ಮಂಡ್ಯ:ಮಗಳ ಆತ್ಮಹತ್ಯೆಯಿಂದ ಮನನೊಂದ ತಂದೆಯು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮದಲ್ಲಿ ನಡೆದಿದೆ. ಅಪ್ಪಂದಿರ ದಿನದಂದೇ ಈ ದುರಂತ ಸಂಭವಿಸಿರುವುದು ಮನಕಲಕುವಂತಿದೆ.
ಬಾಂಧವ್ಯ (17), ರಾಜು (65) ಸಾವಿಗೀಡಾದ ತಂದೆ-ಮಗಳು. ಪಿಯುಸಿ ಕಾಲೇಜು ಸೇರಿಸುವ ವಿಚಾರದಲ್ಲಿಯೂ ತಂದೆಯ ಜತೆ ಬಾಂದವ್ಯ ಮುನಿಸಿಕೊಂಡಿದ್ದಳು. ಅಲ್ಲದೆ, ಆನ್​ಲೈನ್​ ಕ್ಲಾಸ್​ಗಳಿಂದ ಬಾಂದವ್ಯ ಖಿನ್ನತೆಗೆ ಒಳಗಾಗಿದ್ದಳು. ವಿದ್ಯಾಭ್ಯಾಸ ಕುಂಠಿತವಾಗುವ ಆತಂಕ ಹೊಂದಿದ್ದಳು. ಕಳೆದ ವರ್ಷ ಎಸ್​ಎಸ್​ಎಲ್​ಸಿಯಲ್ಲಿ ಶೇ. 92 ಅಂಕ ಪಡೆದಿದ್ದಳು.
ಬನ್ನೂರು ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಬಾಂದವ್ಯ ಮಧ್ಯರಾತ್ರಿ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾಳೆ. ಮಗಳ ಸಾವಿನಿಂದ ಮನನೊಂದು ತಂದೆಯೂ ಮೃತಪಟ್ಟಿದ್ದಾರೆ. ಲೋ ಬಿಪಿಯಿಂದಾಗಿ ತಂದೆ ರಾಜು ಸಾವಿಗೀಡಾಗಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿದ ಮಳವಳ್ಳಿ ಗ್ರಾಮಾಂತರ ಠಾಣಾ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.(ದಿಗ್ವಿಜಯ ನ್ಯೂಸ್​)
ಪತಿ ಕಳೆದುಕೊಂಡ ಮಹಿಳೆ ಪತ್ನಿ ಕಳೆದುಕೊಂಡ ವ್ಯಕ್ತಿ ಜತೆ ಮರುವಿವಾಹ: ಮುಂದಾಗಿದ್ದು ದುರಂತ!

ಮಲೇಷ್ಯಾದ ಪ್ರವಾಸಿ ರಾಯಭಾರಿಗೆ ಮೂರು ಬಾರಿ ಗರ್ಭಪಾತ ಮಾಡಿಸಿ ಎಸ್ಕೇಪ್‌ ಆದ ಮಾಜಿ ಸಚಿವ ಅರೆಸ್ಟ್‌!

ನಿಧಿ ಆಸೆಗೆ ಗಭರ್ಗುಡಿಯನ್ನೇ ಅಗೆದ ಸರ್ಕಾರಿ ಅಧಿಕಾರಿ, ಅರ್ಚಕ, ಜ್ಯೋತಿಷಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + five =
Remember me
