ಬೆಳಗಾವಿ:ಸಚಿವ ಕೆ.ಎಸ್​. ಈಶ್ವರಪ್ಪ ಮೇಲೆ 40% ಕಮಿಷನ್​ ಆರೋಪ ಮಾಡಿ ಆತ್ಮಹತ್ಯೆ ಶರಣಾಗಿರುವ ಗುತ್ತಿಗೆದಾರ ಸಂತೋಷ ಪಾಟೀಲ್ ಅಂತ್ಯಕ್ರಿಯೆ ಇಂದು ನಡೆಯಲಿದ್ದು, ಅವರ ಪಾರ್ಥಿವ ಶರೀರ ಬೆಳಗಾವಿ ಗಡಿ ತಲುಪಿದೆ.
ಎಸ್ಕಾರ್ಟ್​ ಮುಖಾಂತರ ಪಾರ್ಥಿವ ಶರೀರವನ್ನು ಬೆಳಗಾವಿ ಜಿಲ್ಲಾ ಮತ್ತು ನಗರ ಪೊಲೀಸರು ಸ್ವೀಕರಿಸಿದ್ದಾರೆ. ಆದರೆ, ಸಂತೋಷ್​ ಮೃತದೇಹ ಹುಟ್ಟೂರಿಗೆ ಹೋಗುತ್ತಿದ್ದಂತೆ ಮೃತ ಸಂತೋಷ ಸಹೋದರ ಬಸನಗೌಡ ಪಾಟೀಲ್​ ಆರೋಪಿಗಳ ಬಂಧನಕ್ಕೆ ಪಟ್ಟು ಹಿಡಿದಿದ್ದಾರೆ.
ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪೊಲೀಸ್ ಕಮೀಷನರ್ ಕಚೇರಿ ಮುಂದೆ ಪ್ರತಿಭಟನೆ ಮಾಡಲು ಶವ ತೆಗೆದುಕೊಂಡ ಹೋಗಲು ಬಸನಗೌಡ ಪಾಟೀಲ ಮುಂದಾದರು. ಕಮೀಷನರ್ ಕಚೇರಿಗೆ ಹೋಗುವಾಗ ಮಾರ್ಗ ಮಧ್ಯದಲ್ಲೆ ಪೊಲೀಸರು ತಡೆದರು. ಈ ವೇಳೆ ಬಸನಗೌಡ ಪಾಟೀಲ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ಆರೋಪಿಗಳನ್ನ ಬಂಧಿಸುವಂತೆ ಪಟ್ಟು ಹಿಡಿದ ಬಸನಗೌಡ ಪಾಟೀಲ, ಬೇಕಾದ್ರೆ ನಿಮ್ಮ ಮೇಲಾಧಿಕಾರಿಗಳಿಗೆ ಮಾತನಾಡಿ ಎಂದರು. ಈ ವೇಳೆ ಮೇಲಾಧಿಕಾರಿಗಳ ಜತೆಗೆ ಡಿಸಿಪಿ ರವೀಂದ್ರ ಗಡಾದೆ ಮಾತನಾಡಿದರು. ಆರೋಪಿಗಳನ್ನ ಬಂಧಿಸುವ ಭರವಸೆ ನೀಡಿದ ಹಿನ್ನೆಲೆ ಕುಟುಂಬಸ್ಥರು ಪಟ್ಟು ಸಡಿಲಿಸಿದರು.
ಸದ್ಯ ಸಂತೋಷ್​ ಮೃತದೇಹವನ್ನು ಹುಟ್ಟೂರು ಕಡೆ ತೆಗೆದುಕೊಂಡು ಹೋಗಲಾಗಿದೆ. ಕೆಲಕಾಲ ಗೊಂದಲ ವಾತಾವರಣ ಮೂಡಿ ಆತಂಕ ಸೃಷ್ಟಿಯಾಗಿತ್ತು. ಈಗ ವಾತಾವರಣ ತಿಳಿಯಾಗಿದೆ.(ದಿಗ್ವಿಜಯ ನ್ಯೂಸ್​)
ಸಪ್ತಪದಿಗೆ ಹೊಸ ಮುಹೂರ್ತ ಫಿಕ್ಸ್; 28, ಮೇ 11, 25ಕ್ಕೆ ಸಾಮೂಹಿಕ ವಿವಾಹ

ಆಧಾರರಹಿತ ಆರೋಪ, ತೇಜೋವಧೆಗೆ ನಾವು ಹೆದರಲ್ಲ; ಸಚಿವ ಡಾ.ಕೆ. ಸುಧಾಕರ್ ಎಚ್ಚರಿಕೆ

ಈಶ್ವರಪ್ಪ ಅಚಲ, ಬಿಜೆಪಿ ಚಂಚಲ; ರಾಜೀನಾಮೆ ವಿಚಾರದಲ್ಲಿ ರಾಜಿ?: ಸಚಿವರ ವಿರುದ್ಧ ಎಫ್​ಐಆರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − 3 =
Remember me
