ಕಲಬುರಗಿ:ಮಹಾರಾಷ್ಟ್ರದಲ್ಲಿ ಗಾಂಜಾ ಗ್ಯಾಂಗ್​ ನಡೆಸಿದ ಮಾರಾಕ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಸಿಪಿಐ ಶ್ರೀಮಂತ್ ಇಲ್ಲಾಳ ಅವರಿಗೆ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಹತ್ತು ತಜ್ಞ ವೈದ್ಯರಿಂದ ಚಿಕಿತ್ಸೆ ಮುಂದುವರಿದಿದೆ.
ಇಲ್ಲಾಳ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಮಾತನಾಡಿರುವ ಡಾ. ವಿಕ್ರಂ ಸಿದ್ದಾರೆಡ್ಡಿ, ಆಸ್ಪತ್ರೆಗೆ ದಾಖಲಾದಾಗ ಸಿಪಿಐ ಅವರ ನಾಡಿ ಬಡಿತ ಹೆಚ್ಚಾಗಿತ್ತು ಮತ್ತು ಬಿಪಿ ಕಡಿಮೆ ಇತ್ತು. ಎದೆಯಲ್ಲಿ 8 ರಿಬ್​ಗಳು ಮುರಿದಿವೆ. ಸದ್ಯ‌ ಜೀವ ಉಳಿಸುವ ಔಷಧಿಗಳನ್ನು ಕೊಡಲಾಗಿದೆ‌. ಇಲ್ಲಾಳ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಕಿಡ್ನಿ ಕಾರ್ಯ ಸಾಮಾನ್ಯ ಸ್ಥಿತಿಗೆ ಬಂದಿದೆ. ನಿನ್ನೆಗಿಂತ ಇವತ್ತು ಚೇತರಿಸಿಕೊಂಡಿದ್ದಾರೆಂದು ತಿಳಿಸಿದ್ದಾರೆ.
ಒಳಪೆಟ್ಟಿನಿಂದ ಆಗುತ್ತಿದ್ದ ರಕ್ತಸ್ರಾವ ನಿಂತಿದೆ. ಆಮ್ಲಜನಕದ ಅವಶ್ಯಕತೆ ಕಡಿಮೆ ಆಗಿದೆ. ಕಣ್ಣು ತೆರೆಯುವ ಪ್ರಯತ್ನ ಮಾಡುತ್ತಿದ್ದಾರೆ. ಶ್ವಾಸಕೋಸ ಡ್ಯಾಮೇಜ್ ಇರೋದ್ರಿಂದ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ತಲೆಗೆ ಪೆಟ್ಟು ಬಿದ್ದಿರೋದ್ರಿಂದ ಬ್ಲಡ್ ಕ್ಲಾಟ್ ಆಗಿದೆ. ಒಟ್ಟಾರೆ ನಿನ್ನೆಗಿಂತ ಇವತ್ತು ಇಲ್ಲಾಳ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ, ಏರ್ ಲಿಫ್ಟ್ ಮಾಡಿದ್ರೆ ಸ್ವಲ್ಪ ತೊಂದರೆ ಆಗುವ ಸಾಧ್ಯತೆ ಇದೆ ಎಂದು ಹೇಳಿದರು.
ಘಟನೆ ಹಿನ್ನೆಲೆ ಏನು?ಸಿಪಿಐ ಇಲ್ಲಾಳ ಅವರ ನೇತೃತ್ವದ ಪೊಲೀಸ್ ತಂಡ ಕಳೆದ ಕೆಲವು ದಿನಗಳಿಂದ ಗಾಂಜಾ ದಂಧೆ ಪ್ರಕರಣದ ಕಾರ್ಯಾಚರಣೆ ನಡೆಸುತ್ತಿತ್ತು. ಕಳೆದ ಎರಡ್ಮೂರು ದಿನಗಳ ಹಿಂದೆ ಗಾಂಜಾ ಪೂರೈಕೆದಾರ ಸಂತೋಷನನ್ನು ಇಲ್ಲಾಳ ಅವರ ತಂಡ ಬಂಧಿಸಿ, ವಿಚಾರಣೆಯನ್ನು ನಡೆಸಿತ್ತು. ಗಾಂಜಾ ದಂಧೆಯ ಮೂಲವನ್ನು ಭೇದಿಸಲು ಶುಕ್ರವಾರ (ಸೆ. 23) ಮಧ್ಯಾಹ್ನ ಮಹಾರಾಷ್ಟ್ರಕ್ಕೆ ಇಲ್ಲಾಳ ಅವರ ನೇತೃತ್ವದಲ್ಲಿ ಸುಮಾರು 10 ಜನರ ಪೊಲೀಸ್ ತಂಡ ಹೋಗಿತ್ತು. ಗಾಂಜಾ ಬೆಳೆಯುವ ಹೊಲಗಳಿಗೆ ಹೋಗಿದ್ದ ಸಂದರ್ಭದಲ್ಲಿ ಸುಮಾರು 30 ರಿಂದ 40 ಮಂದಿ ಗಾಂಜಾ ದಂಧೆಕೋರರು ಕಟ್ಟಿಗೆಗಳಿಂದ ಪೊಲೀಸರ ಮೇಲೆ ಮಾರಾಣಾಂತಿಕವಾಗಿ ಹಲ್ಲೆ ಮಾಡಿದರು.
ಮಹಾರಾಷ್ಟ್ರದ ಉಮರ್ಗಾ ತಾಲ್ಲೂಕಿನ ತರೂರಿ ಗ್ರಾಮದಲ್ಲಿ ಈ ಘಟನೆ ನಡೆಯಿತು. ಶುಕ್ರವಾರ ರಾತ್ರಿ ಸುಮಾರು 9:30ರ ವೇಳೆಗೆ ಪೊಲೀಸರ ಮೇಲೆ ದಾಳಿಯಾಗಿದೆ. ದಾಳಿ ಮಾಡುತ್ತಿದ್ದಂತೆ ಸಿಪಿಐ ಶ್ರೀಮಂತ ಇಲ್ಲಾಳ ಅವರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆದರೂ, ಅದಕ್ಕೆ ಜಗ್ಗದ ದಂಧೆಕೋರರು, ಪೊಲೀಸರನ್ನೇ ಅಟ್ಟಾಡಿಸಿದ್ದಾರೆ. ಈ ವೇಳೆ ದಾಳಿಯಿಂದ ಪ್ರಾಣ ಉಳಿಸಿಕೊಳ್ಳಲು ಪೊಲೀಸರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಿಪಿಐ ಇಲ್ಲಾಳ ಅವರನ್ನು ಶುಕ್ರವಾರ ಮಧ್ಯರಾತ್ರಿ ಸುಮಾರು 2.30 ರ ವೇಳೆಗೆ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.(ದಿಗ್ವಿಜಯ ನ್ಯೂಸ್​)
10 ಸಾವಿರಕ್ಕೆ ನನ್ನನ್ನು ನಾನು ಮಾರಿಕೊಳ್ಳಲ್ಲ: ಅಂಕಿತಾಳ ವಾಟ್ಸ್​ಆ್ಯಪ್​ ಚಾಟ್​ನಲ್ಲಿ ಸ್ಫೋಟಕ ಮಾಹಿತಿ

ಹೇಳದೆ ಕೇಳದೆ ಬಿಟ್ಟುಹೋದ ಗಂಡ; ಒಂದು ವರ್ಷದ ಮಗುವಿನೊಂದಿಗೆ ಬದುಕು ಕಟ್ಟಿಕೊಂಡ ಮಹಿಳೆಯ ಕಥೆಯೇ ರೋಚಕ

ರಾತ್ರಿಯಿಂದ ರಾಜ್ಯದಲ್ಲಿ 108 ಆ್ಯಂಬುಲೆನ್ಸ್ ಸೇವೆ ಸ್ಥಗಿತ: ಜನರ ಪರದಾಟ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:ten + nineteen =
Remember me
