ಮಂಡ್ಯ:ವ್ಯಕ್ತಿಯೊಬ್ಬ ಮಕ್ಕಳ ಮುಂದೆಯೇ ತನ್ನ ಪತ್ನಿಯನ್ನು ಅಮಾನುಷವಾಗಿ ಕೊಲೆ ಮಾಡಿರುವ ಆತಂಕಕಾರಿ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಗೆಂಡೆಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಯೋಗಿತಾ (27) ಗಂಡನಿಂದಲೇ ಕೊಲೆಯಾದ ಮಹಿಳೆ. ರವಿ ಮಕ್ಕಳ ಮುಂದೆಯೇ ಪತ್ನಿ ಕೊಲೆ ಮಾಡಿದ ಪಾಪ ಪತಿ. ಪರಸ್ತ್ರೀ ಜೊತೆ ರವಿಗೆ ಅನೈತಿಕ ಸಂಬಂಧ ಇತ್ತು. ಇದು ಪತ್ನಿಗೂ ತಿಳಿದಿತ್ತು. ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಮನೆ ಬಿಟ್ಟು ಹೋಗುವಂತೆ ಪತ್ನಿಗೆ ಪದೇಪದೆ ರವಿ ಹಿಂಸೆ ನೀಡುತ್ತಿದ್ದ ಎಂದು ಹೇಳಲಾಗಿದೆ.
ಪತಿ-ಪತ್ನಿ ನಡುವಿನ ಜಗಳ ಸಂಬಂಧ ಸಾಕಷ್ಟು ಬಾರಿ ಗ್ರಾಮದ ಮುಖಂಡರು ನ್ಯಾಯ ಪಂಚಾಯಿತಿಯನ್ನು ನಡೆಸಿದ್ದರು. ಆದರೂ ಜಗಳ ಮಾತ್ರ ನಿಂತಿರಲಿಲ್ಲ. ನಿನ್ನೆ ರಾತ್ರಿಯೂ ಗಂಡ ಹೆಂಡತಿ ನಡುವೆ ಮತ್ತೆ ಜಗಳ ಆರಂಭವಾಗಿತ್ತು. ಆರೋಪಿ ರವಿ ಮಕ್ಕಳಿಗೆ ಪಾನಿಪುರಿ ತಿನಿಸುತ್ತಿದ್ದ ವೇಳೆ ಜಗಳ ಶುರುವಾಗಿತ್ತು.

ಇಬ್ಬರ ನಡುವಿನ ವಾಗ್ವಾದ ತಾರಕಕ್ಕೇರಿದಾಗ ಪತ್ನಿ ಯೋಗಿತಾಗೆ ಮನಬಂದಂತೆ ಥಳಿಸಿದ ರವಿ, ಬಳಿಕ ಪತ್ನಿಯನ್ನು ಕೋಣೆಯೊಳಗೆ ಎಳೆದೊಯ್ದಿದ್ದ. ಈ ವೇಳೆ ಮಕ್ಕಳು ತಕ್ಷಣ ಪಕ್ಕದ ಮನೆಯವರಿಗೆ ಜಗಳದ ವಿಚಾರ ತಿಳಿಸಿದರು. ನೆರೆಮನೆಯವರು ಬರುವಷ್ಟರಲ್ಲಿ ರವಿ ಪತ್ನಿಯನ್ನು ಕೊಲೆಗೈದಿದ್ದ. ಈ ವಿಚಾರವನ್ನು ಯಾರಿಗೂ ಹೇಳಬೇಡಿ ಎಂದು ಮಕ್ಕಳಿಗೆ ಹೇಳಿ, ರವಿ ಪರಾರಿಯಾಗಿದ್ದಾನೆ.
ಸದ್ಯ ಮನೆಯ ಮುಂದೆ ಯೋಗಿತಾ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಕಣ್ಣ ಮುಂದೆಯೇ ತಾಯಿ ಕಳೆದುಕೊಂಡು ಮಕ್ಕಳಿಬ್ಬರು ತಬ್ಬಲಿಯಾಗಿದ್ದಾರೆ. ಪರಾರಿಯಾಗಿರುವ ರವಿಯನ್ನು ಸ್ಥಳಕ್ಕೆ ಕರೆಸುವಂತೆ ಯೋಗಿತಾ ಪಾಲಕರು ಪಟ್ಟು ಹಿಡಿದಿದ್ದಾರೆ. ಈ ಸಂಬಂಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
15 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ATM ಕಸದ ಬುಟ್ಟಿಗೆ ಎಸೆದು ಹೋದ ಮಹಿಳೆ! ಕಾರಣ ಕೇಳಿದ್ರೆ ದಂಗಾಗ್ತೀರಾ

ಇಂದು ಪಂಜಾಬ್​ ಸಿಎಂ ಮದುವೆ: ವಧು ಗುರುಪ್ರೀತ್​ ಕೌರ್​ ವಯಸ್ಸೆಷ್ಟು? ಇಲ್ಲಿದೆ ಅವರ ಸಂಪೂರ್ಣ ಪರಿಚಯ​

ಬಿ ಸ್ವತ್ತುಗಳಿಗೆ ಎರಡು ತಿಂಗಳಲ್ಲಿ ಎ ಖಾತೆ ಪರಿವರ್ತನೆ ಭಾಗ್ಯ: ರಾಜ್ಯಾದ್ಯಂತ ಲಕ್ಷಾಂತರ ಮಂದಿಗೆ ಅನುಕೂಲ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + sixteen =
Remember me
