ಟು ಬಂದಿದ್ದೆ. ಜಮೀರ್ ದಾಳಿಗೂ ಈಗಿನ ದಾಳಿಗೂ ಸಂಬಂಧ ಇದ್ದರು ಇರಬಹುದು. ನಾನು ಪಬ್ಲಿಕ್ ಬಿಡ್​ನಲ್ಲಿ ವ್ಯವಹಾರ ಮಾಡುವುದು. ಆದರೆ, ನನ್ನ ಮನೆ ಮೇಲೆ ಇಡಿ ಯಾಕೆ ದಾಳಿ ಮಾಡಿತು ಎಂಬುದು ಗೊತ್ತಿಲ್ಲ ಎಂದರು.
ಕಾಂಗ್ರೆಸ್​ನಲ್ಲಿ ನಾನು ಎಂಎಲ್​​ಸಿ ಸ್ಥಾನಕ್ಕೆ ನಿಂತಿದ್ದೆ ಇದಕ್ಕೆ ಕಾರಣ ಇರಬಹುದು. ನಾನು ಕಾಂಗ್ರೇಸ್ ಸೇರುತ್ತಿರುವುದರಿಂದ ಈ ದಾಳಿಯಾಗಿದೆ. ಜಮೀರ್ ನನಗೆ ಕಷ್ಟ ಕಾಲದಲ್ಲಿ ಸಹಾಯ ಮಾಡಿದ್ದಾರೆ. ನಾನು ಅವರಿಗೂ ಆಗ್ತಾ ಇದ್ದೀನಿ. ಇದರಲ್ಲಿ ವಿಶೇಷ ಏನು ಇಲ್ಲ. ಏಳು ದಿನದಲ್ಲಿ ದೆಹಲಿ ಇಡಿ ಕಚೇರಿಗೆ ಹಾಜರಾಗುವಂತೆ ನೊಟೀಸ್ ನೀಡಿದ್ದಾರೆ. ನಾನು ಕೂಡ ಹಾಜರಾಗುತ್ತೇನೆ. ಎಂಎಲ್​ಸಿಗೆ ಕಂಟೆಸ್ಟ್ ಮಾಡಿದ್ದೆ ದೊಡ್ಡ ತಪ್ಪಾಗಿದೆ. ಅದಕ್ಕೆ ಈ ರೀತಿ ದಾಳಿ ಆಗುತ್ತಿದೆ ಎಂದು ತಿಳಿಸಿದರು.
ನಾನು ಎಲ್ಲ ವ್ಯವಹಾರವನ್ನು ಚೆಕ್ ಮುಖಾಂತರ ಮಾಡ್ತಾ ಇದ್ದೀನಿ. ಯಾವುದೇ ನಗದನ್ನು ವ್ಯವಹಾರಕ್ಕೆ ಬಳಸಿಲ್ಲ. ಎಲ್ಲವೂ ಚೆಕ್ ಮುಖಾಂತರವೇ ಅಧಿಕೃತವಾಗಿ ನಡೆಯುತ್ತದೆ. ಚುನವಣೆಯಲ್ಲಿ 1740 ಕೋಟಿ ರೂಪಾಯಿ ಘೋಷಣೆ ಮಾಡಿದ್ದೇನೆ. ಅದನ್ನು ಮುಚ್ಚಿಡಲು ಆಗುವುದಿಲ್ಲ. ಮುಚ್ಚಿಡಲೂಬಾರದು. ನಾನು ಮಧ್ಯಮ ವರ್ಗದಿಂದ ಬಂದವನು. ಪ್ರಾಮಾಣಿಕವಾಗಿ ಇದ್ದರು ಇಂತಹ ದಾಳಿಗಳು ಆಗ್ತಾವೆ. ನೆಮ್ಮದಿಯಾಗಿ ಜಾಸ್ತಿ ನಿದ್ದೆ ಮಾಡಬೇಕು ಅಂದರೆ ಜಾಸ್ತಿ ಹಣ ಮಾಡಬೇಡಿ. ಇಲ್ಲದಿದ್ರೆ ಈ ರೀತಿ ನಿಮಗೂ ಆಗುತ್ತೆ ಎಂದರು.(ದಿಗ್ವಿಜಯ ನ್ಯೂಸ್​)
ಕೆಜಿಎಫ್​ ಬಾಬು ಮನೆ ಮೇಲೆ IT ದಾಳಿ: ನಾಮಪತ್ರದಲ್ಲಿನ ಮಾಹಿತಿ ನೋಡಿ ಐಟಿ ಕಣ್ಣು ಬಿತ್ತಾ? ಬಾಬು ಮುಂದೆ ಡಿಕೆಶಿ, ಎಂಟಿಬಿ ಆಸ್ತಿಯೂ ಕಮ್ಮಿ

ಪತ್ನಿ ಜತೆಗಿನ ಸಂಭೋಗದ ಬೆನ್ನಲ್ಲೇ ಮೊಬೈಲ್ ನೋಡಿದ ವ್ಯಕ್ತಿಗೆ ಬಿಗ್​ ಶಾಕ್​: ಮೆಮೊರಿ ಲಾಸ್​, ಇದು ಭಯಾನಕ ಕೇಸ್!​

VIDEO: ಹೊರಗಿಟ್ಟಿರೋ ಶೂಸ್​ ಧರಿಸೋ ಮುನ್ನ ಎಚ್ಚರ: ಪ್ರಾಣಕ್ಕೇ ಕುತ್ತಾದೀತು! ತುಮಕೂರಿನ ಶಾಕಿಂಗ್​ ವಿಡಿಯೋ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 9 =
Remember me
