ಬೆಂಗಳೂರು:ವರ್ಷದಿಂದ ವರ್ಷಕ್ಕೆ ಕನ್ನಡ ಮಾಧ್ಯಮದಲ್ಲಿ ಕಲಿಯುವವರ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ರಾಷ್ಟ್ರೀಯ ಸಾಧನ ಸಮೀಕ್ಷೆ ವರದಿ ಹೇಳಿದ್ದು, ಈ ಬಗ್ಗೆ ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಕೂ ನಲ್ಲಿ #ಕನ್ನಡಮಾಧ್ಯಮಕಲಿಕೆ ಎಂಬ ಹ್ಯಾಷ್ ಟ್ಯಾಗ್ ಅಡಿ ತಮ್ಮ ಆತಂಕವನ್ನು ಬಿಚ್ಚಿಟ್ಟಿದ್ದಾರೆ.
‘ಉದ್ಯೋಗದ ಕೊರತೆ, ಕನ್ನಡ ಅನ್ನದ ಭಾಷೆಯಾಗಿಲ್ಲ ಎನ್ನುವ ಕೂಗು. ಕನ್ನಡದಲ್ಲಿ ಅನ್ನ ಉಣ್ಣುವ ಜನರೇ ಇಲ್ಲದಿರುವ ಪ್ರಸಂಗ ಬರುವ ಮುಂಚೆ ಕನ್ನಡದಿಂದ ಹಿಡಿದು ಬಡಿದಾಡಿ ತಿನ್ನಲು ಸಜ್ಜಾಗಿರುವ ಕ್ಷೇತ್ರಕ್ಕೆ ಸರ್ಕಾರ, ಉದ್ಯಮ ನೆರವಾಗಬೇಕು ಎಂದು ಸಂಧ್ಯಾ ಎನ್ನುವವರು ಹೇಳಿದ್ದಾರೆ.
–Sadhya (@Completeinnocent)25 June 2022

ಕನ್ನಡ ಮಾಧ್ಯಮದಲ್ಲಿ ಕಲಿಸದೇ ಇರಲು ಕಾರಣಗಳಿವೆ. ಬಹುಮುಖ್ಯವಾದದ್ದು ಮಗು ಇನ್ನೂ ಚಡ್ಡಿ ಹಾಕುವಾಗಲೇ ಮುಂದೆ ಕಾಲೇಜಿನಲ್ಲಿ ಇಂಗ್ಲಿಷ್ ಸಮಸ್ಯೆ ಆಗಬಾರದು ಎನ್ನುವ ಗಾಬರಿ. ಎರಡನೆಯದ್ದು ಪ್ರತಿಷ್ಠೆಗಾಗಿ. ಇಂಗ್ಲಿಷ್​ನಲ್ಲಿ ಅದೇನು ಸಿಕ್ಕತ್ತೋ ಗೊತ್ತಿಲ್ಲ. ಆದ್ರೆ ಕನ್ನಡ ಕಲಿಯದೆ ಮಿಕ್ಕೆಲ್ಲಾ ಭಾಷೆ ಅಚ್ಚುಕಟ್ಟಾಗಿ ಬರಲು ಸಾಧ್ಯವೇ ಇಲ್ಲ ನಮ್ಮ ವಾತಾವರಣಕ್ಕೆ ಎಂದು ವಾಹಿನಿ ಮಂಜರೇಕರ್ ಹೇಳಿದ್ದಾರೆ.
–Vahini Manjrekar (@HalfMen)25 June 2022

ಕನ್ನಡದ ಅಸ್ಮಿತೆ, ಕನ್ನಡಿಗರೇ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮಕ್ಕೆ ತಳ್ಳಿ ಕನ್ನಡ ಕಲಿಕೆಯಲ್ಲಿ ಹಿಂದೇಟು ಹಾಕುವಂತೆ ಮಾಡುತ್ತಿದ್ದಾರೆ. ಇತ್ತ ಕನ್ನಡವನ್ನೂ ಸರಿಯಾಗಿ ಕಲಿಯದೆ ಇಂಗ್ಲಿಷ್​ ಕಲಿಕೆಗೂ ಒಗ್ಗಲಾರದೆ ಮಕ್ಕಳು ಪರಿತಪಿಸುವುದು ಯಾರಿಗೂ ತಿಳಿಯದ ವಿಷಯವಲ್ಲ ಎಂದು ದಿವ್ಯಾ ರಾಮಕೃಷ್ಣ ಎನ್ನುವವರು ಬರೆದುಕೊಂಡಿದ್ದಾರೆ.
–ದಿವ್ಯಾ ರಾಮಕೃಷ್ಣ (@divyaakrishna)25 June 2022

ಕಡ್ಡಾಯವಾಗದಿದ್ದರೆ ಕನ್ನಡಿಗರ ಮಕ್ಕಳು ಕನ್ನಡ ಹೊರತುಪಡಿಸಿ ಮತ್ತೆಲ್ಲ ಭಾಷೆಗಳನ್ನು ಕಲಿತು ಕನ್ನಡವನ್ನೇ ಮರೆಯುವ ಪರಿಸ್ಥತಿ ಎದುರಾಗಲಿದೆ ಎಂದು ಚಂದ್ರಿಕಾ ಹೆಗಡೆ ಅವರು ಭವಿಷ್ಯದ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ.
–ಚಂದ್ರಿಕಾ ಹೆಗಡೆ (@chandrikahegde)25 June 2022

ಸರ್ಕಾರಿ ಶಾಲೆಗಳು ಉತ್ತಮ ವಿದ್ಯಾರ್ಥಿಗಳನ್ನು ತಯಾರು ಮಾಡುವುದರಲ್ಲಿ ಸಫಲರಾಗಿವೆ. ಆದರೆ, ಕಾಲಮಾನದಲ್ಲಿ ತಮ್ಮನ್ನು ತಾವು ಉಳಿಸಿಕೊಳ್ಳಲು ವಿಫಲವಾಗಿವೆ. ಪ್ರೈವೇಟ್ ಶಾಲೆಗಳು ಕನ್ನಡ ಮಾಧ್ಯಮದಲ್ಲಿ ಬ್ಯುಸಿನೆಸ್ ಮಾಡಲು ಮುಂದಾಗುತ್ತವಾ? ಮಠ ಮಾನ್ಯಗಳು ಮಾಡಬಹುದು, ಆದರೆ, ಅವುಗಳು ಮಾಡುವುದು ಬ್ಯುಸಿನೆಸ್ ಅಲ್ಲವಲ್ಲ..ಆ ಕಾರಣಕ್ಕೆ ಎಂದು ವಿರೇಶ್ ಕೂ ಮಾಡಿದ್ದಾರೆ.
–Myself Mr.Kannadiga (@VeereshBM)25 June 2022

ಸಾಲುಮರದ ತಿಮ್ಮಕ್ಕಗೆ ಬಿಡಿಎ ನಿವೇಶನ ಕ್ರಯ ಪತ್ರ ಹಸ್ತಾಂತರಿಸಿದ ಸಿಎಂ ಬಸವರಾಜ ಬೊಮ್ಮಾಯಿ

ಲೋಕೋಪಯೋಗಿಗೆ ಮುಖ್ಯ ಇಂಜಿನಿಯರ್ಸ್ ಅತಿವೃಷ್ಟಿ!; ಮತ್ತಷ್ಟು ಹೊರೆ ಹೊರಿಸಲು ಸದ್ದಿಲ್ಲದೇ ಸರ್ಕಾರ ತಯಾರಿ..

ಕಮ್ಯೂನಿಷ್ಟರಾಗಿ ಪರಿಷ್ಕರಣೆ ಮಾಡಿಲ್ಲ: ಸರ್ಕಾರಕ್ಕೆ ಬರಗೂರು ಉತ್ತರ; ಸಾಹಿತಿಗಳನ್ನು ಮಾತುಕತೆಗೆ ಆಹ್ವಾನಿಸಲು ಆಗ್ರಹ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − three =
Remember me
