ಮಂಡ್ಯ:ಸರ್ಕಾರದ ವಿರುದ್ಧ 40 ಪರ್ಸೆಂಟ್​ ಕಮಿಷನ್​ ಆರೋಪ ಮಾಡಿರುವ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ವಿರುದ್ಧ ಗುತ್ತಿಗೆದಾರ ಕಮ್ ಮಂಡ್ಯ ಬಿಲ್ಡರ್ ಅಸೋಸಿಯೇಷನ್ ಅಧ್ಯಕ್ಷ ನೃಪತುಂಗ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಅಕ್ರಮಗಳಲ್ಲಿ ಅಕ್ರಮಗಳ ಸರದಾರ ಕೆಂಪಣ್ಣ. ಆತ ಓರ್ವ ಡಬಲ್ ಸ್ಟ್ಯಾಂಡರ್ಡ್ ಮತ್ತು ಬ್ಲಾಕ್​ಮೇಲರ್ ಎಂದು ನೃಪತುಂಗ ಅವರ ಆಕ್ರೋಶ ಹೊರಹಾಕಿದ್ದಾರೆ.
ಸಂತೋಷ್ ಪಾಟೀಲ್ ಆತ್ಮಹತ್ಯೆ ನಡೆದಾಗ ಕೆಂಪಣ್ಣ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಆದರೆ, ಮಾರನೆಯ ದಿನ ಸಿಎಂ ಹೊಗಳಿ ಗೌಪ್ಯ ಪತ್ರ ಬರೆದರು. ಸಂಘದ ಕಟ್ಟಡದ ಮೇಲಿನ ಸಾಲ ತೀರಿಸಿಕೊಡಿ ಎಂದು ಪತ್ರದ ಮೂಲಕ ಬೇಡಿಕೊಂಡರು. ಇವರ ಬ್ಲಾಕ್​ಮೇಲ್ ಸಿದ್ಧಾಂತದಿಂದ ಗುತ್ತಿಗೆದಾರರು ಹಾಳಾಗುತ್ತಿದ್ದಾರೆ ಎಂದು ಆರೋಪಿಸಿದರು.
ಬೈಲಾ ಪ್ರಕಾರ ಕೆಂಪಣ್ಣ ಸಂಘದ ಅಧ್ಯಕ್ಷನೇ ಅಲ್ಲ. ಸಂಘದ ದುಡ್ಡು ತಿನ್ನಲು ಕೆಂಪಣ್ಣ ಪ್ಲಾನ್ ಮಾಡಿದ್ದಾನೆ. 20 ವರ್ಷದಿಂದ ಕೆಂಪಣ್ಣ ಗುತ್ತಿಗೆದಾರ ವೃತ್ತಿ ಮಾಡ್ತಿಲ್ಲ. ನಿಯಮಬಾಹಿರವಾಗಿ ಸಂಘದ ಅಧ್ಯಕ್ಷರಾಗಿದ್ದಾರೆ. ಕೆಂಪಣ್ಣಗೆ ಟೆಕ್ನಿಕಲಿ ಎಳ್ಳಷ್ಟು ಗೊತ್ತಿಲ್ಲ. ಕಂಟ್ರಾಕ್ಟರ್ ಬೆನಿಫಿಟ್ ಫಂಡ್ ದೋಚಲು ಪ್ಲಾನ್ ಮಾಡ್ತಿದ್ದಾರೆ ಎಂದರು.
ಕಮಿಷನ್​ ಬಗ್ಗೆ ಸಾಕ್ಷ್ಯವಿದ್ದರೆ ಹೈಕೋರ್ಟ್‌ನಲ್ಲಿ ದೂರು ದಾಖಲಿಸಲಿ. ಇವರ ಬಳಿ ಯಾವ ಆಧಾರವೂ ಇಲ್ಲ. ಆರೋಪಿಸಿದ ಸಚಿವರ ಹೆಸರನ್ನು ಮತ್ತೆ ಇವರು ಹೇಳಲ್ಲ. ಕಂಟ್ರಾಕ್ಟರ್ ಹೆಸರಲ್ಲಿ ವೈಯಕ್ತಿಕ ಲಾಭ ಪಡೆದುಕೊಳ್ತಿದ್ದಾರೆ ಎಂದು ದೂರಿದರು.(ದಿಗ್ವಿಜಯ ನ್ಯೂಸ್​)
ಅತ್ಯಾಚಾರ ಎಸಗಿ ಬಿಜೆಪಿ ನಾಯಕಿ ಸೊನಾಲಿ ಕೊಲೆ? ಬೆಳಿಗ್ಗೆ ಬಂದ ಕರೆಯೇ ಅನುಮಾನಕ್ಕೆ ದಾರಿ!

ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಲಾರಿ-ಕ್ರೂಸರ್​ ನಡುವೆ ಭೀಕರ ಅಪಘಾತ: 9 ಮಂದಿ ಸಾವು, ನಾಲ್ವರ ಸ್ಥಿತಿ ಗಂಭೀರ

ಭಾರತದ ಚೌಕಿ ಮೇಲಿನ ದಾಳಿಗೆ 30 ಸಾವಿರ ರೂ. ಇನಾಮು: ಬಂಧಿತ ಉಗ್ರ ಬಿಚ್ಚಿಟ್ಟ ಭಯಾನಕ ರಹಸ್ಯವಿದು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 9 =
Remember me
