ಮಂಡ್ಯ:ಯಾರೋ ಏನೋ ಅಂದ್ಬಿಟ್ರು ಅಂತಾ ಅನುಕಂಪ ಗಿಟ್ಟಿಸಿಕೊಳ್ಳಲು ಹೋದ್ರೆ ಯಾವಾಗಲೂ ನಡೆಯಲ್ಲ ಎನ್ನುವ ಮೂಲಕ ಸಂಸದೆ ಸುಮಲತಾ ಅಂಬರೀಷ್​ಗೆ ಜೆಡಿಎಸ್​ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೇರೆಯವರನ್ನು ದೂರುವ ಬದಲು ಸಂಸದರು ಆತ್ಮವಲೋಕನ ಮಾಡಿಕೊಳ್ಳಲಿ. ಸಂಸದರಾಗಿ ಜಿಲ್ಲೆಗೆ ಅವರ ಕೊಡುಗೆ ಏನು‌ ಎಂದು ಪ್ರಶ್ನೆ ಮಾಡಿಕೊಳ್ಳಲಿ ಎಂದು ಹೇಳಿದರು.
ಮಂಡ್ಯದ ಶಾಸಕರು ಎರಡ್ಮೂರು ಬಾರಿ ಆಯ್ಕೆ ಆಗಿದ್ದಾರೆ. ಅಭಿವೃದ್ಧಿ ಆಗಿಲ್ಲ ಅಂದ್ರೆ, ಶಾಸಕರನ್ನು ಜನರು ಪ್ರಶ್ನೆ ಮಾಡ್ತಾರೆ. ಇವರನ್ನ ಪ್ರಶ್ನೆ ಮಾಡೋರು ಯಾರು? ಪ್ರತಿ ಬಾರಿ ಕಾಲು ಕೆರೆದುಕೊಂಡು ಜಗಳ ಹುಟ್ಟುಹಾಕಿ, ಯಾರೋ ಏನೋ ಅಂದ್ಬಿಟ್ರು ಅಂತಾ ಅನುಕಂಪ ಗಿಟ್ಟಿಸಲು ಆಗಲ್ಲ. 2024ರ ವರೆಗೂ ಅವರ ಅಧಿಕಾರ ಇದೆ. ಜನಗಳ ಜತೆ ನಿಂತು ಕೆಲಸ ಮಾಡಲಿ ಎಂದು ಸಲಹೆ ನೀಡಿದರು.(ದಿಗ್ವಿಜಯ ನ್ಯೂಸ್​)
ಬೇಕು ಅನಿಸಿದ್ರೆ ಮಂಚಕ್ಕೆ ಕರಿತೀನಿ.. ಸಹನಟನ ಹೇಳಿಕೆಗೆ ಕ್ಷಮೆಯಾಚಿಸಿದ ನಟಿ ನವ್ಯಾ ನಾಯರ್​!

ಬೇಕಿದ್ರೆ ನಿಮ್ಮ ರೆಕ್ಕೆಗಳನ್ನು ಕತ್ತರಿಸಿಕೊಳ್ಳಿ: ಹಿಜಾಬ್​ ವಿವಾದದ ಬಗ್ಗೆ ಶಾಕಿಂಗ್​ ಹೇಳಿಕೆ ಕೊಟ್ಟ ಭುವನ ಸುಂದರಿ!

ಒಂದೇ ವಾರದಲ್ಲಿ 6ನೇ ಬಾರಿ ಪೆಟ್ರೋಲ್​-ಡೀಸೆಲ್​ ಬೆಲೆ ಏರಿಕೆ, ಇಂದಿನ ಇಂಧನ ದರ ಹೀಗಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 8 =
Remember me
