ಮಂಡ್ಯ:ಕೈ ತಪ್ಪಿ ಹೋಗುತ್ತಿರುವ ಮಂಡ್ಯವನ್ನು ಬಿಗಿ ಮಾಡಿಕೊಳ್ಳಲು ಮುಂದಾಗಿರುವ ಮಾಜಿ ಸಿಎಂ ಎಚ್​​.ಡಿ. ಕುಮಾರಸ್ವಾಮಿ ಅವರು ಮೊದಲ ಹೆಜ್ಜೆಯಾಗಿ ನಾಳೆ ನಾಗಮಂಗಲದಲ್ಲಿ ಬೃಹತ್ ಸಮಾವೇಶ ನಡೆಸಲಿದ್ದಾರೆ.
ಮಂಡ್ಯದಲ್ಲಿ ಸಾಲು ಸಾಲು ಚುನಾವಣೆ ಸೋಲುಗಳಿಂದ ಜೆಡಿಎಸ್​ ಕಂಗೆಟ್ಟಿರುವ ಹಿನ್ನೆಲೆಯಲ್ಲಿ ಡ್ಯಾಮೇಜ್ ಕಂಟ್ರೋಲ್‌ಗೆ ಎಚ್​ಡಿಕೆ ಮುಂದಾಗಿದ್ದಾರೆ. ಈಗಾಗಲೆ ಲೋಕಸಭೆ, ಕೆ.ಆರ್‌. ಪೇಟೆ ವಿಧಾನಸಭೆ ಉಪಚುನಾವಣೆ, ಎಂಎಲ್‌ಸಿ ಚುನಾವಣೆಯಲ್ಲಿ ಜೆಡಿಎಸ್​ ಸೋತಿದೆ. ಹೀಗಾಗಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ 7 ಕ್ಷೇತ್ರಗಳಲ್ಲಿ ಹಿಡಿತ ಇಟ್ಟುಕೊಳ್ಳಲು ಜೆಡಿಎಸ್​ ಸಿದ್ಧತೆ ನಡೆಸಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲದಿಂದ ಚುನಾವಣೆ ಅಖಾಡ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ನಾಳೆ ನಾಗಮಂಗಲದಲ್ಲಿ ಜೆಡಿಎಸ್‌ನ ಬೃಹತ್ ಸಮಾವೇಶ ನಡೆಯಲಿದೆ. ಈ ಸಮಾವೇಶ ಮೂಲಕ ಚಲುವರಾಯಸ್ವಾಮಿ‌ ಹಾಗೂ ಶಿವರಾಮೇಗೌಡಗೆ ಟಕ್ಕರ್ ಕೊಡಲು ಜೆಡಿಎಸ್​ ಸಿದ್ಧತೆ ಮಾಡಿಕೊಂಡಿದೆ.
ಈ ಹಿಂದಿನ ಚುನಾವಣೆಯಲ್ಲಿ ತೆರೆಯ ಹಿಂದೆ‌ ನಿಂತು ಜೆಡಿಎಸ್‌ ಸೋಲಿಗೆ ಚಲುವರಾಯಸ್ವಾಮಿ ಕಾರಣವಾಗಿದ್ದರು. ಜೆಡಿಎಸ್‌‌ನಿಂದ ಉಚ್ಚಾಟನೆ ಬಳಿಕ ಶಿವರಾಮೇಗೌಡ ರೆಬೆಲ್ ಆಗಿದ್ದಾರೆ. ಸಮಾವೇಶದಲ್ಲಿ 40 ಸಾವಿರಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ. ಬಂದ ಜನರಿಗೆ ಬಾಡೂಟ ಹಾಕಿಸಲು ಸಿದ್ಧತೆ ನಡೆದಿದೆ.(ದಿಗ್ವಿಜಯ ನ್ಯೂಸ್​)
ರವಿತೇಜರ ಹೊಸ ಚಿತ್ರದಲ್ಲಿ ನರೇಶ್​-ಪವಿತ್ರಾರನ್ನು ತೆರೆ ಮೇಲೆ ನೋಡಿ ಬಿದ್ದು ಬಿದ್ದು ನಕ್ಕಿದ ಪ್ರೇಕ್ಷಕರು! ಕಾರಣ ಹೀಗಿದೆ…

ಚಿಕ್ಕ ವಯಸ್ಸಿನಲ್ಲೇ ಪ್ರೀತಿಸಿ 18 ವರ್ಷ ತುಂಬಿದ ಬಳಿಕ ಮದ್ವೆಯಾದ ಯುವತಿಯ ಬದುಕು ದುರಂತ ಅಂತ್ಯ!

ನೌಕರರಿಗೆ ಟೆಸ್ಟ್ ಟೆನ್ಶನ್!; ಕಂಪ್ಯೂಟರ್ ಸಾಕ್ಷರತೆ ಕಡ್ಡಾಯ, ಇನ್ನೂ ಪಾಸಾಗಿಲ್ಲ ಹಲವರು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
