ಮೈಸೂರು:ಮರಣೋತ್ತರ ಕರ್ನಾಟಕ ರತ್ನ ಗೌರವದ ಬೆನ್ನಲ್ಲೇ ದಿವಂಗತ ನಟ ಪುನೀತ್ ರಾಜ್‍ಕುಮಾರ್‌ ಅವರಿಗೆ ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಘೋಷಣೆಯಾಗಿದ್ದು, ಚಿತ್ರರಂಗ ಮಾತ್ರವಲ್ಲದೆ, ಸಮಾಜಮುಖಿ ಕೆಲಸಗಳನ್ನು ಮಾಡಿ ಅಕಾಲಿಕವಾಗಿ ಮರೆಯಾದ ಅಪ್ಪುಗೆ ಮತ್ತೊಂದು ಗೌರವ ಸಿಕ್ಕಂತಾಗಿದೆ.
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಹೇಮಂತ್ ಕುಮಾರ್​ ಅವರು ಪುನೀತ್​ ಅವರಿಗೆ ಗೌರವ ಡಾಕ್ಟರೇಟ್​ ಅನ್ನು ಘೋಷಣೆ ಮಾಡಿದ್ದಾರೆ.‌ ಮೈಸೂರಿನ ಕ್ರಾಫರ್ಡ್​ ಭವನದಲ್ಲಿ ಗೌರವ ಡಾಕ್ಟರೇಟ್​ ಅನ್ನು ರಾಜ್ಯಪಾಲರು ಪ್ರದಾನ ಮಾಡಲಿದ್ದಾರೆ.‌ಇತ್ತೀಚೆಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರನ್ನು ಕುಲಪತಿಗಳ ನಿಯೋಗ ಭೇಟಿ ಮಾಡಿ ಗೌರವ ಡಾಕ್ಟರೇಟ್​ ಬಗ್ಗೆ ಚರ್ಚಿಸಿತ್ತು. ಶತಮಾನೋತ್ಸವ ಪೂರೈಸಿರುವ ವಿವಿಯಿಂದ ಡಾಕ್ಟರೇಟ್ ಸ್ವೀಕರಿಸಲು ಅಶ್ವಿನಿ ಅವರು ಒಪ್ಪಿದ್ದಾರೆ. ಶತಮಾನೋತ್ಸವ ಘಟಿಕೋತ್ಸವದಲ್ಲಿ ದಿವಂಗತ ನಟ ಪುನೀತ್ ರಾಜ್​​ಕುಮಾರ್‌ಗೆ ಮರಣೋತ್ತರ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಶಹನಾಯಿ ವಾದಕ ಎಂ.ಮಹದೇವಸ್ವಾಮಿ, ವಿಜ್ಞಾನಿ ಅತ್ರಿ ಸೇರಿ ಮೂವರಿಗೆ ಗೌರವ ಡಾಕ್ಟರೇಟ್ ಘೋಷಣೆಯಾಗಿದೆ.(ದಿಗ್ವಿಜಯ ನ್ಯೂಸ್​)
ಒಂದೇ ದಿನದಲ್ಲಿ ಪೆಟ್ರೋಲ್​ 77, ಡೀಸೆಲ್​ 55 ರೂ. ಹೆಚ್ಚಳ; ಭಾರತೀಯರಿಗೂ ಕಾದಿದೆ ತೈಲಾಘಾತ!

ಮಂಡ್ಯದಲ್ಲಿ ನಿಖಿಲ್​​ ಸೋಲಿಗೆ ಅವರ ದೊಡ್ಡಪ್ಪನೇ ಕಾರಣ: ಹೊಸ ಬಾಂಬ್​ ಸಿಡಿಸಿದ ಸಚಿವ ನಾರಾಯಣ ಗೌಡ

ರಹಸ್ಯವಾಗಿ ಮದ್ವೆಯಾದ ನಯನತಾರಾ-ವಿಘ್ನೇಶ್ ಶಿವನ್​: ದೇವಸ್ಥಾನದಲ್ಲೇ ಹೊರಬಿತ್ತು ಮಹತ್ವದ ಸುಳಿವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 10 =
Remember me
