ಕೋಲಾರ:ಲಾಕ್​ಡೌನ್​ ಸಂದರ್ಭದಲ್ಲಿ ಆಂಧ್ರ ಹಾಗೂ ಕರ್ನಾಟಕ ಗಡಿಯ ಚೆಕ್​ಪೋಸ್ಟ್​ನಲ್ಲಿ ರೈತರ ವಾಹನಗಳನ್ನು ಹಿಡಿದು ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ರಾಯಲ್ಪಾಡು ಪೊಲೀಸ್​ ಠಾಣೆ ಪಿಎಸ್​ಐ ನರಸಿಂಹಮೂರ್ತಿ ಯನ್ನು ಅಮಾನತು ಮಾಡಲಾಗಿದೆ.
ಶ್ರೀನಿವಾಸಪುರ ಕ್ಷೇತ್ರದ ಶಾಸಕ ಹಾಗೂ ಮಾಜಿ ಸ್ಪೀಕರ್​ ರಮೇಶ್​ ಕುಮಾರ್​ಗೆ ಸ್ಥಳೀಯರಿಂದ ಪಿಎಸ್​ಐ ನರಸಿಂಹ ಮೂರ್ತಿ ಅವರು ಸಾರ್ವಜನಿಕರಿಗೆ ಅನತ್ಯವಾಗಿ ಕಿರುಕುಳ ನೀಡಿ ಜನರಿಂದ ಹಣ ವಸೂಲಿ ಮಾಡುತಿದ್ದಾರೆ ಎಂಬ ದೂರು ಬಂದ ಹಿನ್ನೆಲೆ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿದ್ದರು. ಈ ವೇಳೆ ರಾಯಲ್ಪಾಡು ಚೆಕ್​ ಪೋಸ್ಟ್​ ಬಳಿ ಕೆಲಕಾಲ ಮೌನ ಪ್ರತಿಭಟನೆ ಮಾಡಿದ ರಮೇಶ್​ ಕುಮಾರ್​ ಪಿಎಸ್​ಐ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದರು.
ಪಿಎಸ್​ಐ, ರಾಯಲ್ಪಾಡು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಕೆಲವು ಜೂಜು ಅಡ್ಡೆಗಳಿಗೂ ಕುಮ್ಮಕ್ಕು ನೀಡಿ ಹಣ ವಸೂಲಿ ಮಾಡುತ್ತಿದ್ದರು ಎಂಬ ದೂರು ಸಹ ಕೇಳಿ ಬಂದಿದೆ. ಈ ಹಿನ್ನೆಲೆ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್​ ಪಿಎಸ್​ಐ ರನ್ನು ಕೂಡಲೇ ಅಮಾನತು ಮಾಡಿ ಅದೇಶ ಹೊರಡಿಸಿದ್ದಾರೆ.​(ದಿಗ್ವಿಜಯ ನ್ಯೂಸ್​)
ತವರಿಗೆ ಹೋದ ಹೆಂಡತಿ ಸೋಶಿಯಲ್​ ಮೀಡಿಯಾ ಲೈವ್​ನಲ್ಲಿ ಪ್ರತ್ಯಕ್ಷ! ವಿಡಿಯೋ ನೋಡುತ್ತಿದ್ದಂತೆಯೇ ತಲೆ ತಿರುಗಿ ಬಿದ್ದ ಪತಿ!

ಪಾಪಿ ಅಪ್ಪ ಮಗನಿಗೆ ಕೊಟ್ಟ ಈ ಭಯಾನಕ ಶಿಕ್ಷೆ ನೋಡಿದರೆ ಎದೆ ಝಲ್ಲೆನ್ನದೇ ಇರಲಾರದು! ಫೋಟೋ ವೈರಲ್‌

ರಿಲಯನ್ಸ್‌ನಿಂದ ಸಿಬ್ಬಂದಿಗೆ ನೆರವಿನ ಮಹಾಪೂರ: ಐದು ವರ್ಷದ ವೇತನ, ಶಿಕ್ಷಣ ಸೌಲಭ್ಯ, ಆಸ್ಪತ್ರೆ ಖರ್ಚು…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × two =
Remember me
