ನವದೆಹಲಿ:ಭಾರತ್​ ಜೋಡೋ ಯಾತ್ರೆಯ ಸಮಯದಲ್ಲಿ ಬಿರು ಬಿಸಿಲಿನಿಂದ ನಿಮ್ಮ ಮುಖ ಟ್ಯಾನ್​ ಆಗುತ್ತಿರುವುದನ್ನು ಹೇಗೆ ತಪ್ಪಿಸುತ್ತಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿರುವ ರಾಹುಲ್​ ಗಾಂಧಿ, ನಾನು ಯಾವುದೇ ಸನ್​ ಸ್ಕ್ರೀನ್​ ಬಳಸುವುದಿಲ್ಲ ಎಂದಿದ್ದಾರೆ.
ಬಳ್ಳಾರಿಯಲ್ಲಿ ನಡೆದ ಪಾದಯಾತ್ರೆಯ ಬಿಡುವಿನ ಸಮಯದಲ್ಲಿ ರಾಹುಲ್​ ಗಾಂಧಿ ಅವರು ಸ್ಥಳೀಯರ ಜೊತೆ ಸಂವಾದ ನಡೆಸಿದ್ದು, ಈ ವೇಳೆ ಟ್ಯಾನಿಂಗ್​ ಬಗ್ಗೆ ಕೇಳಿಬಂದ ಪ್ರಶ್ನೆಗೆ ಅವರು ಉತ್ತರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ನನ್ನ ತಾಯಿ ನನಗೆ ಸನ್​ಸ್ಕ್ರೀನ್​ ಕಳುಹಿಸಿದ್ದಾರೆ. ಆದರೆ, ನಾನದನ್ನು ಬಳಸುತ್ತಿಲ್ಲ ಎಂದು ಇದೇ ಸಂದರ್ಭದಲ್ಲಿ ರಾಹುಲ್​ ಹೇಳಿದರು. ನೀವು ಯಾವುದೇ ಸನ್​ಸ್ಕ್ರೀನ್​ ಬಳಸುವುದಿಲ್ಲವಾ ಎಂದು ಅಚ್ಚರಿ ವ್ಯಕ್ತಪಡಿಸಿದ ಸ್ಥಳೀಯರು, ನಿಮ್ಮ ಮುಖವೇ ಒಂದು ಸನ್​ಶೈನ್​ ಎಂದು ರಾಹುಲ್​ರನ್ನು ಹೊಗಳಿದರು.
ಇದೇ ಸಂದರ್ಭದಲ್ಲಿ ಯಾತ್ರೆಯ ಬಗ್ಗೆ ಮಾತನಾಡಿದ ರಾಹುಲ್​, ಭಾರತ್​ ಜೋಡೋ ಯಾತ್ರೆ ಒಂದು ಐತಿಹಾಸಿಕ ಕ್ಷಣ. ಈ ಯಾತ್ರೆ ಇಂದಿಗೆ ಮಾತ್ರವಲ್ಲ. ಈ ಯಾತ್ರೆ ನಮ್ಮ ಮುಂದಿನ ಪೀಳಿಗೆಗಾಗಿ ಎಂದರು.
Mr@RahulGandhi:
I don’t use sunscreen…
मेरी माँ ने मेरे लिए Sunscreen भेजी है लेकिन मैं इस्तेमाल नही करताpic.twitter.com/VTNTWHLHiZ
— Supriya Bhardwaj (@Supriya23bh)October 17, 2022

ರಾಹುಲ್ ಪ್ರಸ್ತುತ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಯನ್ನು ಮುನ್ನಡೆಸುತ್ತಿದ್ದಾರೆ. ಪಕ್ಷದ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಸೋಮವಾರ ಯಾತ್ರೆಗೆ ವಿರಾಮ ನೀಡಲಾಗಿತ್ತು. ರಾಹುಲ್​ ಅವರು ಬಳ್ಳಾರಿಯಲ್ಲಿ ತಮ್ಮ ಮತ ಚಲಾವಣೆ ಮಾಡಿದರು. ಅಧ್ಯಕ್ಷೀಯ ಚುನಾವಣೆಯಲ್ಲಿ ಮಲ್ಲಿಕಾರ್ಜುನ್​ ಖರ್ಗೆ ಮತ್ತು ಶಶಿ ತರೂರ್​ ಅವರು ಸ್ಪರ್ಧೆ ಮಾಡಿದ್ದಾರೆ.
24 ವರ್ಷಗಳ ನಂತರ ಮೊದಲ ಗಾಂಧಿಯೇತರ ಪಕ್ಷದ ಮುಖ್ಯಸ್ಥರಾಗಿ ಯಾರು ಆಯ್ಕೆಯಾಗಲಿದ್ದಾರೆ ಎಂಬ ಕುತೂಹಲಕ್ಕೆ ನಾಳೆ ತೆರೆಬೀಳಲಿದೆ.(ಏಜೆನ್ಸೀಸ್​)
60 ವರ್ಷದ ಉದ್ಯಮಿ ಜತೆ ವಿವಾಹೇತರ ಸಂಬಂಧ! ನಟಿ ಕಸ್ತೂರಿ ಕೊಟ್ಟ ಪ್ರತಿಕ್ರಿಯೆ ಹೀಗಿದೆ…

ಮಹಿಳೆಯರ ಶವದ ಮಾಂಸವನ್ನು ಬೇಯಿಸಿ ತಿಂದಿದ್ದೀರಾ? ಆರೋಪಿ ಕೊಟ್ಟ ಪ್ರತಿಕ್ರಿಯೆ ನೋಡಿ ದಂಗಾದ ಅಧಿಕಾರಿಗಳು

ವಿಆರ್​ಎಲ್​ ಸಂಸ್ಥೆ ಹೆಸರಲ್ಲಿ ನಕಲಿ ವೆಬ್​ಸೈಟ್​ ತೆರೆದು ವಂಚಿಸುತ್ತಿದ್ದವರ ಬಂಧನ

Sign in to your account
Please enter an answer in digits:five − 2 =
Remember me
