ಮೈಸೂರು:ಕಳೆದ ಕೆಲವು ದಿನಗಳಿಂದ ನಟಿ ಪವಿತ್ರಾ ಲೋಕೇಶ್​ ಮತ್ತು ನಟ ನರೇಶ್​ ನಡುವಿನ ಸಂಬಂಧದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದೆ. ಅಲ್ಲದೆ, ಈ ವಿಚಾರವಾಗಿ ಬಹು ಚರ್ಚೆಯು ನಡೆಯುತ್ತಿದೆ.
ನರೇಶ್​ ಮೂರನೇ ಪತ್ನಿ ಮಾಧ್ಯಮಗಳ ಮುಂದೆ ಬಂದು ಆರೋಪಗಳನ್ನು ಮಾಡಿದ್ದು, ಅದಕ್ಕೆ ಪ್ರತಿಯಾಗಿ ನರೇಶ್​ ಮತ್ತು ಪವಿತ್ರಾ ಲೋಕೇಶ್​ ಸ್ಪಷ್ಟನೆಗಳನ್ನು ನೀಡಿದ್ದಾರೆ. ಇದೆಲ್ಲದರ ನಡುವೆ ಇದೀಗ ಮೈಸೂರಿನ ಹೋಟೆಲ್​ ಒಂದರ ಬಳಿ ಹೈಡ್ರಾಮವೊಂದು ನಡೆದಿದೆ.
ಹೋಟೆಲ್​ ರೂಮಿನಿಂದ ನರೇಶ್ ಮತ್ತು ಪವಿತ್ರಾ ಲೋಕೇಶ್, ಪೊಲೀಸ್ ಭದ್ರತೆಯಲ್ಲಿ ಹೊರಟರು. ಈ ವೇಳೆ ರಮ್ಯಾ ಅವರಿಬ್ಬರನ್ನು ತಡೆಯಲು ಪ್ರಯತ್ನಿಸಿದರು. ಅಲ್ಲದೆ, ಚಪ್ಪಲಿ ಎತ್ತಿಕೊಂಡು ಹಲ್ಲೆ ಮಾಡಲು ಯತ್ನಿಸಿದರು. ಈ ವೇಳೆ ಪೊಲೀಸರು ಮತ್ತು ನರೇಶ್​ ಅವರ ಆಪ್ತ ರಕ್ಷಕರು ರಮ್ಯಾರನ್ನು ತಡೆದರು.
ಇದೇ ಸಂದರ್ಭದಲ್ಲಿ ರಮ್ಯಾ, ಪವಿತ್ರಾ ಲೋಕೇಶ್ ವಿರುದ್ಧ ಮನಬಂದಂತೆ ರಮ್ಯಾ ವಾಗ್ದಾಳಿ ನಡೆಸಿದರು. ಆದರೆ, ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ಹೋಟೆಲ್‌ನಿಂದ ಹೊರ ಹೋದರು.
ಇಷ್ಟು ದಿನ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಹೈಡ್ರಾಮ ಇದೀಗ ಮೈಸೂರಿಗೆ ಸ್ಥಳಾಂತರವಾಗಿದೆ. ನಿನ್ನೆ ರಾತ್ರಿ ಮೈಸೂರಿಗೆ ಆಗಮಿಸಿದ ನರೇಶ್​ ಮತ್ತು ಪವಿತ್ರಾ ಲೋಕೇಶ್​, ವಿವಿ ಪುರಂ ಠಾಣೆಗೆ ತೆರಳಿ ಒಂದು ದೂರನ್ನು ಸಲ್ಲಿಸಿದ್ದಾರೆ. ಆದರೆ, ಯಾರ ವಿರುದ್ಧ ದೂರು ನೀಡಿದರು ಎಂಬುದರ ಬಗ್ಗೆ ಮಾಹಿತಿ ಇಲ್ಲ.
ದೂರು ದಾಖಲಾದ ಬಳಿಕ ಇಬ್ಬರು ನೇರವಾಗಿ ಹೋಟೆಲ್​ ಒಂದಕ್ಕೆ ತೆರಳಿ ಒಂದೇ ರೂಮಿನಲ್ಲಿ ತಂಗುತ್ತಾರೆ. ಈ ವಿಚಾರ ಗೊತ್ತಾಗಿ ಮೂರನೇ ಪತ್ನಿ ರಮ್ಯಾ ರಘುಪತಿ ಅವರು ಅದೇ ಹೋಟೆಲ್​ನಲ್ಲಿ ರೂಮ್​ ಬುಕ್​ ಮಾಡಿ, ನರೇಶ್​ ಮತ್ತು ಪವಿತ್ರಾ ಲೋಕೇಶ್​ ಇದ್ದ ರೂಮಿನ ಮುಂಭಾಗ ಧರಣಿ ಕುಳಿತು ಇಡೀ ರಾತ್ರಿ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಬೆಳಗ್ಗೆ 8 ಗಂಟೆ ಸಮಯದಲ್ಲಿ ನರೇಶ್​ ಮತ್ತು ಪವಿತ್ರಾ ಲೋಕೇಶ್​ ಇಬ್ಬರು ರೂಮಿನಿಂದ ಹೊರಗಡೆ ಬಂದಾಗ ಅಲ್ಲಿಯೇ ಇದ್ದ ರಮ್ಯಾ, ಇಬ್ಬರ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಾರೆ. ಚಪ್ಪಲಿ ತೆಗೆದುಕೊಂಡು ಬಾರಿಸಲು ಯತ್ನಿಸುತ್ತಾರೆ. ಆ ಸಮಯದಲ್ಲಿ ಪೊಲೀಸರು ಮತ್ತು ಅಂಗ ರಕ್ಷಕರು ಇಬ್ಬರಿಗೂ ರಕ್ಷಣೆ ಒದಗಿಸುತ್ತಾರೆ. ಬಳಿಕ ನರೇಶ್​ ಮತ್ತು ಪವಿತ್ರಾ ಲೋಕೇಶ್​ ಒಂದೇ ಕಾರಿನಲ್ಲಿ ಹೋಟೆಲ್​ನಿಂದ ತೆರಳುತ್ತಾರೆ.
ಈ ಘಟನೆ ಬಗ್ಗೆ ಮಾತನಾಡಿರುವ ನರೇಶ್​ ಮೂರನೇ ಪತ್ನಿ ರಮ್ಯಾ, ಇಬ್ಬರು ಮೈಸೂರಿನ ಹೋಟೆಲ್​ನಲ್ಲಿ ತಂಗಿದ್ದಾರೆ ಎಂನ ಸುಳಿವುಬ ದೊರೆತ ಕೂಡಲೇ ಬೆಂಗಳೂರಿನಿಂದ ರಾತ್ರಿ ಒಂದು ಗಂಟೆಗೆ ಹೊರಟೆ. ಹೋಟೆಲ್​ಗೆ ಮಧ್ಯರಾತ್ರಿ ಬಂದು ಬೆಳಗ್ಗೆ ವರೆಗೆ ಕಾದೆ. ರಾತ್ರಿ ಗಲಾಟೆ ಮಾಡುವುದು ಸರಿಯಲ್ಲ ಅಂತಾ ಬೆಳಗ್ಗೆವರೆಗೂ ಕಾದೆ. ಮುಂಜಾನೆ ಆದ ಬಳಿಕ ಬಾಗಿಲು ಬಡಿದು ಗಲಾಟೆ ಮಾಡಿದೆ. ಬೆಸ್ಟ್​ ಫ್ರೆಂಡ್​ ಅಂದುಕೊಂಡು ರಾತ್ರಿಯೆಲ್ಲ ಒಂದೇ ರೂಮಿನಲ್ಲಿದ್ದರೆ, ಏನು ಅರ್ಥ? ಮುಂದೆ ಕಾನೂನಿನ ಮೂಲಕ ಎದುರಿಸುತ್ತೇನೆ ಎಂದು ಹೇಳಿದರು.
ನನಗೆ ಡಿವೋರ್ಸ್​ ನೋಟಿಸ್​ ಕಳುಹಿಸಿದ್ದಾರೆ. ನಾನು ಕಾನೂನಿನ ಮೂಲಕ ಉತ್ತರಿಸುತ್ತೇನೆ. ಮದುವೆಯಾದ ಒಂದೂವರೆ ವರ್ಷ ಚೆನ್ನಾಗಿದ್ದೆವು. ಸಂಸಾರ ಅಂದ ಮೇಲೆ ಏರು-ಪೇರು ಇದ್ದೇ ಇರುತ್ತದೆ. ಎಲ್ಲವು ಚೆನ್ನಾಗಿತ್ತು. ಯಾವಾಗ ಮೂರನೇ ವ್ಯಕ್ತಿ ನಮ್ಮ ನಡುವೆ ಬಂದರೋ ಆಗ ನಮ್ಮ ಸಂಬಂಧದ ನಡುವೆ ಬಿರುಕು ಮೂಡಿತು. ಅವರ ಮೇಲೆ ನಾನು ಮಾಡಿರುವ ಆರೋಪಿಗಳನೆಲ್ಲ ನಾನು ಸಾಬೀತುಪಡಿಸಿದ್ದೇನೆ ಎಂದು ರಮ್ಯಾ ಕಣ್ಣೀರಿಡುತ್ತಾ ಹೇಳಿದರು.(ದಿಗ್ವಿಜಯ ನ್ಯೂಸ್​)
ರಜೆಯೂ ಇಲ್ಲ, ಭತ್ಯೆಯೂ ಸಿಗ್ತಿಲ್ಲ!; ಪೊಲೀಸ್ ಕಾನ್​ಸ್ಟೇಬಲ್​ಗಳಿಗೆ ಗೋಳು, ಠಾಣಾಧಿಕಾರಿಗೆ ಇಕ್ಕಟ್ಟು..

ಮಾಜಿ ಪತ್ನಿ ಎರಡನೇ ಮದ್ವೆಯಾದ ಬೆನ್ನಲ್ಲೇ ತಾನೂ ಮತ್ತೊಂದು ವಿವಾಹಕ್ಕೆ ರೆಡಿಯಾದ IAS​ ಅಧಿಕಾರಿ

ಗಾಲ್ಫ್​ ಆಡುವಾಗ ಬೆನ್ನ ಹಿಂದೆಯೇ ಹೊಂಚು ಹಾಕಿ ಬರುತ್ತಿರೋ ಮೊಸಳೆ: ಮುಂದೇನಾಯ್ತು ನೀವೇ ನೋಡಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:13 − 1 =
Remember me
