ಕೋಲಾರ:ಚಾಲಕನ ನಿಯಂತ್ರಣದ ತಪ್ಪಿದ ಖಾಸಗಿ ಬಸ್​ ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರು ದುರಂತ ಸಾವಿಗೀಡಾಗಿ, 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮುಳಬಾಗಿಲು ತಾಲೂಕಿನ ರಾಷ್ಟ್ರೀಯ ಹೆದ್ದಾರಿ-75ರ ವಿರುಪಾಕ್ಷಿ ಗೇಟ್ ಬಳಿ ಇಂದು (ಆ.17) ಮುಂಜಾನೆ ನಡೆದಿದೆ.
ಖಾಸಗಿ ಬಸ್​ ಆಂಧ್ರ ಪ್ರದೇಶದ ಗುಂಟೂರಿನಿಂದ ಬೆಂಗಳೂರಿಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಚಾಲಕ ಅತಿಯಾದ ವೇಗದಲ್ಲಿ ಬಸ್​ ಚಲಾಯಿಸಿಕೊಂಡು ಬರುತ್ತಿದ್ದದ್ದೇ ಈ ದುರ್ಘಟನೆಗೆ ಕಾರಣ ಎಂದು ಹೇಳಲಾಗಿದೆ. ವೇಗದ ಚಾಲನೆ ಪರಿಣಾಮ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್​, ರಸ್ತೆಯನ್ನು ಬಿಟ್ಟು ಪಕ್ಕದ ಹಳ್ಳದ ಜಾಗದಲ್ಲಿ ಪಲ್ಟಿ ಹೊಡೆದಿದೆ.
ಬಸ್​ನಲ್ಲಿ 30 ಜನರಿದ್ದರು. ಆಂಧ್ರ ಮೂಲದ‌ ಇಬ್ಬರು ಮೃತಪಟ್ಟಿದ್ದಾರೆ. ಬಸ್​ ಆಂಧ್ರದ ನಲ್ಲೂರಿನ ವೇಮೂರಿ-ಕಾವೇರಿ ಟ್ರಾವಲ್​ಗೆ ಸೇರಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಪಘಾತದ ಬೆನ್ನಲ್ಲೇ ಚಾಲಕ ಮತ್ತು ನಿರ್ವಾಹಕ ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಮುಳಬಾಗಿಲು ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಚಾಲಕ ಮತ್ತು ನಿರ್ವಾಹಕ ಪತ್ತೆಗೆ ಬಲೆ ಬೀಸಿದ್ದಾರೆ. ಪಲ್ಟಿಯಾಗಿದ್ದ ಬಸ್​ ಅನ್ನು ತೆರುವುಗೊಳಿಸಲಾಗಿದೆ.(ದಿಗ್ವಿಜಯ ನ್ಯೂಸ್​)
ಭಾರತ ಸರ್ಕಾರ VLC ಮೀಡಿಯಾ ಪ್ಲೇಯರ್​ ಬ್ಯಾನ್​ ಮಾಡಿದ್ದೇಕೆ? ಈ ಆ್ಯಪ್​ ಹಿಂದಿರುವ ಕರಾಳತೆ ಇದೇನಾ?

ಸಾಮಾಜಿಕ ಜಾಲತಾಣ ಕೂ ಮೂಲಕ ಕನಸು ಈಡೇರಿಸಿಕೊಂಡ ಕಾಶ್ಮೀರಿ ಅಥ್ಲೆಟಿ ಡ್ಯಾನಿಶ್

1 ತಿಂಗಳು, 3 ಭಾಷೆ, 3 ಚಿತ್ರ!; ಚತುರ್ಭಾಷಾ ಚತುರೆ ಸಂಯುಕ್ತಾ ಮೆನನ್

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve − 10 =
Remember me
