ಬೆಂಗಳೂರು:ಪ್ರಿಯತಮೆ ಹಾಗೂ ಶೋಕಿಗಾಗಿ ಪರಿಚಯಸ್ಥರ ಮನೆಯಲ್ಲೇ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಕೆ.ಪಿ. ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.
ನವೀನ್ ಕುಮಾರ್ (22) ಬಂಧಿತ ಆರೋಪಿ. ಈತ ಕೆ.ಪಿ ಅಗ್ರಹಾರ ನಿವಾಸಿ. ಬಂಧಿತನಿಂದ 4 ಲಕ್ಷ 90 ಸಾವಿರ ರೂಪಾಯಿ ಮೌಲ್ಯದ 109 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ನವೀನ್​ ಪರಿಚಯಸ್ಥ ಶಿವಶಂಕರಯ್ಯ ಎಂಬುವರ ಮನೆಯಲ್ಲಿ ಮಾರ್ಚ್ 28 ರಂದು ಕಳ್ಳತನ ನಡೆದಿತ್ತು. ಅಂದು ಶಿವಶಂಕರಯ್ಯ ಅವರ ಪತ್ನಿ ನವೀನ್ ಮನೆಗೆ ಬಂದಿದ್ದರು. ನವೀನ್, ತಾಯಿ ಜೊತೆಗೆ ಮಾತನಾಡುವಾಗ ಮನೆಯಲ್ಲಿ ಯಾರು ಇಲ್ಲ ಬೀಗ ಹಾಕಿ ಬರುವುದನ್ನು ಮರೆತಿದ್ದೇನೆ ಎಂದು ಹೇಳಿದ್ದರು.
ಇದನ್ನು ಕೇಳಿಸಿಕೊಂಡ ನವೀನ್, ತಕ್ಷಣ ಶಿವಶಂಕರಯ್ಯ ಮನೆಗೆ ಓಡಿ ಹೋಗಿದ್ದಾನೆ. ಮನೆಯ ಬೀರುವಿನಲ್ಲಿದ್ದ ಚಿನ್ನದ ಚೈನ್, ಕಿವಿಯೋಲೆ ಹಾಗೂ ಉಂಗುರ ಸೇರಿದಂತೆ 106 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದ. ಮನೆಯಲ್ಲಿ ಕಳ್ಳತನ ಆಗಿರುವುದನ್ನು ನೋಡಿ ಶಿವಶಂಕರಯ್ಯ ದೂರು ನೀಡಿದ್ದರು.
ಪಿಯುಸಿ ಓದಿದ್ದ ನವೀನ್ ಕುಮಾರ್ ಕೆಫೆ ಒಂದರಲ್ಲಿ ಕೆಲಸ ಮಾಡ್ತಿದ್ದ. ಅಲ್ಲದೇ ಅತ್ತೆ ಮಗಳನ್ನು ಪ್ರೀತಿಸ್ತಿದ್ದ. ಕದ್ದ ಚಿನ್ನವನ್ನು ಮಾರಿ ಅತ್ತೆ ಮಗಳಿಗೆ ಹಣ ನೀಡಿದ್ದ. ಅಲ್ಲದೇ 27 ಗ್ರಾಂ ಚಿನ್ನವನ್ನು ಬ್ಯಾಂಕ್​ನಲ್ಲಿ ಇಟ್ಟಿದ್ದ. ಸಿಸಿಟಿವಿ ದೃಶ್ಯದ ಸುಳಿವು ಮೇರೆಗೆ ಆರೋಪಿಯನ್ನು ಪತ್ತೆ ಮಾಡಿದ ಕೆ.ಪಿ.ಅಗ್ರಹಾರ ಪೊಲೀಸರು ನವೀನ್​ನನ್ನು ಜೈಲಿಗಟ್ಟಿದ್ದಾರೆ.(ದಿಗ್ವಿಜಯ ನ್ಯೂಸ್​)
ಹೆಣ್ಣು ಮಗು ಜನಿಸಿದ ಖುಷಿ: ಹೆಲಿಕಾಪ್ಟರ್​ ಮೂಲಕ ಮಗಳನ್ನು ಅದ್ಧೂರಿಯಾಗಿ ಮನೆಗೆ ಬರಮಾಡಿಕೊಂಡ ತಂದೆ!

ಏನಿದು ಸ್ಯಾಮ್​? ಮಾಜಿ ಪತಿಯ ಫೋಟೋ ಶೇರ್​ ಮಾಡುವ ಮೂಲಕ ಫ್ಯಾನ್ಸ್​ಗೆ ಸರ್ಪ್ರೈಸ್​ ಕೊಟ್ಟ ಸಮಂತಾ..!

ಕನ್ನಡ ಭಾಷೆ ಕಡ್ಡಾಯ ಕಲಿಕೆಗೆ ಹೈಕೋರ್ಟ್ ತಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
