ಕೊಪ್ಪಳ:ಪ್ರತಿಯೊಬ್ಬರಿಗೂ ಒಂದೊಂದು ವಸ್ತುಗಳ ಮೇಲೆ ತುಂಬಾ ಪ್ರೀತಿ ಇರುತ್ತದೆ. ಅದರಲ್ಲೂ ಕೆಲವರಿಗಂತೂ ಅವರು ಇಷ್ಟಪಡುವ ವಸ್ತುಗಳ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿರುತ್ತಾರೆ. ಅಂತಹ ವಸ್ತುಗಳ ಮೇಲಿನ ತಮ್ಮ ಅಭಿಮಾನವನ್ನು ಬಹಳ ವಿಭಿನ್ನವಾಗಿ ತೋರಿಸಿಕೊಳ್ಳುತ್ತಾರೆ. ಆ ಸಾಲಿಗೆ ಕೊಪ್ಪಳ ವಿದ್ಯಾರ್ಥಿಯೊಬ್ಬ ಸೇರಿಕೊಂಡಿದ್ದಾನೆ.
ಬೈಕ್ ಮೇಲೆ ತುಂಬಾ ಕ್ರೇಜ್​ ಹೊಂದಿರುವ ಕೊಪ್ಪಳದ ಗಂಗಾವತಿ ಮೂಲದ ವಿದ್ಯಾರ್ಥಿ, ಬೈಕ್​ಗೆ ಹುಟ್ಟು ಹಬ್ಬ ಆಚರಣೆ ಮಾಡುವ ಮೂಲಕ ವಿಶೇಷ ಅಭಿಮಾನ ಮೆರೆದಿದ್ದಾನೆ. ಗಮನಾರ್ಹವೆಂದರೆ, ಬೈಕ್‌ನಿಂದಲೇ ಕೇಕ್​ ಕತ್ತರಿಸಿದ್ದಾನೆ.
ವಿದ್ಯಾರ್ಥಿಯ ಹೆಸರು ವೀರೇಶ್. ಈತನಿಗೆ ಬೈಕ್​ ಅಂದರೆ ತುಂಬಾ ಇಷ್ಟ. 50 ಸಾವಿರ ರೂಪಾಯಿ ಕೊಟ್ಟು ಒಂದು ವರ್ಷದ ಹಿಂದೆ ಬೈಕ್ ಖರೀದಿ ಮಾಡಿದ್ದ. ಇದೀಗ ವರ್ಷ ತುಂಬಿದ ಹಿನ್ನೆಲೆಯಲ್ಲಿ ಬೈಕ್​ಗೆ ಹುಟ್ಟುಹಬ್ಬ ಆಚರಣೆ ಮಾಡಿದ್ದಾನೆ.
ಪ್ಯಾರಾ ಮೆಡಿಕಲ್ ಕೋರ್ಸ್ ಓದುತ್ತಿರುವ ವೀರೇಶ್​, ತನ್ನ ಸೆಕೆಂಡ್ ಹ್ಯಾಂಡ್ ಬೈಕ್‌ಗೆ ಡಾರ್ಲಿಂಗ್ ಅಂತ ನಾಮಕರಣ ಮಾಡಿದ್ದಾನೆ. ಬೈಕ್ ಚಕ್ರಕ್ಕೆ ಚಾಕು ಕಟ್ಟಿ ಕೇಕ್ ಕತ್ತರಿಸಿ, ಹೆಡ್​ಲೈಟ್​ಗೆ ಕೇಕ್​ ಬಳಿದು ಸಂಭ್ರಮಿದ್ದಾನೆ. ಇದಾದ ಬಳಿಕ ಒಂದು ಜಾಲಿ ರೈಡ್​ ಹೋಗಿ ಎಂಜಾಯ್​ ಮಾಡಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.(ದಿಗ್ವಿಜಯ ನ್ಯೂಸ್​)
ಬಿಗ್​ಬಾಸ್​ ಮನೆಗೆ ಸೋನು ಶ್ರೀನಿವಾಸ್​ ಗೌಡ ಎಂಟ್ರಿ ಬೆನ್ನಲ್ಲೇ ಜಾಲತಾಣದಲ್ಲಿ ಅಲ್ಲೋಲ-ಕಲ್ಲೋಲ

ವಿಡಿಯೋದಲ್ಲಿ ಕಣ್ಣೀರಿಡುತ್ತಾ ಗಂಡನ ಕರಾಳ ಮುಖ ಬಿಚ್ಚಿಟ್ಟು ಅಮೆರಿಕದಲ್ಲಿ ಸಾವಿನ ಹಾದಿ ಹಿಡಿದ ಭಾರತೀಯ ಮಹಿಳೆ

ಇಷ್ಟು ದಿನ ನನ್ಗೆ ನಿತ್ಯಾ ಬೇಕೇ ಬೇಕು ಅಂತಿದ್ದ ಯುವಕ ಈಗ ಆಕೆಯ ಆ ಒಂದು ಮಾತಿಗೆ ಕೊಟ್ಟಿದ್ದು ಖಡಕ್​ ಪ್ರತಿಕ್ರಿಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
