ಬೆಂಗಳೂರು:ಕಾಂಗ್ರೆಸ್​ನ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆ ಸಮೀಪಿಸುತ್ತಿದ್ದು, ಸಂಸದ ಶಶಿ ತರೂರ್ ಮತ್ತು ಮಾಜಿ ಸಚಿವ ಕೆ.ಎನ್​.ತ್ರಿಪಾಠಿ, ಗಾಂಧಿ ಪರಿವಾರದ ನಿಷ್ಠ ಮತ್ತು ಪಕ್ಷದ ಶಿಸ್ತಿನ ಸಿಪಾಯಿ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸಿದ್ದಾರೆ. ನಿನ್ನೆಯಷ್ಟೇ ಮೂವರು ನಾಯಕರು ನಾಮಪತ್ರ ಸಲ್ಲಿಸಿದ್ದು, ಮುಂದಿನ ಕಾಂಗ್ರೆಸ್​ ಅಧ್ಯಕ್ಷ ಯಾರಾಗಲಿದ್ದಾರೆ ಎಂಬ ಕುತೂಹಲ ಗರಿಗೆದರಿರುವಾಗಲೇ ಖರ್ಗೆ ಕುರಿತಾದ ಅಚ್ಚರಿಯ ಭವಿಷ್ಯವೊಂದು ಹೊರಬಿದ್ದಿದೆ.
ಇತ್ತೀಚಿನ ದಿನಗಳಲ್ಲಿ ರಾಜಕೀಯ ಭವಿಷ್ಯದ ಕುರಿತು ಭಾರೀ ಸುದ್ದಿಯಲ್ಲಿರುವ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಇದೀಗ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರ ಕುರಿತು ಭವಿಷ್ಯ ನುಡಿದಿದ್ದಾರೆ. ಖರ್ಗೆ ಅವರು ಕಾಂಗ್ರೆಸ್​ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುತ್ತಾರೆ ಎಂದು ಫೇಸ್​ಬುಕ್​ ಪೇಜ್​ನಲ್ಲಿ ಭವಿಷ್ಯವಾಣಿಯನ್ನು ಸ್ವಾಮೀಜಿ ಪೋಸ್ಟ್​ ಮಾಡಿದ್ದಾರೆ.
ಸ್ವಾಮೀಜಿ ಅವರ ಭವಿಷ್ಯವಾಣಿಯ ಸಾರಾಂಶ ಈ ಕೆಳಕಂಡಂತಿದೆಖರ್ಗೆ ಅವರಿಗೆ ಸದ್ಯದ ದಶಾಭುಕ್ತಿಯಲ್ಲಿ ಅತ್ಯಂತ ಅನುಕೂಲಕರ ಸ್ಥಿತಿಗತಿಗಳು ನಡೆಯುತ್ತಿರುವುದರಿಂದ ಖರ್ಗೆ ಅವರಿಗೆ ಅಧಿಕಾರಿ ಪ್ರಾಪ್ತಿಯಾಗಲಿದೆ. ಆದ್ದರಿಂದ ಅವರಿಗೆ ಆಶೀರ್ವಾದ ಮಾಡುತ್ತಾ ದೀನ-ದಲಿತರಿಗೆ, ಬಡವರಿಗೆ, ನಿರುದ್ಯೋಗಿಗಳನ್ನು ಗುರುತಿಸಿ ಅವರಿಗೆ ಸಹಾಯವನ್ನು ಮಾಡಿ. ಮೇಲಾಗಿ ನಮ್ಮ ದೇಶ ನಿಂತಿರುವುದು ಕೃಷಿಯ ಮೇಲೆ ಆದ್ದರಿಂದ ರೈತರನ್ನು ಗಮನಿಸಿ, ಆದಷ್ಟು ರೈತರಿಗೆ ಆರ್ಥಿಕತೆಯ ಸಹಾಯ ಮಾಡಿ. ರೈತರ ಕುಟುಂಬದ ಶಿಕ್ಷಿತರಿಗೆ ನೆರವಾಗಿ, ಇದರಿಂದ ನಿಮಗೆ ಶ್ರೀ ಭಗವತಿ ಚಂಡಿಕಾ ಪರಮೇಶ್ವರಿಯು ಅನುಗ್ರಹ ಮಾಡುತ್ತಾಳೆ. ಇದು ನಿಮಗೆ ನೆನಪಿರಲಿ. ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶುಭ ಆಶೀರ್ವಾದಗಳನ್ನು ನೀಡುತ್ತಾ, ಎಲ್ಲರೂ ಒಳ್ಳೆಯದನ್ನೇ ಯೋಚಿಸಿ, ಒಳ್ಳೆಯದನ್ನೇ ಮಾಡಿ, ನಿಮಗೂ ಒಳ್ಳೆಯದೇ ಆಗುತ್ತದೆ. ಎನಗಿಂತ ಕಿರಿಯರಿಲ್ಲ, ಸದ್​ ಭಕ್ತರಿಗಿಂತ ಹಿರಿಯರಿಲ್ಲ ಎಂದು ಭವಿಷ್ಯವಾಣಿಯನ್ನು ಸ್ವಾಮೀಜಿ ನುಡಿದಿದ್ದಾರೆ.

80ರ ಖರ್ಗೆಗೆ ಒಲಿಯತ್ತಾ ಎಐಸಿಸಿ ಪಟ್ಟ? ಭಿನ್ನಮತಿಯರೂ ಸೇರಿ 30 ಮಂದಿ ಸಹಿಯೊಂದಿಗೆ ನಾಮಪತ್ರ ಸಲ್ಲಿಕೆ

ಪಕ್ಷನಿಷ್ಠೆಗೆ ಉನ್ನತ ಹುದ್ದೆಯ ಅವಕಾಶ: ಖರ್ಗೆ ನಾಮಪತ್ರ ಸಲ್ಲಿಕೆ, ಗೆಲುವು ಬಹುತೇಕ ಖಚಿತ

ಖರ್ಗೆಗೆ ಕಾಂಗ್ರೆಸ್ ಅಧ್ಯಕ್ಷ ಕಿರೀಟ: ಕೊನೆಯ ದಿನ ನಾಮಪತ್ರ ಸಲ್ಲಿಕೆ, ಗಾಂಧಿಯೇತರ ನಾಯಕನ ನೇತೃತ್ವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 7 =
Remember me
