ಬೆಂಗಳೂರು:ವಾಹನ ಟೋಯಿಂಗ್​ ಮಾಡುವ ಯುವಕರನ್ನು ಸಾರ್ವಜನಿಕರು ಅಟ್ಟಾಡಿಸಿಕೊಂಡು ಹಿಗ್ಗಾಮುಗ್ಗ ಥಳಿಸಿರುವ ಘಟನೆ ರಾಜ್ಯ ರಾಜಧಾನಿಯ ಇಂದಿರಾ ನಗರದಲ್ಲಿ ಗುರುವಾರ ನಡೆದಿದೆ.
ನಿನ್ನೆ ಸಂಜೆ ನಾಲ್ಕು ಗಂಟೆಗೆ ಟೋಯಿಂಗ್​ ಮಾಡುವ ವಿಚಾರವಾಗಿ ಇಂದಿರಾನಗರದಲ್ಲಿ ಟೋಯಿಂಗ್​ ಯುವಕರು ಮತ್ತು ಸಾರ್ವಜನಿಕರ ನಡುವೆ ಗಲಾಟೆ ನಡೆದಿದೆ. ಬಳಿಕ ಗಲಾಟೆ ವಿಕೋಪಕ್ಕೆ ತಿರುಗಿದಾಗ ಟೋಯಿಂಗ್​ ಯುವಕರ ಮೇಲೆ ಕೋಪಗೊಂಡ ಸಾರ್ವಜನಿಕರು ರಸ್ತೆಯಲ್ಲೇ ಅಟ್ಟಾಡಿಕೊಂಡು ಹೊಡೆದಿದ್ದಾರೆ.
ಇದಕ್ಕೆ ಸಂಬಂಧಿಸಿದ ವಿಡಿಯೋ ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪರ-ವಿರೋಧ ಚರ್ಚೆ ವ್ಯಕ್ತವಾಗುತ್ತಿದೆ. ಬಹುತೇಕರು ಟೋಯಿಂಗ್​ ಯುವಕರ ವರ್ತನೆಯನ್ನು ಖಂಡಿಸಿದ್ದಾರೆ. ಸಾರ್ವಜನಿಕರಿಂದ ಸಿಕ್ಕಾಪಟ್ಟೆ ಹಣ ವಸೂಲಿ ಮಾಡುತ್ತಾರೆಂದು ದೂರಿದ್ದಾರೆ. ಅಲ್ಲದೆ, ಪೊಲೀಸರ ನಡವಳಿಕೆಯನ್ನು ಖಂಡಿಸಿದ್ದಾರೆ. ಇನ್ನು ಕೆಲವರು ಹಲ್ಲೆ ಮಾಡಿದ್ದು, ಸರಿಯಲ್ಲ ಏನೇ ಇದ್ದರೂ ಕಾನೂನಿನ ಚೌಕಟ್ಟಿನ ಒಳಗೆ ಮಾಡಬೇಕಿತ್ತು ಎಂದಿದ್ದಾರೆ.
ಇನ್ನು ನಗರದಲ್ಲಿ ಈ ರೀತಿಯ ಘಟನೆಗಳು ಹೊಸದೇನಲ್ಲ. ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಟ್ರಾಫಿಕ್​ ವಿಚಾರವಾಗಿ ವಾಗ್ವಾದ ನಡೆದಿರುವ ಅನೇಕ ಉದಾಹರಣೆಗಳು ಇವೆ. ಇನ್ನು ಟೋಯಿಂಗ್​ ಯುವಕರ ಮೇಲೆ ಹಲ್ಲೆ ನಡೆದಿರುವ ಈ ತಿಂಗಳ ಎರಡನೇ ಘಟನೆ ಇದಾಗಿದ್ದು, ಕಳೆದ ತಿಂಗಳು ಯಲಹಂಕದಲ್ಲಿ ಬೈಕ್ ಟೋಯಿಂಗ್ ಮಾಡೋ ವಿಚಾರವಾಗಿ ಇಬ್ಬರಿಗೆ ಹೆಲ್ಮೆಟ್‍ನಿಂದ ಹಿಗ್ಗಾಮುಗ್ಗ ಸಾರ್ವಜನಿಕರು ಥಳಿಸಿದ್ದರು. ಘಟನೆ ಸಂಬಂಧ ಹಲ್ಲೆಮಾಡಿದವರ ಮೇಲೆ ಯಲಹಂಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಇಬ್ಬರನ್ನು ಬಂಧಿಸಲಾಗಿತ್ತು.
ಇದೀಗ ಇಂದಿರಾ ನಗರದಲ್ಲಿ ನಡೆದಿರುವ ಪ್ರಕರಣ ಬಗ್ಗೆ ಪ್ರಕರಣ ದಾಖಲಾಗಿದ್ದು, ಹಲ್ಲೆ ಮಾಡಿದವರ ಬಂಧನಕ್ಕೆ ಇಂದಿರಾ ನಗರ ಪೊಲೀಸರು ಬಲೆ ಬೀಸಿದ್ದಾರೆ.
ನಿಮ್ಮ ಕನ್ನಡ ಪ್ರೀತಿಗೆ ಚಿರಋಣಿ: ಮಗಳ ವಿಡಿಯೋಗೆ ಕನ್ನಡ ಹಾಡು ಹಾಕಿದ ವಾರ್ನರ್​ಗೆ ಕನ್ನಡಿಗರ ಸಲಾಂ

ಇದು ಸಾವಿನ ಸಂದೇಶ ಹುಷಾರ್‌! ಶಿಕ್ಷಕನ ಮನೆಗೆ ಬಂದ ಪಾರ್ಸೆಲ್‌ನಲ್ಲಿ ಬುಲೆಟ್‌ಗಳ ಜತೆಗೆ ಬೆದರಿಕೆ

VIDEO: ನಾವು ಬದಲಾಗಿದ್ದೇವೆ ಎಂದರು… ನಂಬಿ ಕಚೇರಿಗೆ ಹೋದೆ.. ಆದರೆ… ಕರಾಳ ಅನುಭವ ಬಿಚ್ಚಿಟ್ಟ ಪತ್ರಕರ್ತೆ

Sign in to your account
Please enter an answer in digits:20 − 5 =
Remember me
