ಮೈಸೂರು:ಮನೆಯ ಹೊರಗೆ ಇಟ್ಟಿದ್ದ ಶಾಲಾ ಶೂಸ್​ ಧರಿಸಲು ಹೋದಾಗ ನಾಗರಹಾವು ಕಾಣಿಸಿಕೊಂಡು ಅಲ್ಪದಲ್ಲಿಯೇ ಭಾರೀ ಅಪಾಯದಿಂದ ಪಾರಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಹೆಬ್ಬಾಳ್ ಎರಡನೇ ಹಂತದಲ್ಲಿ ಈ ಘಟನೆ ನಡೆದಿದೆ. ನಾಗರಹಾವು ಮಕ್ಕಳ ಶೂಸ್​ ಒಳಗೆ ಅಡಗಿ ಕುಳಿತಿತ್ತು. ಎಂದಿನಂತೆ ಶಾಲೆಗೆ ತೆರಳಲು ಶೂಸ್​ ಹಾಕಿಕೊಳ್ಳಲು ಹೋದಾಗ ನಾಗರಹಾವು ಕಾಣಿಸಿಕೊಂಡಿದೆ. ಒಂದು ವೇಳೆ ಹಾವು ಕಾಣಿಸದೇ, ಶೂಸ್​ ಪರಿಶೀಲಿಸದೇ ಹಾಕಿಕೊಂಡಿದ್ದರೆ, ಪ್ರಾಣಕ್ಕೆ ಕುತ್ತು ಬರುತ್ತಿತ್ತು.
ಹಾವು ನೋಡಿ ಜಾಗೃತರಾದ ಮನೆಯವರು ತಕ್ಷಣ ಮೈಸೂರಿನ ಉರಗ ರಕ್ಷಕ ಸ್ನೇಕ್ ಶ್ಯಾಮ್​ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕಾಗಮಿಸಿದ ಸ್ನೇಕ್ ಶ್ಯಾಮ್ ಹಾವನ್ನು ರಕ್ಷಣೆ ಮಾಡಿದ್ದಾರೆ.
ಮಳೆಗಾಲದಲ್ಲಿ ಹಾವುಗಳು ಹೊರ ಬರುವ ಸಮಯ ಇದಾಗಿದೆ. ಬೆಚ್ಚನೆಯ ವಾತಾವರಣಕ್ಕಾಗಿ ಹೊರ ಬರುತ್ತವೆ. ಮನೆಯ ಮುಂಭಾಗ ಹಾವುಗಳು ಕಾಣಿಸಿಕೊಳ್ಳುತ್ತವೆ. ಮಕ್ಕಳ ಶೂಸ್​ಗಳು ಸೇರಿದಂತೆ ಹಲವು ವಸ್ತುಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಹಿನ್ನೆಲೆ ಎಚ್ಚರದಿಂದರಲೂ ಸ್ನೇಕ್ ಶ್ಯಾಮ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.(ದಿಗ್ವಿಜಯ ನ್ಯೂಸ್​)
ಮೈಸೂರು: ಮನೆಯ ಹೊರಗೆ ಇಟ್ಟಿದ್ದ ಶಾಲಾ ಶೂಸ್​ ಧರಿಸಲು ಹೋದಾಗ ನಾಗರಹಾವು ಕಾಣಿಸಿಕೊಂಡು ಅಲ್ಪದಲ್ಲಿಯೇ ಭಾರೀ ಅಪಾಯದಿಂದ ಪಾರಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.#Mysuru#SnakeShyam#SnakeinShoe#SchoolShoe#CobraSnakepic.twitter.com/wgPq95S0bW
— Vijayavani (@VVani4U)June 22, 2022

ಒಮ್ಮೆ ಒಬ್ಬ ದುಷ್ಟ ರಾಜನಿದ್ದನು… ಟ್ವೀಟ್​ ಮಾಡಿದ ಬೆನ್ನಲ್ಲೇ ಡಿಲೀಟ್​ ಮಾಡಿದ್ದೇಕೆ ಅಮೃತಾ ಫಡ್ನವೀಸ್?​

ಜೇಬಿನಿಂದ ಕೇವಲ 50 ರೂಪಾಯಿ ತೆಗೆದಿದ್ದಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿದ ಯುವಕ

ಅಗ್ನಿಪಥ ವಾಪಸಿಲ್ಲ, ಹಿಂಸೆ ಸಹಿಸಲ್ಲ: ಅಜಿತ್ ದೋವಲ್ ಖಡಕ್ ಎಚ್ಚರಿಕೆ | ಮುಂದುವರಿದ ಪ್ರತಿಭಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
