ಮಂಗಳೂರು:ಸೇತುವೆಗೆ ಡಿಕ್ಕಿ ಹೊಡೆದು ಕಾರು ಹೊಳೆಗೆ ಬಿದ್ದ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ಇಬ್ಬರು ಯುವಕರಲ್ಲಿ ಓರ್ವನ ಮೃತದೇಹ ಇಂದು ಪತ್ತೆಯಾಗಿದೆ.
ಸೇತುವೆಯಿಂದ 400 ಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದೆ. ಹೊಳೆಗೆ ಅಡ್ಡಲಾಗಿ ಬಿದ್ದಿರುವ ಮರದಲ್ಲಿ ಮೃತದೇಹ ಸಿಲುಕಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಳೆ ಕಡಿಮೆಯಾಗಿ‌ ನೀರು ಇಳಿಕೆಯಾದ್ದರಿಂದ ಇಂದು ಮೃತದೇಹ ಸ್ಥಳೀಯರ ಕಣ್ಣಿಗೆ ಬಿದ್ದಿದೆ.
ಕಾಣಿಯೂರು ಸಮೀಪದ ಬೈತಡ್ಕ ಸೇತುವೆ ಬಳಿ ಸೇತುವೆಗೆ ಡಿಕ್ಕಿಯಾಗಿ ಕಾರು ನದಿಗೆ ಬಿದ್ದಿತ್ತು. ಈ ಘಟನೆ ಸಿಸಿಟಿವಿ ದೃಶ್ಯಾವಳಿಯಿಂದ ಕಳೆದ ಭಾನುವಾರ ಬೆಳಗ್ಗೆ ತಿಳಿದುಬಂದಿತ್ತು. ಕೂಡಲೇ ಕಾರ್ಯಾಚರಣೆಗಿಳಿದ ಪೊಲೀಸರಿಗೆ ಸಿಕ್ಕಿದ್ದು ನುಜ್ಜುಗುಜ್ಜಾದ ಕಾರು ಮಾತ್ರ. ಇಡೀ ಹೊಳೆಯನ್ನೇ ಜಾಲಾಡಿದರೂ, ಯುವಕರು ಮಾತ್ರ ಪತ್ತೆಯಾಗಿರಲಿಲ್ಲ.
ಘಟನೆ ನಡೆದ ಎರಡು ದಿನಗಳ ಬಳಿಕ ಒಬ್ಬನ ಮೃತದೇಹ ಪತ್ತೆಯಾಗಿದ್ದು, ಆತನ ಮಾಹಿತಿ ಇನ್ನು ತಿಳಿದುಬಂದಿಲ್ಲ. ಪೊಲೀಸರು ಬಂದ ಬಳಿಕ ಮೃತದೇಹ ಮೇಲಕ್ಕೆತ್ತಲು ಸ್ಥಳೀಯರು ನಿರ್ಧರಿಸಿದ್ದಾರೆ.
ನಾಪತ್ತೆಯಾದ ವಿಟ್ಲದ ಧನುಷ್ (25) ಮತ್ತು ಕನ್ಯಾನ ನಿವಾಸಿ ಧನುಷ್ (24) ಇಬ್ಬರೂ ಸೋದರಸಂಬಂಧಿ. ಈ ಘಟನೆ ಬಗ್ಗೆ ದಿಗ್ವಿಜಯ ನ್ಯೂಸ್ ಜೊತೆ ಮಾತನಾಡಿರುವ ಧನುಷ್​ ಮಾವ ರಾಜೇಶ್, ಶನಿವಾರ ರಾತ್ರಿ 8:30ಕ್ಕೆ ಊಟ ಮಾಡಿ ಮನೆಯಿಂದ ಹೊರಟನು. 11:30ಕ್ಕೆ ಕರೆ ಮಾಡಿದಾಗ 2 ಗಂಟೆ‌ವರೆಗೂ ಕೆಲಸ ಇದೆ ಆಮೇಲೆ‌ ಬರ್ತೇನೆ ಅಂತಾ ಹೇಳಿದ್ದ. 12.01 ಕ್ಕೆ ಫೊನ್ ಮಾಡಿ ಕಾರು ಅಪಘಾತ ಆಗಿದೆ ಎಂದು ಹೇಳಿದ್ದ. ನಾಳೆ ಬೆಳಗ್ಗೆ ವಾಹನ ರಿಪೇರಿ ಮಾಡಿ ಬರ್ತೇನೆ ಎಂದು ಹೇಳಿದ್ದ. ಆಮೇಲೆ‌ ಫೋನ್ ಮಾಡುವಾಗ ಸ್ವಿಚ್ ಆಫ್ ಅಂತಾ ಬಂದಿದೆ. ಭಾನುವಾರ ಬೆಳಗ್ಗೆ ತುಂಬಾ ಸಲ ಕಾಲ್ ಮಾಡಿದಾಗಲು ಸ್ವಿಚ್ ಆಫ್ ಬಂದಿದೆ. 12.05 ಕ್ಕೆ ಮಸೀದಿಯ ಸಿ.ಸಿ ಕ್ಯಾಮರಾದಲ್ಲಿ ಅಪಘಾತ ಆದ ಟೈಮ್ ಇದೆ. 12.01 ಕ್ಕೆ ಅಪಘಾತ ಆಗಿದೆ ಅಂತಾ ಹೇಳಿದ್ದಾನೆ. ಇಬ್ಬರು ಯುವಕರು ಸಹ ಜೀವಂತವಾಗಿ ಸಿಗಬಹುದು ಎಂಬ ನಿರೀಕ್ಷೆ ಇದೆ ಎಂದಿದ್ದರು.
ಆದರೆ, ಈಗ ಒಬ್ಬನ ಮೃತದೇಹ ಪತ್ತೆಯಾಗಿದ್ದು, ಇನ್ನೊಬ್ಬನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.(ದಿಗ್ವಿಜಯ ನ್ಯೂಸ್​)
ದೇಶದ ಅತಿ ಕಿರಿಯ ಮೇಯರ್ ವರಿಸಲಿದ್ದಾರೆ ರಾಜ್ಯದ ಅತಿ ಕಿರಿಯ MLA! ಸೆ.4ಕ್ಕೆ ಅಪರೂಪದ ಮದ್ವೆಗೆ ಕೇರಳ ಸಾಕ್ಷಿ

ಬಾಲಕನನ್ನು ಬದುಕಿಸಲು ಮೊಸಳೆ ಸೆರೆಹಿಡಿದು ಹೊಟ್ಟೆ ಸೀಳಲು ಯತ್ನಿಸಿದ ಗ್ರಾಮಸ್ಥರು! ಮುಂದೇನಾಯ್ತು ನೀವೇ ನೋಡಿ

ಅತ್ತೆ-ಸೊಸೆಯೆಂಬ ವಿರುದ್ಧ ದಿಕ್ಕು; ಕೂಡಿ ಬಾಳಿದರೆ ಮನೆ-ಮನ ಆರೋಗ್ಯ ಪೂರ್ಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 20 =
Remember me
