ಕೊಪ್ಪಳ:ಸರ್ಕಾರಿ ಶಾಲಾ ಶಿಕ್ಷಕ ಅಜರುದ್ದೀನ್ ಕಾಮ ಪುರಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಸ್ಫೋಟಕ ವಿಚಾರ ಬಯಲಿಗೆ ಬಂದಿದೆ.
ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ಸಿಂಗಾಪೂರ ಗ್ರಾಮದ ಶಾಲೆಯಲ್ಲಿ ಕೆಸಲ ಮಾಡುತ್ತಿದ್ದ ಶಿಕ್ಷಕ ಅಜರುದ್ದೀನ್​ ಕಾಮ ಪುರಾಣ ಒಂದು ವರ್ಷದ ಹಿಂದೆಯೇ ಬಯಲಾಗಿತ್ತು. ಪತಿಯ ಅನೈತಿಕತೆ ಕುರಿತು ವರ್ಷದ ಹಿಂದೆಯೇ ಆತನ ಪತ್ನಿ ದೂರು ನೀಡಿದ್ದಳು.
ಶಿಕ್ಷಕ ಅಜರುದ್ದಿನ್ ಪತ್ನಿ ಸಲ್ಮಾಬೇಗಂ ಶಿಕ್ಷಣ ಇಲಾಖೆಗೆ ದೂರು ನೀಡಿದ್ದರು. ವಿಧವೆ ಹಾಗೂ ಅಸಹಾಯಕ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ನಾನಿರುವಾಗಲೇ ಮನೆಗೆ ಪರಸ್ತ್ರೀಯರನ್ನ ಕರೆ ತರುತ್ತಿದ್ದ. ಶಾಲೆಗೆ ಅನಧಿಕೃತವಾಗಿ ಗೈರು ಹಾಜರಾಗುತ್ತಿದ್ದ. ಈ ಸಮಯದಲ್ಲಿ ಬೇರೆ ಬೇರೆ ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದುತ್ತಿದ್ದ ಎಂದು ಬೇಗಂ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನೆಲ್ಲ ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ್ದ.
ಗಂಡ ಓರ್ವ ವ್ಯಭಿಚಾರಿ ಎಂದು ಉಲ್ಲೇಖಿಸಿ ಬೇಗಂ ಶಿಕ್ಷಣ ಇಲಾಖೆಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಆದರೆ, ದೂರು ನೀಡಿದ್ರೂ ಅಧಿಕಾರಿಗಳು ಮಾತ್ರ ಗಪ್ ಚುಪ್ ಆಗಿದ್ದರು. ವರ್ಷದ ಹಿಂದೆ ಕಾಮುಕ ಶಿಕ್ಷಕನ ಬಗ್ಗೆ ಸಲ್ಮಾ ಬೇಗಂ ನೀಡಿದ್ದ ದೂರಿನ ಪ್ರತಿ ದಿಗ್ವಿಜಯ ನ್ಯೂಸ್​ಗೆ ಲಭ್ಯವಾಗಿದೆ. ವಿಕೃತ ಅಜರುದ್ದಿನ್ 2019 ರಲ್ಲಿ ನನ್ನನ್ನು ಮನೆಯಿಂದ ಹೊರಹಾಕಿದ್ದಾನೆ. ಲಿಖಿತ ದೂರು ಸಲ್ಲಿಸಿದ್ದರೂ ಶಿಕ್ಷಣ ಇಲಾಖೆ ನಿರ್ಲಕ್ಷ್ಯ ಮಾಡಿದೆ ಎಂದು ಬೇಗಂ ಆರೋಪ ಮಾಡಿದ್ದಾರೆ.

ಅಜರುದ್ದಿನ್ ಬೇರೆ ಬೇರೆ ಮಹಿಳೆಯರೊಂದಿಗಿನ ಕಾಮದಾಟವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದ್ದಾನೆ. ಇತ್ತೀಚೆಗೆ ಶಿಕ್ಷಕನ ಮೊಬೈಲ್​ ಕಳೆದಿದ್ದು ಯಾರದೋ ಕೈಗೆ ದೊರೆತಿದೆ. ಮೊಬೈಲ್​ನ ಮೆಮೋರಿ ಕಾರ್ಡ್​ ತೆಗೆದಾಗ ಶಿಕ್ಷಕನ ಕರ್ಮಕಾಂಡ ಹೊರಬಂದಿದೆ.
ಮಕ್ಕಳಿಗೆ ಪಾಠ ಹೇಳಿಕೊಡುವ ನೆಪದಲ್ಲಿ ಅವರ ಹತ್ತಿರ ಹೋಗುತ್ತಿದ್ದ ಈತ, ಅವರ ಗುಪ್ತಾಂಗ ಮುಟ್ಟಿ ದೈಹಿಕ ಕಿರುಕುಳ ಕೊಡುತ್ತಿದ್ದ. ಮಕ್ಕಳಿಂದಲೇ ಬಟ್ಟೆ ಬಿಚ್ಚಿಸಿ ವಿಕೃತ ಆನಂದ ಪಡೆಯುತ್ತಿದ್ದನಂತೆ. ಇನ್ನು ಇಬ್ಬರು ಮಹಿಳೆಯರನ್ನ ಪರಿಚಯಿಸಿಕೊಂಡು ಸಲುಗೆ ಬೆಳೆಸಿಕೊಂಡಿದ್ದ ಈತ, ಅವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಮಹಿಳೆಯರನ್ನ ಲೈಂಗಿಕವಾಗಿ ಬಳಿಸಿಕೊಂಡಿದ್ದನ್ನ ಸೆಲ್ಫಿ ವಿಡಿಯೋ ಮಾಡಿಕೊಂಡಿದ್ದ ಶಿಕ್ಷಕ, ಬಳಿಕ ಆ ಮಹಿಳೆಯರಿಗೆ ವಿಡಿಯೋ ತೋರಿಸಿ ಬೆದರಿಕೆ ಹಾಕಿದ್ದ. ಮತ್ತಷ್ಟು ಮಹಿಳೆಯರನ್ನು ನನಗೆ ಪರಿಚಯಿಸಬೇಕು, ಅವರೊಂದಿಗೆ ಲೈಂಗಿಕಸಂಪರ್ಕ ಬೆಳೆಸಲು ನನಗೆ ಸಹಕರಿಸಬೇಕು, ಇಲ್ಲವಾದಲ್ಲಿ ನಿಮ್ಮೊಂದಿಗೆ ನಾನಿದ್ದ ವಿಡಿಯೋವನ್ನು ವೈರಲ್​ ಮಾಡುವೆ ಎಂದು ಹೆದರಿಸಿದ್ದನಂತೆ. ಇದೇ ರೀತಿ ಈತ ಸುಮಾರು 40 ಮಹಿಳೆಯರನ್ನ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.(ದಿಗ್ವಿಜಯ ನ್ಯೂಸ್​)
ಪರಸ್ತ್ರೀಯರ ಜತೆ ಶಿಕ್ಷಕನ ಕಾಮದಾಟದ ವಿಡಿಯೋ ವೈರಲ್​! ಆಟ-ಪಾಠದ ನೆಪದಲ್ಲಿ ಮಕ್ಕಳನ್ನೂ ಬಿಟ್ಟಿಲ್ಲ

ನಿನ್ನೆ ರಾತ್ರಿ ನರೇಶ್​ ಜೊತೆ ಪವಿತ್ರಾ ಲೋಕೇಶ್​ ದೂರು ದಾಖಲಿಸಿದ್ದು ಯಾರ ವಿರುದ್ಧ? ಇಲ್ಲಿದೆ ಮಾಹಿತಿ

VIDEO| ಮೊಸಳೆಯನ್ನೇ ಮದ್ವೆಯಾದ ಮೆಕ್ಸಿಕೋ ಮೇಯರ್​: ಕಾರಣ ಕೇಳಿದ್ರೆ ಹುಬ್ಬೇರೋದು ಖಂಡಿತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
