ನೆಲಮಂಗಲ:ಪತಿ ಮತ್ತು ಅತ್ತೆಯ ಕಿರುಕುಳಕ್ಕೆ ಬೇಸತ್ತ ಗೃಹಿಣಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನೆಲಮಂಗಲದ ವಿವರ್ಸ್ ಕಾಲನಿಯಲ್ಲಿ ನಡೆದಿದೆ.
ತುಮಕೂರಿನ ಕುಣಿಗಲ್ ಮೂಲದ ಪೂಜಾ (22) ಮೃತ ದುರ್ದೈವಿ. ಬಾಡಿಗೆ ಮನೆಯಲ್ಲಿ ಹಾಲು ಉಕ್ಕಿಸಿದ ಕೆಲವೇ ಕ್ಷಣಗಳಲ್ಲಿ ಪೂಜಾ ನೇಣಿಗೆ ಶರಣಾಗಿದ್ದಾಳೆ. ಎರಡೂವರೆ ವರ್ಷದ ಹಿಂದೆ ಮಂಜುನಾಥ್​ನೊಂದಿಗೆ ಪೂಜಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಳು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ, ದಿನ ಕಳೆದಂತೆ ಪತಿ ಮಂಜುನಾಥ್​ ಮತ್ತು ಅತ್ತೆ ಶ್ಯಾಮಲಾರಿಂದ ಕಿರುಕುಳ ಶುರುವಾಗಲು ಆರಂಭವಾಯಿತು.

ಮದುವೆ ಬಳಿಕ ಮೊದಲ ಮಗು ಗರ್ಭಪಾತವಾಗಿತ್ತು. ಎರಡನೇ ಮಗು ಹುಟ್ಟಿದ 6 ತಿಂಗಳಲ್ಲೇ ಅದು ಮೃತಪಟ್ಟಿತು. ಇದೇ ನೆಪದಲ್ಲಿ ಪೂಜಾಳ ಅತ್ತೆ, ಆಕೆಯನ್ನು ಪಾಪದವಳು, ಅನಿಷ್ಟವೆಂದು ದಿನನಿತ್ಯ ನಿಂದಿಸುತ್ತಿದ್ದರು. ಇದರಿಂದ ಪೂಜಾ ಮಾನಸಿಕವಾಗಿ ಕುಗ್ಗಿದ್ದರು.
ಇದೀಗ ಪ್ರಕರಣ ದಾಖಲಾಗಿದ್ದು, ಆರೋಪಿ ಪತಿ ಮಂಜುನಾಥ್ ಮತ್ತು ಅತ್ತೆ ಶ್ಯಾಮಲಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)

ಅನಂತರಾಜು ಆತ್ಮಹತ್ಯೆ ಕೇಸ್​ಗೆ ಮತ್ತೊಂದು ತಿರುವು: ಪೊಲೀಸರಿಗೆ ಡೆತ್​ನೋಟ್ ತಂದು ಕೊಟ್ಟ ಸುಮಾ

ಭಾವಿ ಪತಿಯನ್ನೇ ಬಂಧಿಸಿ ಲೇಡಿ ಸಿಂಗಂ ಎನಿಸಿಕೊಂಡಿದ್ದ ಪೊಲೀಸ್​ ಅಧಿಕಾರಿಯ ಅಸಲಿ ಮುಖ ಬಯಲು!

ಕಾರ್ಖಾನೆಯಲ್ಲಿ ಭೀಕರ ಸ್ಫೋಟ, 13 ಕಾರ್ಮಿಕರ ಸಾವು: ರಾಷ್ಟ್ರಪತಿ, ಪ್ರಧಾನಿಯಿಂದ ಸಂತಾಪ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × five =
Remember me
