ಬೆಂಗಳೂರು:ಪ್ರೀತಿಸಿ ಮದುವೆಯಾದ ಜೋಡಿಗೆ ಎಲ್ಲಿದೆ ರಕ್ಷಣೆ ಎನ್ನುವ ಪ್ರಶ್ನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿರುವ ಈ ಘಟನೆಯಿಂದ ಮತ್ತೆ ಮುನ್ನೆಲೆಗೆ ಬಂದಿದೆ. ಪ್ರೀತಿಸಿ ಮದುವೆಯಾದ ನಂತರವೂ ಮದುಮಗಳನ್ನು ಆಕೆಯ ಪಾಲಕರು ಅಪಹರಿಸಿರುವ ಘಟನೆ ಬ್ಯಾಡರಹಳ್ಳಿಯ ವಿದ್ಯಾಮಾನ್ಯ ನಗರದಲ್ಲಿ ನಡೆದಿದೆ.
ಮದುಮಗನ ಅಕ್ಕನ ಮನೆಯಲ್ಲಿದ್ದ ನವದಂಪತಿಯ ಮೇಲೆ ದಾಳಿ ಮಾಡಿ ಮದುಮಗಳನ್ನು ಆಕೆಯ ಪಾಲಕರೇ ಅಪಹರಿಸಿದ್ದಾರೆ. ಕಳೆದ ಮೇ. 25 ರಂದು ಜಲಜಾ ಎಂಬಾಕೆ ಗಂಗಾಧರ್​ನೊಂದಿಗೆ ದೇವಸ್ಥಾನದಲ್ಲಿ ಮದುವೆಯಾಗಿ, 30ರಂದು ನೆಲಮಂಗಲದ ನೋಂದಣಾಧಿಕಾರಿಗಳ ಕಚೇರಿಯಲ್ಲಿ ತಮ್ಮ ವಿವಾಹವನ್ನು ನೋಂದಣಿ ಮಾಡಿಸಿದ್ದಾರೆ.
ಗಂಗಾಧರ್ ಹಾಗೂ ಜಲಜಾ ಇಬ್ಬರು ನೆಲಮಂಗಲ ತಾಲೂಕಿನ ವೀರಸಾಗರ ನಿವಾಸಿಗಳು. ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಆದರೆ, ಮದುವೆಗೆ ಜಲಜಾ ಮನೆಯವರ ಒಪ್ಪಿಗೆ ಇರಲಿಲ್ಲ. ಆದರೂ ಪಾಲಕರನ್ನು ಎದುರು ಹಾಕಿಕೊಂಡು ಜಲಜಾ ತನ್ನ ಪ್ರಿಯಕರನನ್ನು ವರಿಸಿದ್ದಳು.
ಇದಾದ ಬಳಿಕ ನವದಂಪತಿ ಗಂಗಾಧರ್​ ಅಕ್ಕನ ಮನೆಯಲ್ಲಿ ಉಳಿದಿದ್ದರು. ಬ್ಯಾಡರಹಳ್ಳಿ ಪೊಲೀಸರ ಹೆಸರೇಳಿಕೊಂಡು ಸುಮಾರು 20 ಜನರ ಗ್ಯಾಂಗ್‌ ಬ್ಯಾಡರಹಳ್ಳಿಯ ವಿದ್ಯಾಮಾನ್ಯ ನಗರದಲ್ಲಿರುವ ಗಂಗಾಧರ್​ ಅಕ್ಕನ ಮನೆಯ ಮೇಲೆ ಏಕಾಏಕಿ ದಾಳಿ ಮಾಡಿದೆ. ಈ ವೇಳೆ ತಡೆಯಲು ಬಂದ ಎಲ್ಲರ ಮೇಲೆ ಹಲ್ಲೆ ಮಾಡಿ ಜಲಜಾಳನ್ನು ಅಲ್ಲಿಂದ ಅಪಹರಿಸಿದ್ದಾರೆ.
ಜಲಜಾ ತಂದೆ ದೇವರಾಜು, ಸಂಬಂಧಿ ಮಹೇಶ್ ಹಾಗೂ ಮತ್ತವರ ಗ್ಯಾಂಗ್​ ವಿರುದ್ಧ ಆರೋಪ ಕೇಳಿಬಂದಿದೆ. ಗಂಗಾಧರ್​ ಅಕ್ಕ ಸಾಕಮ್ಮ ಮನೆ ಮೇಲೆ ದಾಳಿ ಮಾಡಿದ್ದು, ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯ ಬಳಿ ಹಣ ಕಬಳಿಸಿದ ರಾಮನಗರ ಲೇಡಿ PSI? ದುಡ್ಡು ಕೇಳಿದ್ದಕ್ಕೆ ದರ್ಪದ ಮಾತು

ತೀವ್ರ ಹೋರಾಟ ನಡೆಸಿ ಕೊನೆಗೂ ತನ್ನ ಪ್ರೇಯಸಿಯನ್ನು ಮರುಪಡೆದ ಆಧಿಲಾ: ಗೆದ್ದು ಬೀಗಿದ ಸಲಿಂಗ ಜೋಡಿ!

ಸಾಲು ಸಾಲು ಚಿತ್ರಗಳು ಸೋತರೂ ಪೂಜಾ ಹೆಗ್ಡೆಗೆ ಕಿಂಚಿತ್ತೂ ಕಡಿಮೆ ಆಗಿಲ್ಲ ಡಿಮ್ಯಾಂಡ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 19 =
Remember me
