ಕಲಬುರಗಿ:ಭ್ರಷ್ಟರ ಪಾಲಿಗೆ ದುಸ್ವಪ್ನವಾಗಿ ಕಾಡುತ್ತಿರುವ ಲೋಕಾಯುಕ್ತ ಪೊಲೀಸರು ತಮ್ಮ ಬೇಟೆಯನ್ನು ಮುಂದುವರಿಸಿದ್ದಾರೆ. ಕಲಬುರಗಿಯಲ್ಲಿ 30 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಪೊಲೀಸ್​ ಕಾನ್ಸ್​ಟೇಬಲ್​ ಮತ್ತು ಚಾಲಕನನ್ನು ಲೋಕಾಯುಕ್ತ ಪೊಲೀಸರು ಬಲೆಗೆ ಕೆಡವಿದ್ದಾರೆ.
ಜೇವರ್ಗಿ ಠಾಣೆಯ ಕಾನ್ಸ್​ಟೇಬಲ್ ಶಿವರಾಯ್ ಮತ್ತು ಕಾರು ಚಾಲಕ ಅವ್ವಣ್ಣ, ಲೋಕಾಯುಕ್ತ ಬಲೆಗೆ ಸಿಲುಕಿದ್ದಾರೆ. ಮರಳು ಸಾಗಾಣಿಕೆ ಸಂಬಂಧ ಅಖಿಲ್ ಎಂಬುವರಿಂದ 30 ಸಾವಿರ ರೂಪಾಯಿ ಲಂಚ‌ ಪಡೆಯುವಾಗ ಲೋಕಾಯುಕ್ತ ದಾಳಿ ನಡೆಸಿದ್ದು, ಶಿವರಾಯ್ ಮತ್ತು ಅವ್ವಣ್ಣ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ.
ಲೋಕಾಯುಕ್ತ ಎಸ್​ಪಿ ಅಬ್ದುಲ್ ರೌಫ್ ಕರ್ನೂಲ್ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ. ಪೇದೆಗಳಿಬ್ಬರನ್ನು ಲೋಕಾಯುಕ್ತ ಪೊಲೀಸರು ಸ್ಥಳದಲ್ಲೇ ಬಂಧಿಸಿದ್ದು, ಹೆಚ್ಚಿನ ವಿಚಾರಣೆಗೆ ಕರೆದೊಯ್ದಿದ್ದಾರೆ.
ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆಯಿಂದ ಖದರ್ ಕಳೆದುಕೊಂಡು ಕಳಾಹೀನವಾಗಿದ್ದ ಲೋಕಾಯುಕ್ತಕ್ಕೆ ಹೈಕೋರ್ಟ್​ ಮರುಜೀವ ನೀಡಿದ ಬಳಿಕ, ಸಕ್ರೀಯವಾಗಿರುವ ಲೋಕಾಯುಕ್ತವು, ಸರ್ಕಾರದ ವ್ಯವಸ್ಥೆಯಲ್ಲಿ ಅಡಗಿರುವ ಭ್ರಷ್ಟರ ಮುಖವಾಡಗಳನ್ನು ಕಳಚುತ್ತಿದೆ.(ದಿಗ್ವಿಜಯ ನ್ಯೂಸ್​)
ಔಷಧ ಚೀಟಿಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್ ಆಗುತ್ತಿರುವ ಡಾಕ್ಟರ್​ ಇವರು! ಅಂಥದ್ದೇನಿದೆ ಈ ಚೀಟಿಯಲ್ಲಿ?

ಈವರೆಗೂ ನೋಡಿರದ ಮೀರಾ ಜಾಸ್ಮಿನ್ ಹಾಟ್​ ಅವತಾರ! ಮಲಯಾಳಿ ಬ್ಯೂಟಿಯ ಮೈಮಾಟಕ್ಕೆ ಫ್ಯಾನ್ಸ್​ ಫಿದಾ

ನಿಂತ ವಾಹನದಲ್ಲಿ ಸಾವಾದ್ರೂ ಪರಿಹಾರ ಕೊಡ್ಬೇಕು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − one =
Remember me
