ಮೈಸೂರು:ನಟ ದರ್ಶನ್ ಹೆಸರಲ್ಲಿ ವಂಚನೆಗೆ ಯತ್ನ ಪ್ರಕರಣದಲ್ಲಿ ನಿರ್ಮಾಪಕ ಉಮಾಪತಿ ಗೌಡರ ಮೇಲೆಯೇ ಹಲವು ಅನುಮಾನಗಳು ಮೂಡಿವೆ. ಸ್ವತಃ ದೂರು ಕೊಟ್ಟರೂ ಇನ್ನೂ ಸಾಕ್ಷ್ಯಾಧಾರ ಪೂರೈಸದ ಹಿನ್ನೆಲೆಯಲ್ಲಿ ಅವರ ಮೇಲೆಯೇ ಅನುಮಾನ ಮೂಡಿದೆ ಎಂದು ಪೊಲೀಸ್​ ಮೂಲಗಳಿಂದ ತಿಳಿದುಬಂದಿದೆ.
ಇಡೀ ಪ್ರಕರಣದ ಸೂತ್ರಧಾರಿ ಉಮಾಪತಿ ಗೌಡ ಎಂಬ ಅನುಮಾನ ಬರುತ್ತಿದೆ. ದರ್ಶನ್ ಸ್ನೇಹಿತರಿಗೆ ಆರೋಪಿ ಅರುಣಾಕುಮಾರಿ ಪರಿಚಯಿಸಿದ್ದು ಇದೇ ನಿರ್ಮಾಪಕ. ಅಲ್ಲದೆ, ಅರುಣಾ ಕುಮಾರಿ ಬರುವ ವಿಚಾರವನ್ನು ಕರೆ ಮಾಡಿ ದರ್ಶನ್ ಸ್ನೇಹಿತರಿಗೆ ತಿಳಿಸಿದ್ದೂ ಉಮಾಪತಿ ಗೌಡರೇ. ಲೋನ್ ತೆಗೆದುಕೊಳ್ಳುತ್ತಿರುವ ಹಾಗೂ ಫೋರ್ಜರಿ ಬಗ್ಗೆ ಕೇಳಲು ಬರುತ್ತಾರೆ ಎಂದು ಹೇಳಿದ್ದರಂತೆ. ಇದಾದ ನಂತರವೇ ಅರುಣಾಕುಮಾರಿ ದರ್ಶನ್ ಸ್ನೇಹಿತರನ್ನು ಭೇಟಿಯಾಗಿದ್ದಳು. ಪ್ರಕರಣದ ಆರಂಭದಲ್ಲೇ ಕಂಪ್ಲೆಂಟ್ ಕೊಟ್ಟು ತನ್ನದೇನು ತಪ್ಪಿಲ್ಲ ಎಂದು ತೋರಿಸಿಕೊಳ್ಳುವ ಪ್ರಯತ್ನವನ್ನು ಉಮಾಪತಿ ಮಾಡಿರುವ ಆರೋಪ ಕೇಳಿಬಂದಿದೆ.
ಸ್ನೇಹಿತರ ಹೇಳಿಕೆಗಳಲ್ಲೇ ಗೊಂದಲಅರುಣಾ ಕುಮಾರಿ ಬಗ್ಗೆ ದರ್ಶನ್​ ಸ್ನೇಹಿತ ಹರ್ಷ ಮೆಲಾಂಟ್​ಗೆ ಹೇಳಿಲ್ಲ ಎಂದ ನಿರ್ಮಾಪಕ ಉಮಾಪತಿ ಹೇಳಿದ್ದಾರೆ. ಆದರೆ, ದೂರಿನಲ್ಲಿ ಉಮಾಪತಿ ಫೋನ್ ಮಾಡಿ ಅರುಣಾ ಕುಮಾರಿ ಬಗ್ಗೆ ಹೇಳಿದ್ರು ಎಂದು ಹರ್ಷ ಮೆಲಾಂಟ್​ ಉಲ್ಲೇಖಿಸಿದ್ದಾರೆ. ನೀನು ಸೌಥೆಂಡ್ ಸರ್ಕಲ್ ಕೆನರಾ ಬ್ಯಾಂಕ್‌ನಲ್ಲಿ‌ 25 ಸಾಲ ಅರ್ಜಿ ಹಾಕಿದ್ದೀಯ. ಬ್ಯಾಂಕ್ ಮ್ಯಾನೇಜರ್ ಅರುಣಾ ಕುಮಾರಿ ನನಗೆ ಸಿಕ್ಕಿದ್ದರು. ನೀನು ಪೋರ್ಜರಿ ಸಹಿ ಮಾಡಿದ್ದೀಯ ಅಂತ ತಿಳಿಸಿದ್ದಾರೆ. ಭದ್ರತೆಗೆ ನಿನ್ನ ಆಸ್ತಿ ಪತ್ರದ ಜತೆಗೆ ಗಣ್ಯವ್ಯಕ್ತಿ ಆಸ್ತಿ ಪೋರ್ಜರಿ ಪತ್ರ ನೀಡಿದ್ದೀಯ. ಅದರ ಬಗ್ಗೆ ವಿಚಾರಿಸಲು ಮ್ಯಾನೇಜರ್ ಅರುಣಾ ಕುಮಾರಿ ಮೈಸೂರಿಗೆ ಬರುತ್ತಾರೆ ಅಂತಾ ಉಮಾಪತಿ ನನಗೆ ಪೋನ್ ಮಾಡಿ ಹೇಳಿದ್ದರು ಎಂದು ಹರ್ಷಾ ಹೇಳಿದ್ದಾರೆ.
ಆದರೆ, ನಾನು ಹರ್ಷಗೆ ಪೋನ್ ಮಾಡಿಲ್ಲ ಎಂದು ಉಮಾಪತಿ ಹೇಳಿದ್ದಾರೆ. ದೂರು ನೀಡಿದವರೇ ಭಿನ್ನ ಭಿನ್ನ ಹೇಳಿಕೆಗಳು ನೀಡುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.(ದಿಗ್ವಿಜಯ ನ್ಯೂಸ್​)
ರಸ್ತೆ ಪಕ್ಕದಲ್ಲಿ ಬಿದ್ದಿದ್ದ ಗೋಣಿ ಚೀಲದ ಗಂಟು ತೆರೆಯುತ್ತಿದ್ದಂತೆ ಬಿಚ್ಚಿಕೊಳ್ತು ನಿಗೂಢ ಪ್ರಕರಣದ ಭಯಾನಕ ಸಂಚು!

ತೆರೆದ ಬಾವಿ ಯೋಜನೆಗೆ ಫುಲ್ ಡಿಮಾಂಡ್!; ನರೇಗಾ ಯೋಜನೆಯಡಿ 15 ಸಾವಿರಕ್ಕೂ ಅಧಿಕ ಅರ್ಜಿ ಸಲ್ಲಿಕೆ

ನೇರಳೆ ಕೃಷಿ ಮಾಡಿ, ಉತ್ತಮ ಆದಾಯ ಗಳಿಸಿ: ಮನಿಮಾತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
