ಮೈಸೂರು:ಜಿಲ್ಲೆಯಲ್ಲಿನ ಮಹಾಮಾರಿ ಕರೊನಾ ಪರಿಸ್ಥಿತಿಯ ಬಗ್ಗೆ ಫೇಸ್​ಬುಕ್​ ಲೈವ್​ನಲ್ಲಿ ವಿವರಣೆ ನೀಡಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಗ್ರಾಮೀಣ ಭಾಗದ ಹೆಣ್ಣು ಮಕ್ಕಳ ಮೇಲೆ ಇದೇ ಸಂದರ್ಭದಲ್ಲಿ ಬೇಸರ ವ್ಯಕ್ತಪಡಿಸಿದರು.
ಮೊದಲ ಜಿಲ್ಲೆಯಲ್ಲಿನ ಕರೊನಾ ಚಿತ್ರಣವನ್ನು ರೋಹಿಣಿ ಸಿಂಧೂರಿ ಅವರು ವಿವರಿಸಿದರು. ನಗರ ಪ್ರದೇಶದಲ್ಲಿ 8,535 ಹಾಗೂ ಗ್ರಾಮೀಣ ಪ್ರದೇಶದಲ್ಲಿ 6,560 ಪ್ರಕರಣಗಳಿವೆ. ನಗರ ಪಾಲಿಕೆಯ 65 ವಾರ್ಡ್‌ನಲ್ಲೂ ಪಾಸಿಟಿವ್ ಪ್ರಕರಣಗಳಿವೆ. 24 ವಾರ್ಡ್‌ಗಳಲ್ಲಿ 100ಕ್ಕೆ ಹೆಚ್ಚು ಪ್ರಕರಣಗಳಿವೆ. ಕೆಲವೊಂದು ವಾರ್ಡ್‌ನಲ್ಲಿ 300 ರಿಂದ 400 ಪ್ರಕರಣಗಳು ಇವೆ. ಆ ವಾರ್ಡ್‌ಗಳ ಬಗ್ಗೆ ಹೆಚ್ಚಿನ ಗಮನ ಕೊಡಲಾಗಿದೆ ಎಂದು ತಿಳಿಸಿದರು.
1,560 ಗ್ರಾಮಗಳಲ್ಲಿ 343 ಗ್ರಾಮಗಳು ಕರೊನಾ ಮುಕ್ತವಾಗಿವೆ. ಎಚ್ ಡಿ ಕೋಟೆಯ ಡಿ.ಬಿ. ಕುಪ್ಪೆ ಪಂಚಾಯತಿಯಲ್ಲಿ ಒಂದು ಪ್ರಕರಣವೂ ದಾಖಲಾಗಿಲ್ಲ. ಜುಲೈ 1ರೊಳಗೆ ಮೈಸೂರು ಜಿಲ್ಲೆಯನ್ನು ಕರೊನಾ‌ ಮುಕ್ತ ಮಾಡುವ ಗುರಿ ಇದೆ. ಇದಕ್ಕಾಗಿ ಎಲ್ಲರ ಸಹಕಾರ ಬೇಕು ಎಂದು ಮನವಿ ಮಾಡಿದರು.
ಹೆಣ್ಣು ಮಕ್ಕಳ ಮೇಲೆ ಡಿಸಿ ಅಸಮಾಧಾನಗ್ರಾಮೀಣ ಪ್ರದೇಶದ ಹೆಣ್ಣು‌ ಮಕ್ಕಳು‌ ಕರೊನಾ ಇದ್ದರೂ ಹೇಳಿಕೊಳ್ಳುತ್ತಿಲ್ಲ. ಹುಷಾರಿಲ್ಲದಿದ್ದರೂ ಹೇಳಿಕೊಳ್ಳುತ್ತಿಲ್ಲ. ಇದರಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಗ್ರಾಮೀಣ ಭಾಗದಲ್ಲಿ 18 ಕೋವಿಡ್ ಸೆಂಟರ್ ಮಾಡಲಾಗಿದೆ. ಅಲ್ಲಿಗೆ ಮಹಿಳೆಯರು ಬರುತ್ತಿಲ್ಲ. ಮನೆಯಲ್ಲಿ ಅಡುಗೆ ಮಾಡಲು ಯಾರಿಲ್ಲ ಅಂತ ಕಳುಹಿಸುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಮದುವೆಗೆ ಕೂಡಿಟ್ಟ 2 ಲಕ್ಷ ರೂ. ಹಣವನ್ನು ಕರೊನಾ ನಿಯಂತ್ರಣಕ್ಕೆ‌ ನೀಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ರೋಹಿಣಿ ಸಿಂಧೂರಿ, ಈ ರೀತಿ ಯಾರು ಕರೊನಾ ನಿಯಂತ್ರಣಕ್ಕೆ ಸಹಕರಿಸುತ್ತಾರೆ ಅವರಿಗೆ ಕರೊನಾ ಹೀರೋ, ಕರೊನಾ ವಾರಿಯರ್ಸ್ ಎಂದು ಗೌರವಿಸಲಾಗುವುದು ಎಂದರು.ಇದನ್ನೂ ಓದಿ:ಮಾದರಿ ಕುಟುಂಬ: ಕೂಡಿಟ್ಟ ಮದ್ವೆ ಹಣ ಕರೊನಾ ಸೋಂಕಿತರ ಮೆಡಿಷನ್​ಗೆ ಹಸ್ತಾಂತರಿಸಿ ಸರಳ ವಿವಾಹ
ಜಿಲ್ಲೆಯಲ್ಲಿ 66 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿವೆ. 8 ಜನ ಗುಣಮುಖರಾಗಿದ್ದು, 8 ಜನ ಸಾವಿಗೀಡಾಗಿದ್ದಾರೆ. ಸರ್ಕಾರದಿಂದ ಔಷಧಿ ಬಂದಿದೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕರೊನಾಗೆ ಹೆಚ್ಚಿನ‌ ಚಿಕಿತ್ಸೆ ಪಡೆದವರು 5 ರಿಂದ 6 ಸಾವಿರ ಜನ ಇದ್ದಾರೆ. ಅವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ. ಕರೊನಾ ಮುಕ್ತವೇ ನಮ್ಮ ಗುರಿ ಆಗಿರುವುದರಿಂದ ನಮಗೆ ನಿಮ್ಮೆಲ್ಲರ ಸಹಕಾರ ಬೇಕಿದೆ ಎಂದು ರೋಹಿಣಿ ಸಿಂಧೂರಿ ಕೊನೆಯಲ್ಲಿ ಮತ್ತೊಮ್ಮೆ ಮನವಿ ಮಾಡಿದರು.(ದಿಗ್ವಿಜಯ ನ್ಯೂಸ್​)
ಮಾದರಿ ಕುಟುಂಬ: ಕೂಡಿಟ್ಟ ಮದ್ವೆ ಹಣ ಕರೊನಾ ಸೋಂಕಿತರ ಮೆಡಿಷನ್​ಗೆ ಹಸ್ತಾಂತರಿಸಿ ಸರಳ ವಿವಾಹ

ರೋಹಿಣಿ ಸಿಂಧೂರಿ ಸೇವೆಯೇ ಮೋಸದ್ದು, ರಾಜಕಾರಣಿಗಳು 5 ವರ್ಷಕ್ಕೆ ಒಂದೊಂದು ಐಎಎಸ್ ಮಾಡಿದಂತೆ…

ಸಾವಿನಲ್ಲೂ ಸುಳ್ಳು ಲೆಕ್ಕ! ನಿಮ್ಗೆ ಮನುಷ್ಯತ್ವ ಇಲ್ವಾ? ರೋಹಿಣಿ ಸಿಂಧೂರಿ ವಿರುದ್ಧ ಸಿಡಿದೆದ್ದ ಸಾ.ರಾ.ಮಹೇಶ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − one =
Remember me
