ಮೈಸೂರು:ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ವೈಭವ ಕಳೆಗಟ್ಟಿದೆ. ಮಹಾಮಾರಿ ಕರೊನಾದಿಂದ ಎರಡು ವರ್ಷಗಳ ಕಾಲ ಜನ ಸಾಮಾನ್ಯರಿಗೆ ಸಿಗದ ಜಂಬೂ ಸವಾರಿಯ ದರ್ಶನ, ಈ ಬಾರಿ ಅದ್ಧೂರಿಯೊಂದಿಗೆ ಮರಳಲು ಸಜ್ಜಾಗಿದೆ. ಈಗಾಗಲೇ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಮೈಸೂರಿನಲ್ಲಿ ಬೀಡುಬಿಟ್ಟಿದ್ದು, ಇಂದು ಮಧ್ಯಾಹ್ನ ಸಂಜೆ ನಡೆಯಲಿರುವ ಜಂಬೂ ಸವಾರಿ ಮೆರವಣಿಗೆಗೆ ಸಾಕ್ಷಿಯಾಗಲಿದ್ದಾರೆ.
ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಮೂರ್ತಿ ಜಂಬೂ ಸವಾರಿಯ ಪ್ರಮುಖ ಆಕರ್ಷಣೆಯಾದರೆ, ಇಡೀ ಜಂಬೂ ಸವಾರಿ ಮೆರವಣಿಗೆಗೆ ಮೆರಗು ತಂದುಕೊಡುವುದೇ ವಿವಿಧ ಸ್ತಬ್ಧಚಿತ್ರಗಳು. ಈ ಸ್ತಬ್ಧಚಿತ್ರಗಳು ನಾಡಿನ ಗತ ವೈಭವ ಸಾರುವುದರ ಜೊತೆಗೆ ಸಂದೇಶವನ್ನು ಸಾರುತ್ತವೆ. ಈ ಬಾರಿ 47 ಸ್ತಬ್ಧಚಿತ್ರಗಳು, 50 ಕಲಾತಂಡಗಳು ಸೇರಿ ಒಟ್ಟು 144 ಪ್ರಾಕಾರಗಳು ಭಾಗಿಯಾಗಲಿವೆ.
ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗಿಯಾಗುವ ಸ್ತಬ್ಧಚಿತ್ರಗಳ ಪಟ್ಟಿ ಹೀಗಿದೆ…ಜಿಲ್ಲಾವಾರು1. ಬಾಗಲಕೋಟೆ- ಮುದೋಳ್‌ ಶ್ವಾನಗಳು, ಇಳಕಲ್‌ ಸೀರೆ2. ಬಳ್ಳಾರಿ- ದುರ್ಗಮ್ಮ ದೇವಸ್ಥಾನ3. ಬೆಳಗಾವ್- ಶ‍್ರೀ ರೇಣುಕಾದೇವಿ ದೇವಸ್ಥಾನ, ಕಮಲ ಬಸದಿ4. ಬೆಂಗಳೂರು(ಗ್ರಾ)- ಕಪಿಲೇಶ್ವರ ದೇವಸ್ಥಾನ, ಜೈನ ಬಸದಿ5. ಬೆಂಗಳೂರು(ನ)- ಕಡಲೆಕಾಯಿ ಪರಸೆ, ಬಸವಣ್ಣಗುಡಿ6. ಬೀದರ್‌- ಅನುಭವ ಮಂಟಪ7. ಚಾಮರಾಜನಗರ- ವನ್ಯಧಾಮ, ಶ್ರೀ ಮಹದೇಶ್ವರ ವಿಗ್ರಹ, ಪುನೀತ್‌ ರಾಜ್‌ ಕುಮಾರ್‌ ಪ್ರತಿಮೆ8. ಚಿಕ್ಕಬಳ್ಳಾಪುರ- ಗ್ರೀನ್‌ ನಂದಿ, ಭೋಗನಂದೀಶ್ವರ ದೇವಸ್ಥಾನ9. ಚಿಕ್ಕಮಗಳೂರು- ಸಪ್ತನದಿಗಳ ತವರು10. ಚಿತ್ರದುರ್ಗ- ವಾಣಿ ವಿಲಾಸ ಜಲಾಶಯ, ಒನಕೆ ಓಬವ್ವ, ಕುದುರೆ ಮೇಲೆ ಆಸೀನರಾಗಿರುವ ಮದಕರಿ ನಾಯಕ ಪ್ರತಿಮೆ, ದೀಪಸ್ಥಂಭ11. ದಕ್ಷಿಣ ಕನ್ನಡ- ಕಂಬಳ, ಹುಲಿವೇಷ, ಭೂತಕೋಲ12. ದಾವಣಗೆರೆ- ಸಂತೆ ಬೆನ್ನೂರು, ಪುಷ್ಕರಣೆ13. ಧಾರವಾಡ- ಸಂಗೀತ ದಿಗ್ಗಜರು14. ಗದಗ- ಶ್ರೀಕ್ಷೇತ್ರ ಶ್ರೀಮಂತಗಢ, ಹೊಳಲಮ್ಮ ದೇವಿ, ಶಿವಾಜಿ15. ಹಾಸನ- ಬೇಲೂರು, ಹಳೇಬೀಡ್, ಶ್ರವಣ ಬೆಳಗೊಳ ಗೊಮ್ಮಟಗಿರಿ16. ಹಾವೇರಿ- ಗುರುಗೋವಿಂದ ಭಟ್ಟರು, ಸಂತ ಶಿಶುನಾಳ ಶರೀಫರು, ಮುಕ್ತೇಶ್ವರ ದೇವಾಲಯ17. ಕಲಬುರ್ಗಿ- ರಾಜವಂಶಸ್ಥರ ಕೋಟೆ, ಚಿಂಚೋಳಿ ಅರಣ್ಯ ಪ್ರದೇಶ18. ಕೊಡಗು- ಬ್ರಹ್ಮಗಿರಿ ಬೆಟ್ಟ, ಬೃಗಂಡೇಶ್ವರ ದೇವಾಲಯ, ತಲಕಾವೇರಿ ತೀರ್ಥೋದ್ಭವ19. ಕೋಲಾರ- ಬಿ.ಕೆ.ಎಸ್‌ ಅಯ್ಯಂಗಾರ್‌ ಯೋಗಥಾನ್‌, ಅಂತರಗಂಗೆ ಬೆಟ್ಟ20. ಕೊಪ್ಪಳ- ಆನೆಗುಂದಿ ಬೆಟ್ಟ, ಕಿನ್ನಾಳ ಗೊಂಬೆಗಳು, ಅಂಜನಾದ್ರಿ ಬೆಟ್ಟ21. ಮಂಡ್ಯ- ಮಂಡ್ಯ ಜಿಲ್ಲೆಯ ದೇವಾಲಯಗಳು22. ಮೈಸೂರು- ಮೈಸೂರು ಜಿಲ್ಲೆಯ ವಿಶೇಷತೆಗಳು23. ರಾಜಚೂರು- ಸಿರಿಧಾನ್ಯಗಳ ಬೆಳೆಗಳ ಅಭಿಯಾನ24. ರಾಮನಗರ- ರಾಮದೇವರ ಬೆಟ್ಟ, ರಣಹದ್ದು ಪಕ್ಷಿಧಾಮ25. ಶಿವಮೊಗ್ಗ- ಅಕ್ಕಮಹಾದೇವಿ ಜನ್ಮಸ್ಥಳ, ಉಡುತಡಿ, ಶಿಕಾರಿಪುರ26. ತುಮಕೂರು- ನಿಟ್ಟೂರಿನ ಎಚ್‌ಎಎಲ್‌ ತಯಾರಿಕಾ ಘಟಕ, ಪಾವಗಡದ ಬೃಹತ್‌ ಸೋಲಾರ್‌ ಪಾರ್ಕ್‌27. ಉಡುಪಿ- ಜಿ.ಐ.ಟ್ಯಾಗ್‌ ಹೊಂದಿರುವ ಕೈಮಗ್ಗ ಸೀರೆ ನೇಯ್ಗೆ, ಸಾಂಪ್ರದಾಯಿಕ ಕಲೆಗಳ ಪ್ರದರ್ಶನ28. ಉತ್ತರ ಕನ್ನಡ- ಕಾರವಾರ ನೌಕಾಶಾಲೆ29. ವಿಜಯಪುರ- ಸಿದ್ದರಾಮೇಶ್ವರ ದೇವಸ್ಥಾನ30. ವಿಜಯನಗರ- ಉಗ್ರ ನರಸಿಂಹ, ದರೋಜಿ ಕರಡಿಧಾಮ, ಕಲ್ಲಿನ ರಥ31. ಯಾದಗಿರಿ- ಸುರಪುರ ಕೋಟೆಸ್ತಬ್ಧಚಿತ್ರಗಳ ಉಪಸಮಿತಿ32. ಅರಮನೆ ವಾದ್ಯಗೋಷ್ಠಿ33. ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಸೋಮನಾಥಪುರ ದೇವಾಲಯ34. ಆಜಾದಿ ಕಾ ಅಮೃತ ಮಹೋತ್ಸವ
ಇಲಾಖಾವಾರು35. ಸಮಾಜ ಕಲ್ಯಾಣ ಇಲಾಖೆ- ಸಾಮಾಜಿಕ ನ್ಯಾಯ36. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ- ಐಟಿಐ, ಜಿಟಿಟಿಸಿ, ಕೌಶಲ ತರಬೇತಿ37. ಹಾಲು ಉತ್ಪಾದಕರ ಮಹಾಮಂಡಲ- ನಂದಿನಿ ಕ್ಷೀರಧಾರೆ, ಉತ್ಪನ್ನಗಳು38. ಮೈಸೂರು ವಿಶ್ವವಿದ್ಯಾಲಯ- 106 ವರ್ಷಗಳ ಇತಿಹಾಸ39. ಕಾವೇರಿ ನೀರಾವರಿ ನಿಗಮ- ರೈತರು ಮತ್ತು ಸಾರ್ವಜನಿಕರಿಗೆ ಆಗುವ ಅನುಕೂಲಕಗಳು40. ಸೆಸ್ಕ್-‌ ಡಿಡಿಯು ಯೋಜನೆ, ಬೆಳಕು ಯೋಜನೆ, ಪರಿವರ್ತಕ ಅಭಿಯಾನ41. ವಾರ್ತಾ ಮತ್ತು ಪ್ರಚಾರ ಇಲಾಖೆ- ಇಲಾಖೆ ಕಾರ್ಯಕ್ರಮಗಳು42. ಡಾ.ಬಾಬು ಜಗಜೀವನರಾಂ ಅಭಿವೃದ್ಧಿ ನಿಗಮ- ಲಿಡ್ಕರ್‌ ಉತ್ಪನ್ನಗಳು43. ಅಖಿಲ ಭಾರತ ವಾಕ್‌ ಮತ್ತು ಶ್ರಾವಣ ಸಂಸ್ಥೆ- ಎಲ್ಲರಿಗೂ ದಯೆ ಮತ್ತು ಪ್ರೀತಿಗಾಗಿ44. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ- ಆರ್ಥಿಕ ಹೊರಯಿಂದ ರಕ್ಷಣೆ, ನಮ್ಮ ಕ್ಲಿನಿಕ್‌45. ಸಹಕಾರ ಇಲಾಖೆ- ಸಹಕಾರ ಕ್ಷೇತ್ರದ ಯೋಜನೆಗಳು46. ಮಂಡ್ಯ ಜಿಲ್ಲೆ ಮಹಾ ಕುಂಭ ಮೇಳ- ಪುಣ್ಯ ಸ್ನಾನ ಮತ್ತು ಶ್ರೀ ಮಹದೇಶ್ವರ ಜ್ಯೋತಿ ಸ್ವೀಕಾರ47. ಪ್ರವಾಸೋದ್ಯಮ ಇಲಾಖೆ- ಚನ್ನಕೇಶವ ದೇವಾಲಯ, ಬೇಲೂರು, ಹಂಪಿ ಆನೆಲಾಯ
ಈ ಬಾರಿ 2 ಗಂಟೆ ತಡವಾಗಿ ಆರಂಭವಾಗಲಿದೆ ಜಂಬೂ ಸವಾರಿ ಮೆರವಣಿಗೆ: ಮೈಸೂರಿನಲ್ಲಿ ಹೇಗಿದೆ ದಸರಾ ಭದ್ರತೆ?

ಜಂಬೂ ಸವಾರಿಗೆ ಕ್ಷಣಗಣನೆ: ಅರಮನೆ ಸುತ್ತಲಿನ ರಸ್ತೆಗಳಲ್ಲಿ ಸಂಚಾರ ನಿರ್ಬಂಧ, ಹಳೇ ಕಟ್ಟಡಗಳ ಮೇಲೆ ನಿಂತು ವೀಕ್ಷಣೆ ನಿಷೇಧ

ಒಂದೇ ಒಂದು ಕುರಿ ಇದ್ರೂ ಕೋಟ್ಯಧಿಪತಿಗಳಾಗ್ಬೋದು! ಮಿರ ಮಿರ ಮಿಂಚುತ್ತಿರೋ ಇದರ ಬೆಲೆ ಎಷ್ಟು ಗೊತ್ತಾ?

ಸೈಬರ್​ ಅಪರಾಧಿಗಳಿಗೆ ಶಾಕ್​ ನೀಡಿದ ಸಿಬಿಐ: ಏಕಕಾಲದಲ್ಲಿ ಬೆಂಗಳೂರು ಸೇರಿದಂತೆ 105 ಕಡೆ ದಾಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + nineteen =
Remember me
